ಏಪ್ರಿಲ್ 2020 ರಿಂದ ನ್ಯಾನೋಗೆ 'ಟಾಟ'!
ಏಪ್ರಿಲ್ 2020 ರಿಂದ ರತನ್ ಟಾಟಾ ಅವರ ಡ್ರೀಮ್ ಕಾರ್ ನ್ಯಾನೋ ಉತ್ಪಾದನೆ ಹಾಗೂ ಮಾರಾಟ ಸ್ಥಗಿತಗೊಳ್ಳಲಿದೆ.
ಬಿಎಸ್ -6 ಮಾನದಂಡಗಳಿಗೆ ಅನುಗುಣವಾಗಿ ಟಾಟಾ ನ್ಯಾನೋವನ್ನು ಅಪ್ ಗ್ರೇಡ್ ಮಾಡುವುದಕ್ಕೆ ಟಾಟಾ ಮೋಟಾರ್ಸ್ ಯಾವುದೇ ಯೋಜನೆಯನ್ನೂ ಹೊಂದಿಲ್ಲ ಎಂದು ಹೇಳುವ ಮೂಲಕ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಟಾಟಾ ನ್ಯಾನೋ ಉತ್ಪಾದನೆ, ಮಾರಾಟ ಸ್ಥಗಿತಗೊಳ್ಳುವ ಸೂಚನೆ ನೀಡಿದ್ದಾರೆ.
"ಗುಜರಾತ್ ನಲ್ಲಿ ನ್ಯಾನೋ ಉತ್ಪಾದನೆ ಮಾಡಲಾಗುತ್ತಿದೆ. ಜನವರಿ ತಿಂಗಳಲ್ಲಿ ಕೆಲವು ಸುರಕ್ಷಾ ನಿಯಮಗಳು ಜಾರಿಗೆ ಬಂದವು. ಏಪ್ರಿಲ್ ನಲ್ಲಿ ಕೆಲವು ಸುರಕ್ಷಾ ನಿಯಮಗಳು ಜಾರಿಗೆ ಬರಲಿವೆ. ಅಕ್ಟೋಬರ್ ತಿಂಗಳಲ್ಲಿಯೂ ಮತ್ತಷ್ಟು ಸುರಕ್ಷಾ ನಿಯಮಗಳು ಜಾರಿಗೆ ಬರಲಿವೆ. ಬಿಎಸ್-6 ಮಾನದಂಡಗಳು 2020 ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ. ಆದರೆ ಬಿಎಸ್-6 ಮಾನದಂಡಗಳಿಗೆ ಅನುಗುಣವಾಗಿ ಅಪ್ ಗ್ರೇಡ್ ಮಾಡಲು ಸಾಧ್ಯವಿಲ್ಲದ ಹಲವು ಉತ್ಪನ್ನಗಳಿವೆ ಈ ಪೈಕಿ ಟಾಟಾ ನ್ಯಾನೋ ಸಹ ಒಂದು ಎಂದು ಟಾಟಾ ಮೋಟಾರ್ಸ್ ನ ಪ್ಯಾಸೆಂಜರ್ ವೆಹಿಕಲ್ ಬ್ಯುಸಿನೆಸ್ ಯುನಿಟ್ ನ ಮುಖ್ಯಸ್ಥ ಮಯಾಂಕ್ ಪರೀಕ್ ಹೇಳಿದ್ದಾರೆ.