ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಆಚರಣೆ ಸಂಬಂಧ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿಯವರು ಇಂದು ಹೈದರಾಬಾದ್ ಗೆ ಆಗಮಿಸಿದರು.
ಪುಟ್ಟಪರ್ತಿಗೆ ತೆರಳುವಾಗ ರೋಡ್ ಶೋ ನಡೆಸಿದರು. ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೀದಿಗಳಲ್ಲಿ ಸಾಲುಗಟ್ಟಿ ನಿಂತಿದ್ದರು.
ಸತ್ಯಸಾಯಿ ಬಾಬಾ ಅವರ ಪವಿತ್ರ ದೇಗುಲ ಮತ್ತು 'ಮಹಾಸಮಾಧಿ'ಗೆ ನಮನ ಸಲ್ಲಿಸಿದರು. ಭೇಟಿಯ ಸಮಯದಲ್ಲಿ ಅವರು ಸಾಯಿಬಾಬಾ ಮೂರ್ತಿಗೆ ಪ್ರಾರ್ಥನೆ ಸಲ್ಲಿಸಿದರು. ವಿಡಿಯೋ ಇಲ್ಲಿದೆ ನೋಡಿ.