ಪ್ರವಾಸ-ವಾಹನ

ಟಾಟಾ ಬೋಲ್ಟ್

Srinivasamurthy VN

ಜೆಸ್ಟ್ ಮೂಲಕ ತನ್ನ ಕಾರುಗಳಿಗೆ ಹೊಸ ಸ್ವರೂಪ ನೀಡಿದ್ದ ಟಾಟಾ ಕಂಪನಿ, ಈಗ ಬೋಲ್ಟ್ ಮೂಲಕ ಇನ್ನೊಂದು ಹೆಜ್ಜೆ ಮುಂದಿಡಲು ಸಿದ್ಧವಾಗಿದೆ. ಜ.22ರಂದು ಈ ಕಾರು ಬಿಡುಗಡೆಯಾಗಲಿದೆ.

ಟಾಟಾ ಕಾರುಗಳ ಹೊಸ ವಿನ್ಯಾಸ ಶೈಲಿಯಲ್ಲೂ ಅಳವಡಿಸಲಾಗಿದ್ದು, ಕಾರು ಆಕರ್ಷಕವಾಗಿದೆ. ನೋಡಲು ಆಕರ್ಷಕವಾಗಿರುವುದರ ಜತೆಗೆ ಸಾಕಷ್ಟು ಆಧುನಿಕ ಸೌಲಭ್ಯಗಳನ್ನು ಹೊಂದಿರುವುದು ವಿಶೇಷ. ನೇವಿಗೇಷನ್ ಸಿಸ್ಟಂ, ಹರ್ಮನ್ ಮ್ಯೂಸಿಕ್ ಸಿಸ್ಟಂ, ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಪೆಟ್ರೋಲ್ ಎಂಜಿನ್ ನಲ್ಲಿ ಇಕೋ, ಸಿಟಿ, ಸ್ಫೋಟ್ಸ್ ಡ್ರೈವ್ ಆಯ್ಕೆಗಳು ಈ ಕಾರಿನಲ್ಲಿ ಲಭ್ಯವಿದೆ.

ಸ್ಥಳಾವಕಾಶದ ವಿಷಯದಲ್ಲಿ ಟಾಟಾ ಕಾರುಗಳನ್ನು ಮೀರಿಸುವವರು ಯಾರೂ ಇಲ್ಲ. ಇದು ಬೋಲ್ಟ್‌ಗೂ ಅನ್ವಯವಾಗುತ್ತದೆ. ಟಾಟಾ ವಿಸ್ತಾದ ಒಳಗೂ ಸಾಕಷ್ಟು ಸ್ಥಳವಕಾಶವಿತ್ತು. ಅದನ್ನೇ ಬೋಲ್ಟ್‌ನಲ್ಲೂ ಕಾಯ್ದುಕೊಳ್ಳಲಾಗಿದೆ. ಹೀಗಾಗಿ ಹೆಡ್‌ರೂ ಮತ್ತು ಲೆಗ್ ರೂಂಗೆ ಕೊರತೆಯಿಲ್ಲ. ಹಿಂಬದಿ ಸೀಟಿನಲ್ಲಿ 3 ಮಂದಿ ಆರಾಮವಾಗಿ ಕುಳಿತುಕೊಳ್ಳಬಹುದು.

2010 ಲೀಟರ್ ಡಿಕ್ಕಿ ಅವಕಾಶವಿದೆ. ಹೆಚ್ಚು ಸರಂಜಾಮುಗಳಿದ್ದರೆ ಹಿಂಬದಿ ಸೀಟುಗಳನ್ನು ಮಡಚುವ ಅವಕಾಶ ಇದ್ದೇ ಇದೆ. ಈ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ಗಳಲ್ಲಿ ಲಭ್ಯವಿರಲಿದೆ. ಬಿಡುಗಡೆ ನಂತರ ದರದ ಮಾಹಿತಿಗಳು ಲಭ್ಯವಾಗಲಿವೆ. ಟಾಟಾ ಜೆಸ್ಟ್ ಮಾರಾಟದಲ್ಲಿ ತನ್ನ ವಿಭಾಗದ ಇತರ ಕಾರುಗಳನ್ನು ಹಿಂದಿಕ್ಕಿದ್ದು ಇತಿಹಾಸ. ಬೋಲ್ಟ್‌ನಲ್ಲೂ ಟಾಟಾ ಸಂಸ್ಥೆ ಅದೇ ನಿರೀಕ್ಷೆ ಇರಿಸಿಕೊಂಡಿದೆ.

SCROLL FOR NEXT