ಉತ್ತರ ಪ್ರದೇಶದ ಬಲರಾಮ್ ಪುರ್ ನಲ್ಲಿ ಬೆಳಕಿಗೆ ಬಂದಿದ್ದ ಸಾಮೂಹಿಕ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯಾನಾಥ್ ಸರ್ಕಾರ ಬುಲ್ಡೋಜರ್ ಕ್ರಮ ಜರುಗಿಸಿದೆ. ಮತಾಂತರ ಪ್ರಕರಣದ ಮಾಸ್ಚರ್ ಮೈಂಡ್ ಚೆಂಗೂರ್ ಬಾಬಾ ಅಲಿಯಾಸ್ ಜಲಾಲುದ್ದೀನ್ ನ ಬಲಗೈ ಬಂಟ ಸಬ್ರೋಜ್ ಗೆ ಸೇರಿದ ಆಸ್ತಿ, ಮನೆ ಮತ್ತು ಕಟ್ಟಡಗಳನ್ನು ಉತ್ತರ ಪ್ರದೇಶ ಸರ್ಕಾರ ನೆಲಸಮ ಮಾಡಿ ವಶಕ್ಕೆ ಪಡೆದಿದೆ.