ಹೊಸ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಬೈಕ್ 
ಪ್ರವಾಸ-ವಾಹನ

ಚಾಲನಾ ಅನುಭವ: ಹಳೆ ವರ್ಚಸ್ಸು, ಹೊಸ ತಂತ್ರಜ್ಞಾನ ಅಳವಡಿಸಿಕೊಂಡ ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 350

ರಾಯಲ್ ಎನ್‌ಫೀಲ್ಡ್‌ ಕ್ಲಾಸಿಕ್ 350ಯ ಯಶಸ್ಸಿನ ನಂತರ ಈಗ ರಾಯಲ್‌ ಎನ್‌ಪೀಲ್ಡ್‌ ಹೊಸ ಪೀಳಿಗೆಗಾಗಿ ಆಧುನಿಕ ತಂತ್ರಜ್ಞಾನವನ್ನೊಳಗೊಂಡ ಕ್ಲಾಸಿಕ್‌ 350 ಅನ್ನು ಬುಧವಾರ ಬಿಡುಗಡೆಗೊಳಿಸಿದೆ. ಇದು ಹಳೆಯ ವರ್ಚಸ್ಸು ಮುಂದುವರಿಸುವ ಜೊತೆಗೆ, ಹೊಸ ತಂತ್ರಜ್ಞಾನಗಳನ್ನು ಕೂಡ ಅಳವಡಿಸಿಕೊಂಡಿದೆ.

ಬೆಂಗಳೂರು: ರಾಯಲ್ ಎನ್‌ಫೀಲ್ಡ್‌ ಕ್ಲಾಸಿಕ್ 350ಯ ಯಶಸ್ಸಿನ ನಂತರ ಈಗ ರಾಯಲ್‌ ಎನ್‌ಪೀಲ್ಡ್‌ ಹೊಸ ಪೀಳಿಗೆಗಾಗಿ ಆಧುನಿಕ ತಂತ್ರಜ್ಞಾನವನ್ನೊಳಗೊಂಡ ಕ್ಲಾಸಿಕ್‌ 350 ಅನ್ನು ಬುಧವಾರ ಬಿಡುಗಡೆಗೊಳಿಸಿದೆ. ಇದು ಹಳೆಯ ವರ್ಚಸ್ಸು ಮುಂದುವರಿಸುವ ಜೊತೆಗೆ, ಹೊಸ ತಂತ್ರಜ್ಞಾನಗಳನ್ನು ಕೂಡ ಅಳವಡಿಸಿಕೊಂಡಿದೆ.

349 ಸಿಸಿಯ ಈ ಕ್ಲಾಸಿಕ್‌ 350 ಚಾಲನೆಗಂತೂ 2008ರಲ್ಲಿ ಬಿಡುಗಡೆಗೊಂಡ ಹಿಂದಿನ ಕ್ಲಾಸಿಕ್‌ 350ಗಿಂತಲೂ ಉತ್ತಮ ಅನುಭವ ನೀಡುತ್ತದೆ. ಇದರ ಹೊಸ ಚಾಸಿಸ್‌ ಬಳಕೆ, ಎಕ್ಸಾಸ್ಟ್‌ ಪೈಪ್‌ನ ಹೊಸ ವಿನ್ಯಾಸ, ಡಿಜಿಟಲ್‌ ಅನಲಾಗ್‌ ಮೀಟರ್‌, ಟ್ರಿಪ್ಪರ್‌ ನಾವಿಗೇಟರ್‌ ಇವೆಲ್ಲವೂ ಬೈಕ್‌ ಚಾಲನೆಯನ್ನು ಸುಲಭವಾಗಿಸಿರುವುದರ ಜೊತೆಗೆ, ಒಂದು ರಾಯಲ್‌ ಅನುಭವ ನೀಡುತ್ತಿವೆ.

ಲೆಜೆಂಡ್‌ ರೀಬಾರ್ನ್ ಎಂಬ ಘೋಷವಾಕ್ಯದೊಂದಿಗೆ ಬಂದಿರುವ ಈ ಬೈಕ್‌ ಚಾಲನೆ ಮಾಡುವ ಅನುಭವ ವಿನೂತನವಾಗಿತ್ತು. 349 ಸಿಸಿಯ ಇಂಜಿನ್‌ ಹಾಗೂ 804 ಎಂಎಂ ಎತ್ತರದ ಸೀಟುಗಳು ಆರಾಮದಾಯಕ ಚಾಲನೆ ಹಾಗೂ ನಿಯಂತ್ರಣ ಒದಗಿಸುತ್ತವೆ. ಹೊಸ ಹ್ಯಾಂಡಲ್‌ಬಾರ್‌ಗಳು, ಸೆಲ್ಫ್‌ ಸ್ಟಾರ್ಟ್, ಎಲ್‌ಸಿಪಿ ಇನ್ಫೋ ಪ್ಯಾನೆಲ್‌, ಯುಎಸ್‌ಬಿ ಚಾರ್ಜಿಂಗ್‌ ಪಾಯಿಂಟ್, ರಾಯಲ್‌ ಎನ್‌ಫೀಲ್ಡ್‌ ಆ್ಯಪ್‌ ನೆರವಿನಿಂದ ಟರ್ನ್ ಬೈ ಟರ್ನ್ ಮಾರ್ಗದರ್ಶನ ನೀಢುವ ಟ್ರಿಪ್ಪರ್‌ ನ್ಯಾವಿಗೇಟರ್‌- ಒಂದು ಬೈಕ್‌ ಸವಾರ ದೂರದ ಪ್ರಯಾಣ ಹಾಗೂ ಸಂಚಾರ ದಟ್ಟಣೆಯಲ್ಲಿ ರೈಡ್‌ ಮಾಡಲು ಬಯಸುವ ಎಲ್ಲಾ ಲಕ್ಷಣಗಳನ್ನು ಇದು ಒಳಗೊಂಡಿದೆ.

ಕೆಲವೊಂದು ಕಡೆ ಅದರ ವಿನ್ಯಾಸ ಹಳೆಯ ಕ್ಲಾಸಿಕ್‌ ಮಾದರಿ ಬಿಟ್ಟು, ಮಿಟಿಯೋರ್‌ 350 ವಿನ್ಯಾಸವನ್ನೇ ಅನುಸರಿಸಿದೆ ಎಂಬ ಭಾವನೆ ಕೂಡ ಮೂಡುತ್ತದೆ.

ಹೊಸ ಕ್ಲಾಸಿಕ್ 5 ವೇರಿಯಂಟ್‌ ಹಾಗೂ 11 ಬಣ್ಣಗಳಲ್ಲಿ ಲಭ್ಯವಿದೆ. ಇದರ ರೆಡ್‌ಡಿಚ್‌ ಸರಣಿ 1.84 ಲಕ್ಷ ರೂ., ಹ್ಯಾಲಿಯೋನ್‌ ಸರಣಿ 1.93 ಲಕ್ಷ ರೂ. ಹಾಗೂ ಕ್ಲಾಸಿಕ್‌ ಸಿಗ್ನಲ್‌ಗಳು 2.04 ಲಕ್ಷ ರೂ. ಹಾಗೂ ಡಾರ್ಕ್ ಸರಣಿಗಳು 2.11 ಸರಣಿ ಹಾಗೂ ಕ್ಲಾಸಿಕ್‌ ಕ್ರೋಮ್ 2.15 ಲಕ್ಷ ರೂ ದರದಲ್ಲಿ ಲಭ್ಯವಿದೆ.

ಕ್ಲಾಸಿಕ್ 350ಯ ಪ್ರಮುಖಾಂಶಗಳು
-ಹೊಸ ಕ್ಲಾಸಿಕ್ 350 ಬೈಕ್‌ನಲ್ಲಿ ಬಹುತೇಕ ಹಿಂದಿನ ಕ್ಲಾಸಿಕ್ 350ಯ ವಿನ್ಯಾಸ ಹಾಗೂ ತಾಂತ್ರಿಕ ಅಂಶಗಳನ್ನು ಮುಂದುವರಿಸಲಾಗಿದೆ. ಜೊತೆಗೆ, ಕಳೆದ ವರ್ಷದ ಅಂತ್ಯದಲ್ಲಿ ಬಿಡುಗಡೆಗೊಂಡ ಮೀಟಿಯೋರ್‌ 350ಯಲ್ಲಿ ಅಳವಡಿಕೆಯಾಗಿರುವ ಡಿಜಿಟಲ್‌ ಅಂಶಗಳನ್ನು ಕೂಡ ಇದರಲ್ಲಿ ಕಾಣಬಹುದು.

-ಎಲ್‌ಇಸಿ ಇನ್ಫಾರ್ಮೇಷನ್‌ ಪ್ಯಾನೆಲ್ ಹೊಂದಿರುವ ಡಿಜಿ ಅನಲಾಗ್‌ ಮೀಟರ್‌ . ಜೊತೆಗೆ, ಮಾರ್ಗಗಳ ಟರ್ನ್ ಬೈ ಟರ್ನ್ ಮಾರ್ಗದರ್ಶನ ನೀಡುವ ಟ್ರಿಪ್ಪರ್‌ ನ್ಯಾವಿಗೇಟರ್, ಜೊತೆಗೆ ಟಿಎಫ್‌ಟಿ ಸ್ಕ್ರೀನ್ ಅಳವಡಿಕೆ. ಇದು ಮೊದಲ ಬಾರಿಗೆ ಮೀಟಿಯೋರ್‌ 350 ಅಲ್ಲಿ ಕಂಡುಬಂದಿತ್ತು. ನಂತರ ಬಂದ ಹಿಮಾಲಯನ್‌ ಅಲ್ಲಿ ಕೂಡ ಇದನ್ನು ಅಳವಡಿಸಲಾಗಿದೆ. ಹಿಂದಿನ ಕ್ಲಾಸಿಕ್‌ 350 ಅಲ್ಲಿ ಈ ಡಿಜಿಟಲ್‌ ತಂತ್ರಜ್ಞಾನಗಳಿಲ್ಲ.

-ಈ ಬೈಕ್‌ಗಳು ಸಾಮಾನ್ಯಗಳಿಗೆ ಲಾಂಗ್‌ ಜರ್ನಿಗೆ ಹಾಗೂ ದಿನನಿತ್ಯದ ಬಳಕೆ ಎರಡನ್ನೂ ನೆರವಾಗುವಂತಹ 13 ಲೀಟರ್‌ ಸಾಮರ್ಥ್ಯದ ಫ್ಯುಯಲ್‌ ಟ್ಯಾಂಕ್

- ಇದು ಟ್ವಿನ್‌ ಡೌನ್‌ಟ್ಯೂಬ್ ಸ್ಪೈನ್‌ ಫ್ರೇಮ್‌ ಹೊಂದಿರುವ ಹೊಸ ಚಾಸಿಸ್

- 805 ಎಂಎಂ ಎತ್ತರದ ಸೀಟ್‌, ಹಿಂದಿನ ಕ್ಲಾಸಿಕ್‌ 350 ಅಂತೆಯೇ ಡ್ಯುಯಲ್‌ ಹಾಗೂ ಸಿಂಗಲ್‌ ಸೀಟ್‌ಗಳು

-ಬರುತ್ತದೆ. ಸಾಮಾನ್ಯವಾಗಿ ಎಲ್ಲವೂ ಕಪ್ಪು ಬಣ್ಣದ ಸೀಟುಗಳಾದರೆ, ಹಸಿರು ಕ್ಲಾಸಿಕ್‌ 350 ಅಲ್ಲಿ ಮಾತ್ರ ಬ್ರೌನ್‌ ಸೀಟು ಅಳವಡಿಕೆ

-ಹೊಸ ವಿನ್ಯಾಸದ ಟೈಲ್‌ ಲ್ಯಾಂಪ್‌, ಸಿಗ್ನೇಚರ್‌ ಥಂಪ್‌ ಹೊಂದಿರುವ ಎಕ್ಸಾಸ್ಟ್‌ ಪೈಪ್

- ಹಿಂದಿನ ಚಕ್ರದ ಬಗ್ಗೆ ಹೇಳೊದಾದ್ರೆ ಅಲಾಯ್‌ ಟ್ಯೂಬ್‌ಲೆಸ್‌ ಚಕ್ರಗಳು, 270 ಎಂಎಂನ ದೊಡ್ಡ ಡಿಸ್ಕ್

-ಮುಂದಿನ ಚಕ್ರದಲ್ಲಿ ಎಬಿಎಸ್‌ ಅಳವಡಿಕೆ, 41 ಎಂಎಂನ ದೊಡ್ಡ ಫೋರ್ಕ್‌ಗಳು, 300 ಎಂಎಂನ ಮುಂದಿನ ಡಿಸ್ಕ್

- 42 ಇಂದ 43 ಕಿಮೀ ಪರ್‌ ಲೀಟರ್‌ ಮೈಲೇಜ್‌

-ಹೊಸ ಕ್ಲಾಸಿಕ್ 350 ಕೆಂಪು, ಬ್ರೌನ್, ಕಪ್ಪು, ಬೂದು, ಹಸಿರು, ಕಪ್ಪು, ಬೂದು ಬಣ್ಣಗಳಲ್ಲಿ ಲಭ್ಯ, ಈ ಪೈಕಿ ಹಸಿರು ಮತ್ತು ಬೂದು ಬಣ್ಣಗಳ ಬೈಕ್‌ಗಳಲ್ಲಿ ಸಿಂಗಲ್‌ ಸೀಟುಗಳ ಅಳವಡಿಕೆ

- ಸೇನೆ ಮತ್ತು ಸಿಆರ್‌ಪಿಎಫ್‌ ಸಿಬ್ಬಂದಿಗೆ ಗೌರವ ಸೂಚಿಸುವ ಸಲುವಾಗಿ ಸಿಗ್ನಲ್‌ ವೇರಿಯಂಟ್‌ಗಳನ್ನು ಬಿಡುಗಡೆ. ಬೂದು ಬಣ್ಣ ಹಾಗೂ ಖಾಕಿ ಬಣ್ಣಗಳಲ್ಲಿ ಲಭ್ಯ

-ಸುಪ್ರೀತಾ ಹೆಬ್ಬಾರ್ 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

SCROLL FOR NEXT