NDA ಮೈತ್ರಿಕೂಟಕ್ಕೆ ಶಾಕ್: 'ಕೈ' ಹಿಡಿದ ಸಿಪಿ ಯೋಗೇಶ್ವರ್; ಬೆಂಗಳೂರಿನಲ್ಲಿ ಇಂದು ಸಹ ಧಾರಾಕಾರ ಮಳೆ: 100 ಮನೆ ಜಲಾವೃತ; ಕೆರೆಗೆ ಬಿದ್ದು ಅಣ್ಣ-ತಂಗಿ ಸಾವು: 5 ಲಕ್ಷ ರೂ ಪರಿಹಾರ!
ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಇರಾದೆ ಹೊಂದಿದ್ದ ಮಾಜಿ ಸಚಿವ ಸಿಪಿ ಯೋಗೇಶ್ವರ್ ಅವರು ಕೊನೆಗೂ ತಮಗೆ ಟಿಕೆಟ್ ಸಿಗುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.