ಪ್ರವಾಸ-ವಾಹನ

ಭಾರತದಲ್ಲಿ ಲಕ್ಷ ಕಾರು ವಾಪಸ್ ಸಾಧ್ಯತೆ

Srinivas Rao BV

ನವದೆಹಲಿ: ಹೋಗೆ ಹೊರಸೂಸುವಿಕೆ ಪರಿಮಾಣ ತೋರಿಸುವ ಸಾಧನದಲ್ಲಿ ಅಳವಡಿಸಿರುವ ಸಾಫ್ಟ್ ವೇರ್ ವಂಚನೆ ಹಗರಣಕ್ಕೆ ಗುರಿಯಾಗಿರುವ ಭಾರತದಲ್ಲಿನ ಒಂದು ಲಕ್ಷ ಕಾರುಗಳನ್ನು ಫೋಕ್ಸ್ ವ್ಯಾಗನ್ ಕಂಪನಿ ಹಿಂಪಡೆಯುವ ಸಾಧ್ಯತೆಗಳಿವೆ.
ಭಾರತದಲ್ಲಿ ಉತ್ಪಾದಿಸಿದ 20 ಸಾವಿರ ಸೇರಿದಂತೆ ಆಮದು ಮಾಡಿಕೊಂಡ ವಾಹನಗಳು ಈ ಸಾಧನ ಹೊಂದಿವೆ. ನವೆಂಬರ್ 8 ರೊಳಗೆ ಈ ಪ್ರಕ್ರಿಯೆ ಮುಗಿಯಬಹುದು ಎಂಬ ನಿರೀಕ್ಷೆಯನ್ನು ಕಂಪನಿ ಹೊಂದಿದೆ. ಸೇಡನ್ ಮಾದರಿಗಳಾದ ವೆಂಟೋ, ಜೆಟ್ಟಾ ಮತ್ತು ಪಸ್ಸಟ್, ಹ್ಯಾಚ್ ಬ್ಯಾಕ್ ಮಾದರಿಗಳಾದ ಪೋಲೊ ಕ್ರಾಸ್ ಇದರಲ್ಲಿ ಸೇರಿವೆ.
ಹಗರಣ ಕುರಿತಂತೆ ಕಂಪನಿ ತನಿಖೆ ನಡೆಸುತ್ತಿದೆ. ಕಾರುಗಳನ್ನು ಹಿಂದಕ್ಕೆ ಪಡೆಯುವ ಕುರಿತು ಇನ್ನೂ ನಿರ್ಧರಿಸಿಲ್ಲ ಎಂದು ಫೋಕಸ್ ವ್ಯಾಗನ್ ಇಂಡಿಯಾ ವಕ್ತಾರರು ಹೇಳಿದ್ದಾರೆ. ಹಗರಣ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಲಕ್ಷಾಂತರ ಕಾರುಗಳನ್ನು ಹಿಂಪಡೆಯಲಾಗಿದೆ. 

SCROLL FOR NEXT