ಪ್ರವಾಸ-ವಾಹನ

ವೋಕ್ಸ್ಯ್ ವ್ಯಾಗನ್ ಆಯ್ತು ಈಗ ಫೋರ್ಡ್ ಸರದಿ; 48,700 ಎಸ್ ಯುವಿ ವಾಹನ ವಾಪಸ್!

Srinivasamurthy VN

ನವದೆಹಲಿ: ಖ್ಯಾತ ಕಾರು ತಯಾರಿಕಾ ಸಂಸ್ಥೆ ಫೋರ್ಡ್ ತನ್ನ ಎಸ್ ಯುವಿ ಕಾರುಗಳಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನಲೆಯಲ್ಲಿ ಭಾರತದಾದ್ಯಂತ ಈಗಾಗಲೇ ಮಾರಾಟವಾಗಿರುವ  ಸುಮಾರು 48, 700 ಎಸ್ ಯುವಿ ವಾಹನಗಳನ್ನು ವಾಪಸ್ ಪಡೆಯುವುದಾಗಿ ಹೇಳಿದೆ.

ಫೋರ್ಡ್ ಸಂಸ್ಥೆಯ ಇಕೋ ಸ್ಪೋರ್ಟ್ಸ್ (ಎಸ್ ಯುವಿ) ಸರಣಿಯ ಕಾರುಗಳಲ್ಲಿನ ಬ್ರೇಕಿಂಗ್ ವ್ಯವಸ್ಥೆ, ಇಂಧನ ಸರಬರಾಜು ವ್ಯವಸ್ಥೆ ಮತ್ತು ಸೀಟುಗಳಲ್ಲಿನ ಫೋಲ್ಡಿಂಗ್ ವ್ಯವಸ್ಥೆಯಲ್ಲಿ ದೋಷ  ಕಂಡುಬಂದ ಹಿನ್ನಲೆಯಲ್ಲಿ ಫೋರ್ಡ್ ಸಂಸ್ಥೆ ಗ್ರಾಹಕರಿಂದ ಕಾರುಗಳನ್ನು ವಾಪಸ್ ಪಡೆಯಲು ನಿರ್ಧರಿಸಿದೆ. 2013ರ ಏಪ್ರಿಲ್ ನಿಂದ 2014ರ ಜೂನ್ ಅವಧಿಯೊಳಗೆ ತಯಾರಿಸಲಾದ ಕಾರುಗಳಲ್ಲಿ  ಈ ದೋಷಗಳು ಕಂಡುಬಂದ ಹಿನ್ನಲೆಯಲ್ಲಿ ಕಾರುಗಳನ್ನು ವಾಪಸ್ ಪಡೆಯಲು ನಿರ್ಧರಿಸಲಾಗಿದೆ. ಕೇವಲ ಈ ಅವಧಿಯಲ್ಲಿನ ಕಾರುಗಳು ಮಾತ್ರವಲ್ಲದೇ 2016ರ ಜನವರಿ ಮತ್ತು ಫೆಬ್ರವರಿ  ಅವಧಿಯಲ್ಲಿ ತಯಾರಿಸಲಾದ ಸುಮಾರು 700 ಕಾರುಗಳಲ್ಲಿ ಸೀಟ್ ಫೋಲ್ಡಿಂಗ್ ಸಮಸ್ಯೆ ಕಂಡುಬಂದಿದ್ದು, ಈ ಕಾರುಗಳನ್ನು ಕೂಡ ಸಂಸ್ಥೆ ವಾಪಸ್ ಪಡೆಯಲು ನಿರ್ಧರಿಸಿದೆ.

ಈ ಹಿಂದೆಯಷ್ಟೇ ಇಂತಹುದೇ ತಾಂತ್ರಿಕ ಲೋಪದೋಷಗಳಿಂದ ಕೂಡಿದ್ದ ಸುಮಾರು 3, 877ಕಾರುಗಳನ್ನು ವೋಕ್ಸ್ ವ್ಯಾಗನ್ ಸಂಸ್ಥೆ ಹಿಂದಕ್ಕೆ ಪಡೆದಿತ್ತು.

SCROLL FOR NEXT