ಉತ್ತರ ಪ್ರದೇಶ ಅರಣ್ಯ ಇಲಾಖೆಯು ಸೆಪ್ಟೆಂಬರ್ 10 ರಂದು 5ನೇ ನರಭಕ್ಷಕ ತೋಳವನ್ನು ಸೆರೆಹಿಡಿಯಿತು. ಇದಕ್ಕೂ ಮುನ್ನ 4 ತೋಳಗಳನ್ನು ಸುಲಭವಾಗಿ ಸೆರೆಹಿಡಿಯಲಾಗಿತ್ತು. ಇಂದು ಸೆರೆಹಿಡಿಯಲಾದ ತೋಳವು 10 ದಿನಗಳಿಂದ ಅರಣ್ಯ ಅಧಿಕಾರಿಗಳ ಕಣ್ಣುತಪ್ಪಿಸಿಕೊಂಡು ಓಡಾಡುತ್ತಿತ್ತು.
ಈ ತೋಳದ ಜಾಡು ಹಿಡಿಯಲು ಆ.30ರಿಂದ ಅರಣ್ಯಾಧಿಕಾರಿಗಳು ಮಾಡಿದ ಎಲ್ಲಾ ಯತ್ನಗಳು ವಿಫಲವಾಗಿತ್ತು. ತೋಳಗಳು ಹೆಚ್ಚಾಗಿ ರಾತ್ರಿ ಮತ್ತು ಮುಸ್ಸಂಜೆಯ ಸಮಯದಲ್ಲಿ ಸಕ್ರಿಯವಾಗಿದ್ದು ದಾಳಿ ನಡೆಸುತ್ತವೆ. ಬಹ್ರೈಚ್ ಡಿಎಂ ಮಾಹಿತಿ ನೀಡಿದಂತೆ ತೋಳಗಳು ಪ್ರತಿ ಬಾರಿ ದಾಳಿಗೆ ವಿವಿಧ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ದಾಳಿ ನಡೆಸುತ್ತಿದ್ದವು.
ದಾಳಿಯ ಸ್ವರೂಪವನ್ನು ಅಧ್ಯಯನ ಮಾಡಿದ ನಂತರ ಅರಣ್ಯ ಇಲಾಖೆ, ತೋಳಗಳ ಸಂಭವನೀಯ ಆವಾಸಸ್ಥಾನಗಳಲ್ಲಿ ಇನ್ಫ್ರಾರೆಡ್ ಡ್ರೋನ್‌ಗಳ ಜೊತೆಗೆ ಸ್ನ್ಯಾಪ್ ಕ್ಯಾಮೆರಾಗಳನ್ನು ಹೊಂದಿಸಿತ್ತು.
ಇನ್ನಷ್ಟು ತಿಳಿಯಲು ವೀಡಿಯೊ ವೀಕ್ಷಿಸಿ.