ಆರ್ಟೆಮಿಸ್ II ಬಾಹ್ಯಾಕಾಶ ಯಾನವು ಅಮೆರಿಕದ ಫ್ಲೋರಿಡಾ ರಾಜ್ಯದಿಂದ ಬುಧವಾರ ಉಡಾವಣೆಗೊಂಡಿದೆ. ನಾಲ್ಕು ಗಗನಯಾತ್ರಿಗಳನ್ನು ಚಂದ್ರನ ಸುತ್ತ ಐತಿಹಾಸಿಕ ಪ್ರಯಾಣಕ್ಕೆ ಕಳುಹಿಸಿದೆ.
50 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮಾನವರು ಭೂಮಿಯ ಕೆಳ ಕಕ್ಷೆಯನ್ನು ಮೀರಿ ಪ್ರಯಾಣಿಸಿದ್ದಾರೆ.
ಈ ಕಾರ್ಯಾಚರಣೆಯು, ಮಾನವರನ್ನು ಚಂದ್ರನಿಗೆ ಹಿಂದಿರುಗಿಸುವ ಮತ್ತು ಅಂತಿಮವಾಗಿ ಮಂಗಳ ಗ್ರಹಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಯೋಜನೆಯಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.
32 ಅಂತಸ್ತು ಎತ್ತರದ ರಾಕೆಟ್ ಕೇಪ್ ಕೆನವೆರಲ್‌ನಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಮೇಲೇರಿತು. ಅಲ್ಲಿ ಉಡಾವಣೆಯನ್ನು ವೀಕ್ಷಿಸಲು ಹತ್ತಾರು ಸಾವಿರ ಜನರು ಸೇರಿದ್ದರು. ವಿಡಿಯೋ ಇಲ್ಲಿದೆ ನೋಡಿ.