ಪ್ರವಾಸ-ವಾಹನ

ಸ್ಥಳೀಯ ಉತ್ಪಾದನೆ ಸ್ಥಗಿತ ಹಿನ್ನೆಲೆ ಹಿರೋ ಜೊತೆ ಹಾರ್ಲೆ ಮಾತುಕತೆ! 

Srinivas Rao BV

ಹಾರ್ಲೇ ಡೇವಿಡ್ ಸನ್ ಇಂಡಿಯಾದ ಸ್ಥಳೀಯ ಉತ್ಪಾದನೆ ಸ್ಥಗಿತಗೊಂಡಿದ್ದು, ವಿದೇಶಿ ಸಂಸ್ಥೆ 

ಸತತ ಪ್ರಯತ್ನಗಳ ಭಾರತದಲ್ಲಿ ನೆಲೆಯೂರಲು ವಿಫಲಗೊಂಡಿದ್ದ ಹಾರ್ಲೇ ಡೇವಿಡ್ ಸನ್ ಇಂಡಿಯಾ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದು, ಸ್ಥಳೀಯವಾಗಿ ಹಾರ್ಲೆ ಡೇವಿಡ್ ಸನ್ ದ್ವಿಚಕ್ರವಾಹನಗಳನ್ನು ಭಾರತದಲ್ಲಿ ಮಾರಾಟ ಮಾಡಲು ಹಿರೋ ಮೋಟೋಕಾರ್ಪ್ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. 
 
ರಾಯ್ಟರ್ಸ್ ವರದಿಯ ಪ್ರಕಾರ ಹಾರ್ಲೆ ಡೇವಿಡ್ ಸನ್ ಸಂಸ್ಥೆಯ ಸೇಲ್ಸ್ ನ್ನೂ ನಿಲ್ಲಿಸಲಿದ್ದು, ವಿತರಣೆಗಾಗಿ ಹಿರೋ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ. ಈ ಒಪ್ಪಂದ ಯಶಸ್ವಿಯಾದರೆ ಭಾರತಕ್ಕೆ ಹಿರೋ ಕಂಪನಿ ಹಾರ್ಲೆ ಬೈಕ್ ಗಳನ್ನು ಆಮದು ಮಾಡೊಕೊಂಡು ವಿತರಣೆ ಮಾಡಲಿದೆ.

ಭಾರತದಲ್ಲಿ ಹಾರ್ಲೇ ಬೈಕ್ಸ್ ಗೆ ಹಿರೋ ಮಾಸ್ಟರ್ ಡಿಸ್ಟ್ರಿಬ್ಯೂಟರ್ ಆಗಲಿದೆ ಎಂದು ಮೂಲಗಳು ತಿಳಿಸಿವೆ. ಹಾರ್ಲೆ-ಹಿರೋ ಸಂಸ್ಥೆಗಳ ನಡುವೆ ಮಾತುಕತೆ ನಡೆಸುತ್ತಿವೆ. 300-600 ಸಿಸಿ ಇಂಜಿನ್ ಸಾಮರ್ಥ್ಯದ ಹಾರ್ಲೆ ಡೇವಿಡ್ ಸನ್ ನ  ಒಂದು ಆವೃತ್ತಿಯ ಬೈಕ್ ಗೆ ಹಿರೋ ಸಂಸ್ಥೆ ಕಾಂಟ್ರಾಕ್ಟ್ ಉತ್ಪಾದಕ ಸಂಸ್ಥೆಯಾಗುವ ಬಗ್ಗೆ ಚರ್ಚೆ ನಡೆಯುತ್ತಿದೆ ಶೀಘ್ರವೇ ಈ ಬಗ್ಗೆ ಅಧಿಕೃತ ಮಾಹಿತಿ ಪ್ರಕಟಗೊಳ್ಳಲಿದೆ ಎಂದು ತಿಳಿದುಬಂದಿದೆ. 

SCROLL FOR NEXT