ಪ್ರವಾಸ-ವಾಹನ

ಆಟೋಮೊಬೈಲ್ ವಲಯದ ಬೆಳವಣಿಗೆ ಭಾರಿ ಕುಸಿತ; ತಾತ್ಕಲಿಕ ಉದ್ಯೋಗ ಕಡಿತಗೊಳಿಸಲು ಮಾರುತಿ ಸುಜುಕಿ ನಿರ್ಧಾರ

Srinivas Rao BV

ನವದೆಹಲಿ: ದೇಶದಲ್ಲಿ ಆಟೋಮೊಬೈಲ್ ವಲಯದ ಬೆಳವಣಿಗೆ ಭಾರಿ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ  ವಾಹನ ತಯಾರಿಕಾ  ಕಂಪನಿಗಳು  ತಮ್ಮ ವೆಚ್ಚವನ್ನು ತಗ್ಗಿಸಿಕೊಳ್ಳಲು ಹೆಣಗಾಡುತ್ತಿವೆ. ದೇಶೀಯ ವಾಹನ ತಯಾರಕ ಸಂಸ್ಥೆ  ಮಾರುತಿ ಸುಜುಕಿ  ತನ್ನ ತಾತ್ಕಾಲಿಕ ಉದ್ಯೋಗಗಳನ್ನು  ಕಡಿತಗೊಳಿಸಿದೆ.

ಒಪ್ಪಂದಗಳನ್ನು ನವೀಕರಿಸದ ಕಾರಣ ಸಾವಿರಾರು ತಾತ್ಕಾಲಿಕ ಸಿಬ್ಬಂದಿ ಕೆಲಸ ಕಳೆದುಕೊಳ್ಳಲಿದ್ದಾರೆ.  ಈ  ಅಂಶವನ್ನು  ಕಂಪನಿ  ಅಧ್ಯಕ್ಷ ಆರ್.ಸಿ.ಭಾರ್ಗವ ಸ್ವತಃ ಬಹಿರಂಗಪಡಿಸಿದ್ದಾರೆ. ಆದರೆ, ಸಂಸ್ಥೆಯ ಕಾಯಂ  ಉದ್ಯೋಗಿಗಳ   ಸಂಖ್ಯೆಯಲ್ಲಿ ಯಾವುದೇ  ಬದಲಾವಣೆ ಇಲ್ಲ ಎಂದು  ಅವರು ಸ್ಪಷ್ಟಪಡಿಸಿದ್ದಾರೆ.

ಇದು ವ್ಯವಹಾರದ  ಒಂದು ಭಾಗವಾಗಿದೆ. ನಮ್ಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾದಂತೆ, ನಾವು ಹೆಚ್ಚು  ಹೆಚ್ಚು ಗುತ್ತಿಗೆ  ಉದ್ಯೋಗಿಗಳನ್ನು  ನೇಮಿಸಿಕೊಳ್ಳಲಿದ್ದೇವೆ. ಬೇಡಿಕೆ ಕಡಿಮೆಯಾದರೆ,  ನೌಕರರ ಸಂಖ್ಯೆ ಕಡಿಮೆ ಮಾಡುತ್ತೇವೆ. ಈಗ ಬೇಡಿಕೆ ಕಡಿಮೆಯಾಗಿದೆ ಹಾಗಾಗಿ  ಸುಮಾರು 3000 ತಾತ್ಕಾಲಿಕ  ನೌಕರರ  ಒಪ್ಪಂದಗಳನ್ನು ನವೀಕರಿಸಲಾಗಿಲ್ಲ ಎಂದು ಆರ್‌ಸಿ ಭಾರ್ಗವ ಮಾಧ್ಯಮಗಳಿಗೆ ತಿಳಿಸಿದ್ದಾರೆ.
 

SCROLL FOR NEXT