ನಮ್ಮ ಮೆಟ್ರೋದ ಪಿಂಕ್ ಲೈನ್‌ನ 7.5 ಕಿ.ಮೀ. ಉದ್ದದ ಮೇಲ್ಸೇತುವೆ ಮಾರ್ಗವನ್ನು ಉದ್ಘಾಟಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.
ಈ ಹಿನ್ನೆಲೆಯಲ್ಲಿ, ಮೆಟ್ರೋ ಯೋಜನೆಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕೆಂಬ ಬೇಡಿಕೆಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತೆ ಪ್ರಸ್ತಾಪಿಸಿದೆ.
ಮೆಟ್ರೋ ಮೊದಲ, ಎರಡನೇ, 2ಎ, 2ಬಿ ಹಂತಗಳು ಹಾಗೂ ಅಂದಾಜು ವೆಚ್ಚದ ಮೂರನೇ ಹಂತದ ಯೋಜನೆಗಳ ಅನುದಾನದ ವಿವರಗಳನ್ನು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹಂಚಿಕೊಂಡರು.
ಮೆಟ್ರೋ ಯೋಜನೆಗಳ ಒಟ್ಟು ಅನುಮೋದಿತ ವೆಚ್ಚದಲ್ಲಿ ರಾಜ್ಯ ಸರ್ಕಾರವೇ ಶೇ.84ರಷ್ಟು ಹಣವನ್ನು ಭರಿಸುತ್ತಿದ್ದರೆ, ಕೇಂದ್ರದ ಪಾಲು ಕೇವಲ ಶೇ.16ರಷ್ಟಿದೆ ಎಂದು ಬೈರೇಗೌಡ ತಿಳಿಸಿದರು.
ಮೆಟ್ರೋ ಯೋಜನೆಗಳಿಗೆ ಶೇ.50ರಷ್ಟು ರಾಜ್ಯ ಮತ್ತು ಶೇ.50ರಷ್ಟು ಕೇಂದ್ರ ಸರ್ಕಾರ ಹಣ ನೀಡಬೇಕೆಂಬ ಒಪ್ಪಂದವನ್ನು ಕೇಂದ್ರ ಪಾಲಿಸುತ್ತಿಲ್ಲ ಎಂದೂ ಅವರು ಆರೋಪಿಸಿದರು.
ನಮ್ಮ ಮೆಟ್ರೋ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಗುರುವಾರ ಸುದ್ದಿಗೋಷ್ಠಿ ನಡೆಸಿ ಕೃಷ್ಣ ಬೈರೇಗೌಡ ಅವರ ಆರೋಪಗಳನ್ನು ತಳ್ಳಿಹಾಕಿದರು. ವಿಡಿಯೋ ಇಲ್ಲಿದೆ ನೋಡಿ.