ಪಾಕಿಸ್ತಾನವನ್ನು “ಕೈಗೊಂಬೆ ಸರ್ಕಾರ” ಎಂದು ಬಣ್ಣಿಸಿರುವ ಭಾರತ, ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತು.
ಪಾಕಿಸ್ತಾನದ ಸುಳ್ಳು ಮತ್ತು ವಂಚನೆಯನ್ನು ಟೀಕಿಸಿದ ಭಾರತ, ಗಡಿಯಾಚೆಗಿನ ಭಯೋತ್ಪಾದನೆ ಮುಂದುವರಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿತು.
ಈ ಮೂಲಕ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮಾಡಿದ ಟೀಕೆಗಳಿಗೆ ಭಾರತವು ತಿರುಗೇಟು ನೀಡಿದೆ.
ಇದಕ್ಕೂ ಮುನ್ನ, ಸಿಂಧೂ ನದಿ ನೀರಿನಲ್ಲಿ ಪಾಕಿಸ್ತಾನದ ಪಾಲನ್ನು ತಡೆಯುವ ಅಥವಾ ಬೇರೆಡೆಗೆ ತಿರುಗಿಸುವ ಯಾವುದೇ ಪ್ರಯತ್ನವನ್ನು "ಯುದ್ಧದ ಕೃತ್ಯ"ವೆಂದು ಪರಿಗಣಿಸಲಾಗುವುದು ಎಂದು ಷರೀಫ್ ಎಚ್ಚರಿಸಿದ್ದರು. ವಿಡಿಯೋ ಇಲ್ಲಿದೆ ನೋಡಿ.