ಬಾದಾಮಿ ಗುಹಾಲಯ 
ಪ್ರವಾಸ-ವಾಹನ

ಭವ್ಯ ಬಾದಾಮಿ

ಇತಿಹಾಸ ಪ್ರಸಿದ್ಧ ಬಾದಾಮಿಗೆ ಬಂದವರು ಅಲ್ಲಿನ ಕಲಾ ಚೆಲುವ ನೋಡಿ ಮರುಳಾಗದೆ...

ಇತಿಹಾಸ ಪ್ರಸಿದ್ಧ ಬಾದಾಮಿಗೆ ಬಂದವರು ಅಲ್ಲಿನ ಕಲಾ ಚೆಲುವ ನೋಡಿ ಮರುಳಾಗದೆ ಇರಲಾರರು. ಎತ್ತರದ ಬೆಟ್ಟದೊಳಗೆ ಕೊರೆದು ನಿರ್ಮಿಸಿದ ಇಲ್ಲಿನ ಗುಹೆಗಳು ಅತ್ಯುತ್ತಮ ತಾಂತ್ರಿಕ ಜ್ಞಾನದ ಪ್ರತೀಕಗಳಾಗಿದ್ದು ವಿಶ್ವದ ಸಹಸ್ರಾರು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಗುಹಾಲಯಗಳಷ್ಟೇ ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ ಕೆತ್ತನೆ ಇರದ, ಸ್ವಾಭಾವಿಕವಾಗಿಯೇ ಸುಂದರವಾಗಿ ಕಾಣುವ ಭವ್ಯ ಬಂಡೆಗಳು. ನೋಡಲು ಜಡವಸ್ತುಗಳಾದರೂ ಇವು ಚೈತನ್ಯದಾಯಕ.

ಬೇರೆ ಬೇರೆ ಕೋನದಿಂದ ಕಣ್ಣುಹಾಯಿಸಿದರೆ ಭಿನ್ನ. ವಿಸ್ಮಯವಾಗಿ ಕಾಣುವ ಈ ಬಂಡೆಗಳು ಹತ್ತಿರ ಬಂದು ನೋಡಿದವರಿಗೆ ಭೀತಿ ತರಿಸುತ್ತವೆ. ಅದೆಷ್ಟೋ ವರ್ಷಗಳಿಂದ ನಿಸರ್ಗದ ಪ್ರಕೋಪಗಳನ್ನು ಎದುರಿಸಿದ್ದರೂ ಒಂದಿಂಚೂ ಅಲುಗಾಡದೆ ನೆಟ್ಟಗೆ ನಿಂತಿವೆ. ಶಾಶ್ವತ ನಿಲುವಿನಿಂದ ಸರ್ವಕಾಲಕ್ಕೂ ಸುಂದರವಾಗಿ ಕಾಣುತ್ತಿವೆ.

ಎಷ್ಟೋ ರಾಜರು ಸೈನಿಕರ ನೆರವಿನಿಂದ ಕೋಟೆ ಕಟ್ಟಿಸಿದರೆ ಬಾದಾಮಿಗೆ ನಿಸರ್ಗವೇ ಕೋಟೆ ಕಟ್ಟಿದೆ. ಚಾಲುಕ್ಯರು ಈ ಸ್ಥಳವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಸೂರ್ಯೋದಯ ಮತ್ತು ಸೂರ್ಯಾಸ್ತದಲ್ಲಿನ ಬಂಗಾರ ಬಣ್ಣದ ಬಿಸಿಲಿಗೆ ರಂಗಾಗಿ ಕಾಣುಕವ ದೃಶ್ಯ ಅದ್ಭುತ. ಈ ಬಂಡೆಗಳನ್ನೇರುವುದಂತೂ ಕಷ್ಟದಾಯಕ. ಅಲ್ಲಲ್ಲಿರುವ ಚಿಕ್ಕ ಚಿಕ್ಕ ಮೆಟ್ಟಿಲುಗಳನ್ನೇರುತ್ತ ಮೇಲೆಕ್ಕ ಹೋದರೆ ವಿಶಾಲ ದಿಗಂತ, ಇಡೀ ಊರಿನ ಅಂದದ ದೃಶ್ಯ ನೋಡಿ ಆನಂದಿಸಬಹುದು.

ಬಾದಾಮಿಯ ನಿಗೂಢ ಸೌಂದರ್ಯ ನೋಡಲು ಅವಶ್ಯ ಬನ್ನಿ.

-ಎ.ಎಸ್. ಹೂಲಗೇರಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT