ಜಾಗತಿಕವಾಗಿ ಅಪಾರ ಖ್ಯಾತಿಗೆ ಪಾತ್ರವಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಈಗ ಮತ್ತೊಂದು ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಜೂನ್ 23ರ ಭಾನುವಾರ, ಇಸ್ರೋ, ತನ್ನ ಮೂರನೇ ರಿಯೂಸೆಬಲ್ ಲಾಂಚ್ ವೆಹಿಕಲ್ (RLV) ಲ್ಯಾಂಡಿಂಗ್ ಎಕ್ಸ್‌ಪರಿಮೆಂಟ್ (LEX) (ಮರುಬಳಕೆ ಉಡಾವಣಾ ವಾಹನದ ಲ್ಯಾಂಡಿಂಗ್ ಪರೀಕ್ಷೆ) ಯಶಸ್ವಿಯಾಗಿ ನೆರವೇರಿದೆ ಎಂದು ಘೋಷಿಸಿತು.