ನವದೆಹಲಿ: ಗೂಗಲ್ ಚಾಲಕ ರಹಿತ ಕಾರು ಸುದ್ದಿ ಮಾಡುತ್ತಿರುವಾಗಲೇ ಭಾರತದಲ್ಲಿ ಚಾಲಕ ಕಾರು ನಿರ್ಮಾಣಕ್ಕೆ ಟಾಟಾ ಮೋಟಾರ್ಸ್ ಯೋಜನೆ ರೂಪಿಸಿದೆ.
ಚಾಲಕ ರಹಿತ ಕಾರು ನಿರ್ಮಾಣಕ್ಕಾಗಿ ಟಾಟಾ ಮೋಟಾರ್ಸ್ ಈಗಲೇ ರೂಪು ರೇಷೆ ಸಿದ್ಧ ಪಡಿಸಿದೆ.
ಟಾಟಾ ಸಿದ್ಧಪಡಿಸಲಿರುವ ಈ ಕಾರಿನಲ್ಲಿ ಹಲವಾರು ಸೆನ್ಸರ್ (ಸಂವೇದಿ) ಮತ್ತು ಕ್ಯಾಮೆರಾಗಳಿರಲಿವೆ. ಅಂದರೆ 12 ಕ್ಯಾಮೆರಾ ಮತ್ತು 5-6 ಸೆನ್ಸರ್ ಗಳಿದ್ದು, ಇದು ಫೋನ್ , ಟ್ಯಾಬ್ಲೆಟ್ ನಿಂದ ಕಾರ್ಯವೆಸಗಲಿದೆ.