ಪ್ರವಾಸ-ವಾಹನ

ಸ್ಕಾರ್ಪಿಯೋ, ಕ್ವಿದ್ ಸೇರಿ 5 ಭಾರತೀಯ ಕಾರುಗಳು ಅಪಘಾತ ಪರೀಕ್ಷೆಯಲ್ಲಿ ಫೇಲ್

Lingaraj Badiger
ನವದೆಹಲಿ: ಸ್ಕಾರ್ಪಿಯೋ ಹಾಗೂ ಕ್ವಿದ್ ಸೇರಿದಂತೆ ಐದು ಜನಪ್ರಿಯ ಭಾರತೀಯ ಕಾರುಗಳು ಗ್ಲೋಬಲ್ ನ್ಯೂ ಕಾರ್ ಅಸ್ಸೆಸ್ಸೆಮೆಂಟ್ ಪ್ರೋಗ್ರಾಂ(ಎನ್ ಸಿಎಪಿ) ನಡೆಸುವ ಅಪಘಾತ ಪರೀಕ್ಷೆಯಲ್ಲಿ ವಿಫಲವಾಗಿವೆ.
ಯುಕೆ ಮೂಲದ ಎನ್ ಸಿಎಪಿ ನಡೆಸಿದ ಸುರಕ್ಷತಾ ಪರೀಕ್ಷೆಯಲ್ಲಿ ಹುಂಡೈ ಇಯಾನ್, ಮಾರುತಿ ಸುಜುಕಿ ಇಕೋ, ಮಾರುತಿ ಸೆಲೆರಿಯೋ, ಮಹೀಂದ್ರಾ ಸ್ಕಾರ್ಪಿಯೋ ಹಾಗೂ ರಿನಲ್ಟ್ ಕ್ವಿದ್ ಶೂನ್ಯ ಸ್ಟಾರ್ ಗಳನ್ನು ಸಂಪಾದಿಸಿವೆ.
ಕಳೆದ ಮೂರು ವರ್ಷಗಳಲ್ಲಿ ಎನ್ ಸಿಎಪಿ ಇದುವರೆಗೆ 16 ವಾಹನಗಳನ್ನು ಅಪಘಾತ ಪರೀಕ್ಷೆಗೆ ಒಳಪಡಿಸಿದ್ದು, ಆ ಪೈಕಿ ಟೋಯೋಟಾದ ಎರಡು ಹಾಗೂ ವೋಕ್ಸ್ ವ್ಯಾಗೆನ್ ನ ಎರಡು ಕಾರುಗಳು ಮಾತ್ರ ನಾಲ್ಕು ಸ್ಟಾರಗಳನ್ನು ಪಡೆದಿವೆ.
SCROLL FOR NEXT