ಕರ್ನಾಟಕದ ಮಾಗಡಿ ಪಟ್ಟಣದಲ್ಲಿ ಇಂದಿಗೂ ಕುಶಲಕರ್ಮಿಗಳು ಜೇಡಿಮಣ್ಣಿನಿಂದ ಗಣೇಶ ಮೂರ್ತಿಗಳನ್ನು ರೂಪಿಸುತ್ತಾರೆ.
ಈ ಮೂಲಕ ಗಣೇಶ ಚತುರ್ಥಿಯ ಹಬ್ಬದ ಉತ್ಸಾಹಕ್ಕೆ ಮತ್ತಷ್ಟು ಮೆರಗು ನೀಡುತ್ತಿದ್ದಾರೆ.
ಅವರು ಮೂರು ತಲೆಮಾರುಗಳಿಂದ ಬಂದ ಕರಕುಶಲತೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ.
ಕುಶಲಕರ್ಮಿಗಳು ವಿಗ್ರಹ ತಯಾರಿಕೆಗೆ ಶುದ್ಧ ಜೇಡಿಮಣ್ಣನ್ನು ಬಳಸುತ್ತಾರೆ. ರಾಸಾಯನಿಕಗಳನ್ನು ಬಳಸುವುದಿಲ್ಲ.
ಈ ಮೂಲಕ ನೈಸರ್ಗಿಕ ಮತ್ತು ಪರಿಸರ ಸ್ನೇಹಿ ವಿಗ್ರಹಗಳನ್ನು ತಯಾರಿಸುವ ಸಾಂಪ್ರದಾಯಿಕ ವಿಧಾನವನ್ನು ಸಂರಕ್ಷಿಸುವುದಾಗಿ ಹೇಳುತ್ತಾರೆ. ವಿಡಿಯೋ ಇಲ್ಲಿದೆ ನೋಡಿ.