ತಮಿಳುನಾಡಿನ ಕೊಯಮತ್ತೂರಿನಲ್ಲಿ ಬುಧವಾರ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ 2025 ಮತ್ತು ಪ್ರದರ್ಶನವನ್ನು ಉದ್ಘಾಟಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ಮೋದಿ ಭಾಷಣದ ವೇಳೆ, ಭಾರತದ ಆರ್ಥಿಕ ಬೆಳವಣಿಗೆಯನ್ನು ಶ್ಲಾಘಿಸುತ್ತಾ ಪ್ರಧಾನಿ ಮೋದಿ ಅವರ ಮುಂದೆ ಇಬ್ಬರು ಶಾಲಾ ಹುಡುಗಿಯರು ಕೈಬರಹದ ಬ್ಯಾನರ್ ಹಿಡಿದಿದ್ದರು.
"ನಾನು 2 ನೇ ರ್‍ಯಾಂಕ್ ಆರ್ಥಿಕತೆಯಲ್ಲಿ ಪದವಿ ಪಡೆಯುತ್ತೇನೆ. 1 ನೇ ರ್‍ಯಾಂಕ್ ಆರ್ಥಿಕತೆಯಲ್ಲಿ ನಿವೃತ್ತಿ ಹೊಂದುತ್ತೇನೆ. ನಿಮ್ಮ ದೂರದೃಷ್ಟಿಗೆ ಧನ್ಯವಾದಗಳು." ಎಂದು ಅದರಲ್ಲಿ ಬರೆಯಲಾಗಿತ್ತು.
ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಬ್ಯಾನರ್ ನೋಡಿದ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ನಿಲ್ಲಿಸಿದರು. ವಿಡಿಯೋ ಇಲ್ಲಿದೆ ನೋಡಿ.