ಸೋನಿಯಾ ಗಾಂಧಿಯವರ 'Belonging' ಪುಸ್ತಕದ ವಿರುದ್ಧ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ನಡೆಸಿದ ಪ್ರತಿಭಟನೆ ಈಗ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ.
ಪಕ್ಷದ ನಾಯಕಿ ಶೈನಾ ಎನ್ ಸಿ ಅವರು ಪ್ರತಿಭಟನೆ ನಡೆಸುವ ಭರದಲ್ಲಿ, ಸೇನಾ ಸ್ಥಾಪಕ ಬಾಳಾ ಠಾಕ್ರೆ ಅವರ ಛಾಯಾಚಿತ್ರವನ್ನು ಹರಿದು ಹಾಕಿದ್ದು ವಿವಾದಕ್ಕೆ ಕಾರಣವಾಗಿದೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಕಾಂಗ್ರೆಸ್, ಸೇನಾ ಸ್ಥಾಪಕರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಶೈನಾ ಎನ್ ಸಿ ಅವರ ಮೇಲೆ ವಾಗ್ದಾಳಿ ನಡೆಸಿವೆ.
ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಪುಸ್ತಕದ ವಿತರಣೆಯನ್ನು ವಿರೋಧಿಸಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬುಧವಾರ ಪ್ರತಿಭಟಿಸಿದೆ.
ವೀರ್ ಸಾವರ್ಕರ್ ಅವರನ್ನು ಅವಹೇಳನಕಾರಿಯಾಗಿ ಟೀಕಿಸಿ ಇತಿಹಾಸವನ್ನು ವೈಟ್ ವಾಷ್ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ. ವಿಡಿಯೋ ಇಲ್ಲಿದೆ ನೋಡಿ.