ದೇಶೀಯ ಮತ್ತು ವಿದೇಶದ ನವ ವಿವಾಹಿತರ ಅಚ್ಚು ಮೆಚ್ಚಿನ ಪ್ರದೇಶ, ಭಾರತದ ಸ್ವರ್ಗವೆಂದು ಕರೆಸಿಕೊಳ್ಳುವ ಕಾಶ್ಮೀರ ವಿಶ್ವದ ಅತ್ಯುತ್ತಮ ರಮಣೀಯ ಸ್ಥಳಗಳಲ್ಲಿ ಎರಡನೇ ಸ್ಥಾನ ಪಡೆದಿದೆ.
ಲೀಡಿಂಗ್ ಟ್ರಾವೆಲ್ ಮ್ಯಾಗಜಿನ್ ಲೋನ್ಲಿ ಪ್ಲಾನೆಟ್ ನ ವರದಿಯಲ್ಲಿ ಈ ಅಂಶ ಬಹಿರಂಗಗೊಂಡಿದೆ. ರೋಮ್ಯಾಟಿಕ್ ತಾಣಗಳ ಪೈಕಿ ಸ್ವಿಜರ್ಲ್ಯಾಂಡ್ ಗೆ ಮೊದಲ ಸ್ಥಾನ ಸಿಕ್ಕಿದೆ.
ಮ್ಯಾಗಜಿನ್ ವರದಿ ಪ್ರಕಾರ ಪ್ರತಿದಿನ ನವವಿವಾಹಿತ ಜೋಡಿಗಳು ಸೇರಿದಂತೆ 4 ಸಾವಿರಕ್ಕೂ ಅಧಿಕ ಪ್ರವಾಸಿಗರು ಕಾಶ್ಮೀರದ ಸೌಂದರ್ಯ ಸವಿಯಲು ಭೇಟಿ ನೀಡುತ್ತಾರಂತೆ.
ಇತ್ತೀಚಿನ ದಿನಗಳಲ್ಲಿ ಕಾಶ್ಮೀರದಲ್ಲಿ ಅತಿಹೆಚ್ಚು ಚಿತ್ರಗಳು ಚಿತ್ರೀಕರಣಗೊಳ್ಳುತ್ತಿದ್ದು, ಪ್ರಮುಖವಾಗಿ ರೊಮ್ಯಾಂಟಿಕ್ ದೃಶ್ಯಗಳ ಚಿತ್ರೀಕರಣ ನಡೆಯುತ್ತವೆ ಎಂದು ಮ್ಯಾಗಜಿನ್ ವರದಿ ಮಾಡಿದೆ.