ಬೀಜಿಂಗ್: ಅಣ್ವಸ್ತ್ರ ಸರಬರಾಜು ಸಂಘದ (ಎನ್ ಎಸ್ ಜಿ) ಸದಸ್ಯತ್ವಕ್ಕೆ ಭಾರತದ ಅರ್ಜಿಯ ಬಗ್ಗೆ ತನ್ನ ನಿಲುವು ಇನ್ನು ಬದಲಾಗಿಲ್ಲ ಎಂದು ಸೋಮವಾರ ಚೈನಾ ಪುನರುಚ್ಛರಿಸಿದ್ದು, ಬರ್ನ್ ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಸರ್ವ ಸದಸ್ಯ ಸಭೆಯಲ್ಲಿ ನವದೆಹಲಿಯ ಮನವಿಗೆ ಮತ್ತೆ ಅಡ್ಡಿಪಡಸಲು ಮುಂದಾಗಿರುವ ಮುನ್ಸೂಚನೆ ನೀಡಿದೆ.
"ಎನ್ ಎಸ್ ಜಿ ಯಲ್ಲಿ ಅಣ್ವಸ್ತ್ರ ನಿಷೇಧ ಕಾಯ್ದೆ (ಎನ್ ಪಿ ಟಿ) ಒಪ್ಪಿಕೊಳ್ಳದ ಸದ್ಯಸ್ಯರು ಭಾಗವಹಿಸುವುದರ ಬಗ್ಗೆ ಚೈನಾ ನಿಲುವುದು ಬದಲಾಗಿಲ್ಲ" ಎಂದು ಚೈನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುಆ ಚುಂಯಿಂಗ್ ಸೋಮವಾರ ಹೇಳಿದ್ದಾರೆ.
ವಿಶ್ವದ ಅಣ್ವಸ್ತ್ರ ಮಾರಾಟವನ್ನು ನಿಯಂತ್ರಿಸುವ ಎನ್ ಎಸ್ ಜಿ ಸದಸ್ಯತ್ವ ನೀಡುವ ಭಾರತದ ಮನವಿಗೆ ಚೈನಾ ಮೊದಲಿನಿಂದಲೂ ಅಡ್ಡಗಾಲು ಹಾಕುತ್ತಾ ಬಂದಿದೆ.