ಕಾರ್ಗಿಲ್ ನಲ್ಲಿ ಅತಿಹಿಮ ಬೀಳುತ್ತಿದ್ದಂತೆ ಭಾರತೀಯ ಸೇನೆ ಹಿಂದೆ ಬರುತ್ತದೆ. ನಂತರ ಹಿಮ ಕರಗುತ್ತಲೇ ಮತ್ತೆ ಅಲ್ಲಿಗೆ ಹೋಗುತ್ತದೆ. ಹೀಗೆ ವಾಡಿಕೆಯಂತೆ ಹಿಮ ಬೀಳುತ್ತಿದ್ದಾಗ ಅಲ್ಲಿಂದ ವಾಪಸ್ ಬಂದಿದ್ದ ಭಾರತೀಯ ಸೇನೆ ಆ ವರ್ಷವೂ ಹಿಮ ಕರಗಿದ ಮೇಲೆ ವಾಪಸ್ ತೆರಳಬೇಕಿತ್ತು. ಹೀಗಾಗಿ ಭಜರಂಗ್ ಪೋಸ್ಟ್ ನ ಹತ್ತುವುದಕ್ಕೆ ಮಂಜು ಕರಗಿದೆಯಾ ಹತ್ತಬಹುದಾ ಎಂದು ನೋಡಿಕೊಂಡು ಬರಲು ಮೊದಲು ಸೌರಬ್ ಕಾಲಿಯಾ ಅಲ್ಲಿಗೆ ಹೋಗುತ್ತಾರೆ. ಸೌರಬ್ ಕಾಲಿಯಾ, ಭಜರಂಗ್ ಪೋಸ್ಟ್ ನತ್ತ ಮೊದಲ ಬಾರಿಗೆ ಹೋದಾಗ ಈ ದೇಶದ ಒಳಗೆ ನಮ್ಮ ಗುಡ್ಡದ ಮೇಲೆ ಬಂದು ಕುಳಿತಿರುವವರು ಪಾಕಿಸ್ತಾನದವರು ಅಂತ ತಿಳಿದಿರಲಿಲ್ಲ. ಗುಪ್ತಚರ, ರಾ, ಐ.ಬಿಗಳು ವಿಫಲವಾಗಿದ್ದವು.
ಪಾಕಿಸ್ತಾನದವರು ಬರಬಹುದೆಂದು ಕಲ್ಪನೆಯನ್ನೇ ಮಾಡಿರಲಿಲ್ಲ. ಪಾಕಿಸ್ತಾನಿಯರು ಎಷ್ಟು ಬುದ್ಧಿವಂತಿಕೆಯಿಂದ ಮೋಸ ಮಾಡಿದ್ದರು ಎಂದರೆ ಯುದ್ಧ ಪ್ರಾರಂಭವಾದ 2025 ದಿನಗಳ ಕಾಲದ ವರೆಗೂ ಸಹ ನಾವು ಒಳಗೆ ಬಂದವರು ಭಯೋತ್ಪಾದಕರೇ ಹೊರತು ಪಾಕಿಸ್ತಾನದ ಸೈನಿಕರಲ್ಲ ಎಂದುಕೊಂಡಿತ್ತು ಭಾರತ.
ಪಾಕಿಸ್ತಾನಿಯರು ಸಹ ಭಯೋತ್ಪಾದಕರು ಧರಿಸುವ ವೇಷ ಧರಿಸಿಕೊಂಡು ಚೆನ್ನಾಗಿ ಮೋಸ ಮಾಡಿದರು. ಭಜರಂಗ್ ಪೋಸ್ಟ್ ನ ಹತ್ತುವುದಕ್ಕೆ ಮಂಜು ಕರಗಿದೆಯಾ ಹತ್ತಬಹುದಾ ಎಂದು ನೋಡಿಕೊಂಡು ಬರುವುದಕ್ಕೆ ಸೌರಭ್ ಕಾಲಿಯಾ 5 ಜನರೊಂದಿಗೆ ಹೋರದು. ಮೇಲೆ ನೋಡಿದ ಸೌರಭ್ ಕಾಲಿಯಾಗೆ ಕೆಲವು ಜನ ನಿಂತಿದ್ದಾರೆ ಎಂಬ ಸುದ್ದಿಯನ್ನು ಮುಟ್ಟಿಸಿ ಕಾದಾಡಲಿಕ್ಕೆ ನಿಂತರು, ಇದ್ದವರು ಭಯೋತ್ಪಾದಕರು ಎಂದುಕೊಂಡಿದ್ದರು, ಆದರೆ ಅವರು ತರಬೇತಿ ಪಡೆದಿದ್ದ ಪಾಕಿ ಸೈನಿಕರಾಗಿದ್ದರು.
ಮದ್ದು ಗುಂಡು ಮುಗೀತು ಪಾಕಿ ಸೈನಿಕರು ಸೌರಭ್ ಕಾಲಿಯಾ ಅವರನು ಸುತ್ತುವರೆದು ಎಳೆದುಕೊಂಡು ಹೋದರು. 22ದಿನಗಳ ಕಾಲ ಅವರನ್ನು ಕೂಡಿಹಾಕಿದ್ದರು. ಪೋಸ್ಟ್ ಮಾರ್ಟಮ್ ರಿಪೋರ್ಟ್ ಪ್ರಕಾರ, ಅವರಿಗೆ ಸಿಗರೇಟ್ ನಿಂದ ಚುಚ್ಚಿದ ಮಾರ್ಕ್ ಗಳಿತ್ತು. ಕಣ್ಣಿಗೆ ರಾಡ್ ನಿಂದ ಚುಚ್ಚಿ ಕಣ್ಣು ತೆಗೆದಿದ್ದರು, ಕಿವಿ, ಕೈ ಕಾಲುಗಳನ್ನು ಕತ್ತರಿಸಿ ಅವರ ಮರ್ಮಾಂಗವನ್ನು ಕತ್ತರಿಸಿ ತುಂಡು ತುಂಡಾಗಿರುವ ದೇಹವನ್ನು ಭಾರತಕ್ಕೆ 22 ದಿನಗಳ ನಂತರ ಹಸ್ತಾಂತರಿಸಿದ್ದರು.
ನನ್ನ ಮಗನಿಗೆ ಮಾಡಿದ್ದು ಅನ್ಯಾಯ ಯುದ್ಧ ನೀತಿಯ ಪ್ರಕಾರ ತಪ್ಪು, ಇದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶ್ನಿಸಿ ಎಂಬ ಬೇಡಿಕೆಯನ್ನು ಇಂದಿಗೂ ಮುಂದಿಡುತ್ತಿದ್ದಾರೆ.