ಬಸವಣ್ಣನವರ ಕುರಿತು ಸಂದರ್ಶನದಲ್ಲಿ ಸ್ವಯಂ ಘೋಷಿತ ಸಂಶೋಧಕ ರವಿ ಹಂಜ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಕರ್ನಾಟಕದ ಲಿಂಗಾಯತ ಸಮುದಾಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಸಂಬಂಧ ಪೊಲೀಸ್ ದೂರು ದಾಖಲಿಸುವುದಾಗಿ ಸಮುದಾಯದ ಮುಖಂಡರು ಗುರುವಾರ ಘೋಷಿಸಿದ್ದು, ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಸಚಿವ ಎಂ.ಬಿ. ಪಾಟೀಲ್, ಕಾಂಗ್ರೆಸ್ ಶಾಸಕ ಬಿ.ಎಸ್. ಪಾಟೀಲ್, ಬ್ರಿಟನ್ನ ಲೇಬರ್ ಪಕ್ಷದ ಸದಸ್ಯ ಡಾ. ನೀರಜ್ ಪಾಟೀಲ್ ಈ ಸಂಬಂಧ ಗುರುವಾರ ಪತ್ರಿಕಾಗೋಷ್ಠಿ ನಡೆಸಿದರು. ವಿಡಿಯೋ ಇಲ್ಲಿದೆ ನೋಡಿ.