ಗೋಕರ್ಣದ ದೂರದ ಕಾಡಿನಲ್ಲಿ ಗುಹೆಯೊಳಗೆ ತನ್ನ ಇಬ್ಬರು ಮಕ್ಕಳ ಜೊತೆ ವಾಸಿಸುತ್ತಿದ್ದ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ ಮತ್ತು ರಷ್ಯಾಕ್ಕೆ ವಾಪಾಸ್ ಕಳುಹಿಸುವ ಬಗ್ಗೆ ಸಿದ್ಧತೆ ನಡೆಸಿದ್ದಾರೆ.
ಮಹಿಳೆಯನ್ನು ನೀನಾ ಕುಟಿನಾ ಎಂದು ಗುರುತಿಸಲಾಗಿದೆ, ಈ ಹಿಂದೆಯೂ ಕೂಡ ಕಾಡಿನ ಅದೇ ಗುಹೆಯಲ್ಲಿ ಹಲವು ಬಾರಿ ಈ ತಾಯಿ ಮಕ್ಕಳು ತಂಗಿದ್ದರು ಎಂದು ತಿಳಿದುಬಂದಿದೆ.
ರಾಮತೀರ್ಥ ಬೆಟ್ಟದ ದಟ್ಟವಾದ ಕಾಡಿನ ಮಧ್ಯೆ ಈ ಕುಟುಂಬ ಕತ್ತಲಲ್ಲೇ ವಾಸಿಸುತ್ತಿತ್ತು. ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಗುಹೆಯಲ್ಲಿರುವುದು ಕಂಡು ಬಂದಿದೆ.
ರಷ್ಯಾದ ಮಹಿಳೆ ಪ್ರಕೃತಿಯ ಸೊಬಗಿನ ಬಗ್ಗೆ, ಆಕಾಶ, ಹುಲ್ಲು, ಜಲಪಾತ, ಹಾವುಗಳು ಇತ್ಯಾದಿಗಳಿಂದ ಬದುಕು ಎಷ್ಟು ಸುಂದರವಾಗಿದ್ದವು ಎಂದು ವರ್ಣಿಸಿದ್ದಾರೆ.
ಇದೆಲ್ಲವನ್ನೂ ಹಿಮಾವೃತ, ಗಟ್ಟಿಯಾದ ನೆಲದಿಂದ ಬದಲಾಯಿಸಲಾಗಿದೆ, ದುಷ್ಟತನ ಮತ್ತೆ ಗೆದ್ದಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.