ನನ್ನ ಪ್ರೇಮ ಕಥೆ

ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನಾ...

ನೂರ ಒಂದು ಗ್ರೀಟಿಂಗ್ ಕಾರ್ಡ್ ಒಟ್ಟಿಗೇ ಕೊಟ್ಟು - ಒಂದೊಂದ್ರಲ್ಲೂ ವಿಭಿನ್ನವಾಗಿ ನಿನ್ನ ಪ್ರೀತಿ ನಿವೇದಿಸಿ ಮೋಡಿ ಮಾಡಿದೋನು ನೀನೆ ಅನ್ಸುತ್ತೆ...

ಸಾವಿರ ಸುಳ್ಳು ಹೇಳಿ ಪ್ರೀತ್ಸೋರು ಇರ್ತಾರೆ, ಮದುವೆ ಮಾಡೋರು ಇರ್ತಾರೆ! ನೂರ ಒಂದು ಗ್ರೀಟಿಂಗ್ ಕಾರ್ಡ್ ಒಟ್ಟಿಗೇ ಕೊಟ್ಟು - ಒಂದೊಂದ್ರಲ್ಲೂ ವಿಭಿನ್ನವಾಗಿ ನಿನ್ನ ಪ್ರೀತಿ ನಿವೇದಿಸಿ ಮೋಡಿ ಮಾಡಿದೋನು ನೀನೆ ಅನ್ಸುತ್ತೆ. ನೀ ಕೊಟ್ಟ ಅಷ್ಟೂ ಕಾರ್ಡ್ಗಳಲ್ಲಿ ನನ್ನ ತುಂಬಾ ಇಂಪ್ರೆಸ್ಸ್ ಮಾಡಿದ್ದು, ಇಗೋ ನಿನ್ನ ಈ ಸಾಲುಗಳು :

    "ನೀ ಬಲೆ ಬೀಸದೇನೆ ನಿನ್ನ ತೆಕ್ಕೆಯಲ್ಲಿ ಬಿದ್ದಿರುವೆನೆಂದರೆ, ಅದು ನನ್ನ ತಪ್ಪಲ್ಲ, ನಮ್ಮನ್ನು ಸೇರಿಸಬೇಕೆಂದು ಹೂಡಿರುವ ಭಗವಂತನ ಸಂಚು, ನಾ ಹೇಳೋದು ಅರ್ಥವಾಗುತ್ತ?"
    "ಪ್ರೀತ್ಸೋಕೆ ಯಾರ ಅಪ್ಪಣೆ ಬೇಕು ಹೇಳು? ಅದು ನನ್ನ ಸ್ವಂತ.  ಆದ್ರೆ ನಿನ್ನ ಹೊಗಳೋಕೆ ಬೇಕು, ಪ್ಲೀಸ್ ನಂಗೆ ಅನುಮತಿ ಕೊಡು"
    "ಈ ಹಿಂದೆ ನಾ ಯಾರನ್ನು ಪ್ರೀತ್ಸೇ ಇಲ್ಲ ಅಂತಲ್ಲ, ಸುಳ್ ಸುಳ್ಳೆಲ್ಲ ನಂಗೆ ಹೇಳೋಕೆ ಬರೋಲ್ಲ. ಆದ್ರು ತಪ್ಪೇ ಮಾಡದೆ - ನಿನ್ನ ಮುಂದೆ ತಪ್ಪಿತಸ್ತನ ಹಾಗೆ ನಿಲ್ಲ ಬಲ್ಲೆ"
    "ನಾನು ಸಾಯೋ ತನಕ ಮಾತ್ರ ಅಲ್ಲ - ಸತ್ತಮೇಲೂ ನನ್ನಷ್ಟು ನಿನ್ನನ್ನ ಪ್ರೀತ್ಸೋರು ಈ ಭೂಮಿ ಮೇಲೆ ಇರೋಕೆ ಸಾಧ್ಯನೇ ಇಲ್ಲ"

ಹೀಗೆಲ್ಲ ಬರೆದು, ನನ್ನ ಬೆನ್ನಟ್ಟಿದ ಬೇತಾಳ ನೀನೆ. ಅಲ್ಲಿಯವರೆಗೂ ಶಾರುಖ್ ಖಾನ್ ಬಿಟ್ಟು ನ೦ಗ್ಯಾರು ಹಿಡ್ಸಿರ್ಲಿಲ್ಲ. ನೀನಂತು ಯಾವ ಕಡೆಯಿಂದಲೂ SRK ಹಂಗಿರ್ಲಿಲ್ಲ, ಮತ್ತೆ ನೀ ಇಷ್ಟವಾಗಿದ್ದಾದರು ಹೇಗೆ? ಪ್ರೀತಿಗೆ ಕಣ್ಣಿಲ್ಲ ಅನ್ನೋದು ಇದಕ್ಕೇನಾ :) ನಿನ್ನ ಲವ್ ಲೆಟರ್ ಪೂರ ಹಂಸಲೇಖರ ಸಾಲುಗಳನ್ನ ಬರೆದು ಬರೆದು ಪ್ರೀತಿ ಗಿಟ್ಟಿಸಿಕೊಂಡ ಏಕೈಕ ಪ್ರೇಮಿ ನೀನೆ. ಅದಕ್ಕೆ ನೋಡು ಪ್ರತಿ V-Day ದಿನ ಹಂಸಲೇಖರ ಹಾಡಿನ CD ತಪ್ಪದೆ ಖರೀದಿಸ್ತೀನಿ. ನಿಜ ಹೇಳಲಾ? ನೀನಿಲ್ಲ ಅಂತ ನಂಗೆ ಅನಿಸೋದೇ ಇಲ್ಲ. ಉಸಿರಾಡೊವಾಗೆಲ್ಲ ನೆನಪಾಗ್ತೀಯ ಅಂದ್ರೆ, ನಿನ್ನನ್ನ ಎಷ್ಟು ಬಾರಿ ನೆನಪಿಸಿಕೊಳ್ತೀನಿ ಅಂತ ನೀನೆ ಲೆಕ್ಕ ಹಾಕು. ಮತ್ತೊಂದು ನಿಜ ಹೇಳಲಾ?, "ನಿನ್ನಷ್ಟು ನನ್ನ ಪ್ರೀತ್ಸೋರು - ನನ್ನಸ್ಟು ನಿನ್ನ ಪ್ರೀತ್ಸೋರು ಈ ಭೂಮಿಮೇಲೆ ಇರೋಕೆ ಸಾಧ್ಯವೇ ಇಲ್ಲ". ಅಬ್ಭ ಕಂಗಳು ಮಂಜಾಗ್ತಿವೆ, ಗಂಟಲಿಗೂ ಕಷ್ಟವಾಗ್ತಿದೆ, ಬೇಗ ಹೇಳ್ಬಿಡ್ತೀನಿ, ಇವತ್ತು ವಿಶೇಷ, Happy Valentine's Day ಮತ್ತೆ, ಮತ್ತೆ, I L ..............


ರೂಪ ಸತೀಶ್, ಬೆಂಗಳೂರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT