ಗಾಜಾದಲ್ಲಿ ಹಮಾಸ್ ವಿರುದ್ಧ ಇಸ್ರೇಲ್ ತನ್ನ ಕೆಲಸವನ್ನು ಮುಗಿಸಬೇಕಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಶುಕ್ರವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹೇಳಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಅವರು ಭಾಷಣ ಮಾಡಲು ತಯಾರಾಗುತ್ತಿದ್ದಂತೆಯೇ ಡಜನ್ ಗಟ್ಟಲೇ ರಾಷ್ಟ್ರಗಳ ಪ್ರತಿನಿಧಿಗಳು ವಿಶ್ವಸಂಸ್ಥೆ ಸಾಮಾನ್ಯ ಸಭೆಯಿಂದ ಹೊರನಡೆದಿದ್ದಾರೆ. ನಂತರ ಭಾಷಣ ಮಾಡಿದ್ದಾರೆ.
ಗಾಜಾದಲ್ಲಿ ವಿನಾಶಕಾರಿ ಯುದ್ಧವನ್ನು ಕೊನೆಗೊಳಿಸಲು ಒಪ್ಪದ ಹಿನ್ನೆಲೆಯಲ್ಲಿ ವಿವಿಧ ರಾಷ್ಟ್ರಗಳ ಪ್ರತಿಭಟನೆ ನಡುವೆಯೂ ನೆತನ್ಯಾಹು ಭಾಷಣ ಮಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.