ಮಾರಕ ಹ್ಯಾಂಟವೈರಸ್ ಸ್ಫೋಟಗೊಂಡಿರುವ ಡಚ್ ಕ್ರೂಸ್ ಹಡಗು MV Hondiusನಲ್ಲಿ ಇಬ್ಬರು ಭಾರತ ಮೂಲದ ಪ್ರಜೆಗಳು ಇದ್ದಾರೆ ಎಂದು ತಿಳಿದುಬಂದಿದೆ.
ಹ್ಯಾಂಟವೈರಸ್ ಸೋಂಕು ಜಾಗತಿಕ ಆತಂಕಕ್ಕೆ ಕಾರಣವಾಗಿದ್ದು, ಈಗಾಗಲೇ ಐದು ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ.
Oceanwide Expeditions ಸಂಸ್ಥೆ ನಿರ್ವಹಿಸುತ್ತಿರುವ ಈ ಐಷಾರಾಮಿ ಸಂಶೋಧನಾ ಹಡಗಿನಲ್ಲಿ ಕನಿಷ್ಠ ಇಬ್ಬರು ಭಾರತೀಯರು ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ವಿಡಿಯೋ ಇಲ್ಲಿದೆ ನೋಡಿ.