ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಾಸಕ ಸಂಜಯ್ ಗಾಯಕ್ವಾಡ್ ಅವರು, ಮುಂಬೈನ ಎಂಎಲ್ಎ ಗೆಸ್ಟ್ಹೌಸ್ನಲ್ಲಿರುವ ಕ್ಯಾಂಟೀನ್ ಸಿಬ್ಬಂದಿಯೋರ್ವನಿಗೆ ಥಳಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಮಂಗಳವಾರ ರಾತ್ರಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ವೈರಲ್ ಆಗಿರುವ ವಿಡಿಯೋದಲ್ಲಿಸ ಗಾಯಕ್ವಾಡ್ ಅವರು ಕ್ಯಾಂಟೀನ್‌ಗೆ ನುಗ್ಗಿ, ವ್ಯವಸ್ಥಾಪಕರನ್ನು ಗದರಿರುವುದು, ಹಳಸಿದ ಆಹಾರ ನೀಡಿದ್ದಾರೆಂದು ಸಿಬ್ಬಂದಿಗೆ ಥಳಿಸುತ್ತಿರುವುದು ಕಂಡು ಬಂದಿದೆ. ವಿಡಿಯೋ ಇಲ್ಲಿದೆ ನೋಡಿ.