ಮಹತ್ವದ ಪಾತ್ರ ವಹಿಸಿದ್ದ ಪೈಲಟ್ ಗಳು!
ಕಾರ್ಗಿಲ್ ಯುದ್ಧ ನಮ್ಮ ಕಾಲಘಟ್ಟದಲ್ಲಿ ನಡೆದಿರುವ ಯುದ್ಧವಾಗಿದ್ದು, ಯುದ್ಧದ ಇತಿಹಾಸದಲ್ಲೇ ಮೊದಲ ಬಾರಿಗೆ ಲೈವ್ ಟೆಲಿಕಾಸ್ಟ್( ನೇರ ಪ್ರಸಾರ) ನಡೆದಿತ್ತು. ಭಾರತೀಯ ಯೋಧರು ಟೈಗರ್ ಹಿಲ್ ನಿಂದ ಶತ್ರು ಸೇನೆಯ ಯೋಧರನ್ನು ಗೆಲ್ಲುವ ಮೂಲಕ ಕಾರ್ಗಿಲ್ ಯುದ್ಧವನ್ನು ನಿರ್ಣಾಯಕ ಘಟ್ಟಕ್ಕೆ ತಂದು ನಿಲ್ಲಿಸಿದ್ದರು. ಆ ವೇಳೆಗಾಗಲೇ, ಭಾರತದ ಹಲವು ಯೋಧರು ಹುತಾತ್ಮರಾಗಿದ್ದರು.
ನಿರ್ಣಾಯಕ ಘಟ್ಟವಾಗಿದ್ದ ಟೈಗರ್ ಹಿಲ್ ಕದನವನ್ನು ನೇರ ಪ್ರಸಾರವಾಗಿದ್ದು, ಕಾರ್ಗಿಲ್ ಯುದ್ಧದ ವಿಜಯೋತ್ಸವದ ಹೆಮ್ಮೆಯ ಸಂಗತಿಯಾಗಿತ್ತು. ಅಷ್ಟೇ ಅಲ್ಲದೇ ಕಾರ್ಗಿಲ್ ಯುದ್ಧದ ವೇಳೆಯಲ್ಲಿ ಟೈಗರ್ ಹಿಲ್ ನಲ್ಲಿ ಭಾರತದ ಧ್ವಜ ಹಾರಿಸುತ್ತಿದ್ದಂತೆಯೇ ಪಾಕಿಸ್ತಾನಕ್ಕೆ ಪೀಕಲಾಟ ಪ್ರಾರಂಭವಾಗಿತ್ತು. ಟೈಗರ್ ಹಿಲ್ ನಲ್ಲಿ ಭಾರತದ ಧ್ವಜ ಹಾರಿ ಯುದ್ಧ ನಿರ್ಣಾಯಕ ಘಟ್ಟ ತಲುಪುತ್ತಿದ್ದಂತೆಯೇ ಭಯಗೊಂಡಿದ್ದ ಪಾಕಿಸ್ತಾನ ಮರ್ಯಾದೆ ಉಳಿಸಿ ಎಂದು ಅಮೆರಿಕಾದ ಮೊರೆ ಹೋಗಿತ್ತು. ಇತ್ತ ಭಾರತೀಯ ಯೋಧರು ಟೈಗರ್ ಹಿಲ್ ನ್ನು ವಶಪಡಿಸಿಕೊಳ್ಳುತ್ತಿದ್ದಂತೆಯೇ ಅತ್ತ ಅಮೆರಿಕಾಗೆ ತೆರಳಿದ್ದ ಪಾಕ್ ಪ್ರಧಾನಿ, ಹೇಗಾದರೂ ಮಾಡಿ ಪಾಕಿಸ್ತಾನದ ಮರ್ಯಾದೆ ಉಳಿಸಿ ಎಂದು ಮೊರೆ ಇಟ್ಟಿದ್ದರು.
ಬಾಂಬ್ ಹಾಕಿ ಟೈಗರ್ ಹಿಲ್ ನ್ನು ಗೆದ್ದ ಪೈಲಟ್ ಗಳು!
ಟೈಗರ್ ಹಿಲ್ ನ್ನು ಗೆಲ್ಲುವುದರಲ್ಲಿ ಭಾರತೀಯ ವಾಯುಪಡೆಯ ಪೈಲಟ್ ಗಳೂ ಸಹ ಮಹತ್ವದ ಪಾತ್ರ ವಹಿಸಿದ್ದಾರೆ. 18 ವರ್ಷಗಳ ಹಿಂದೆ ನಡೆದ ಯುದ್ಧದಲ್ಲಿ ಸಮುದ್ರ ಮಟ್ಟದಿಂದ 17,400 ಅಡಿಗಳಷ್ಟು ಎತ್ತರದ ಗುರಿ ಹೊಂದಿದ್ದ ಲೇಸರ್ ಗೈಡೆಡ್ ಬಾಂಬ್ ಗಳನ್ನು ಹಾಕುವ ಮೂಲಕ ಟೈಗರ್ ಹಿಲ್ ನಲ್ಲಿದ್ದ ಪಾಕಿಸ್ತಾನದ ಪೋಸ್ಟ್ ನ್ನು ಧ್ವಂಸಗೊಳಿಸಿದ್ದರು.
ಡ್ರಾಸ್ ಟೌನ್ ಹಾಗೂ ರಾಷ್ಟ್ರೀಯ ಹೆದ್ದಾರಿ 1ಎ ಮೇಲೆ ಸ್ಪಷ್ಟವಾಗಿ ಕಣ್ಣಿಡಬಲ್ಲ ಪ್ರದೇಶದಲ್ಲಿದ್ದ ಪಾಕಿಸ್ತಾನಿಯರ ಪೋಸ್ಟ್ ಮೇಲೆ ಬಾಂಬ್ ಹಾಕಿದ್ದರ ಪರಿಣಾಮ ಪಾಕ್ ನ ಯೋಧರು/ ಅಥವಾ ಭಯೋತ್ಪಾದಕರ ಸೋಗಿನಲ್ಲಿದ್ದ ಯೋಧರ ಆಯಕಟ್ಟಿನ ಪ್ರದೇಶ ಭಾರತೀಯ ಪೈಲಟ್ ಗಳು ಬಾಂಬ್ ಹಾಕಿದ್ದರ ಪರಿಣಾಮ ಕ್ಷಣ ಮಾತ್ರದಲ್ಲಿ ಧ್ವಂಸವಾಯಿತು. ಶ್ರೀನಗರ ಹಾಗೂ ಲೇಹ್ ನಡುವೆ ಸಂಪರ್ಕ ಸೇತುವಾಗಿದ್ದ ರಾಷ್ಟ್ರೀಯ ಹೆದ್ದಾರಿ 1ಎ ಮೇಲೆ ಕಣ್ಣಿಟ್ಟಿದ್ದ ಪಾಕಿಸ್ತಾನಿ ಯೋಧರ ಪೋಸ್ಟ್ ಧ್ವಂಸವಾಗುತ್ತಿದ್ದಂತೆಯೇ ಭಾರತೀಯ ಯೋಧರಿಗೆ ಪರಿಸ್ಥಿತಿ ಅನುಕೂಲಕರವಾಗಿ ಮಾರ್ಪಟ್ಟಿತ್ತು.
ಪಾಕಿಸ್ತಾನ ಏರ್ ಫೋರ್ಸ್ ನ ವಿಮಾನಗಳನ್ನು ಎದುರುಗೊಳ್ಳಲು ಸಾಧ್ಯವಾಗಲಿಲ್ಲ:
ನಾವು ಕಾರ್ಯಾಚರಣೆ ಮಾಡುತ್ತಿದ್ದ ಪ್ರದೇಶದ ಸುತ್ತಮುತ್ತ ಪಿಎಫ್ಎ ವಿಮಾನಗಳೂ ಇದ್ದವು. ಆದರೆ ನಮಗೆ ಪಾಕ್ ವಿಮಾನಗಳನ್ನು ಎದುರುಗೊಳ್ಳಲು ಸಾಧ್ಯವಾಗಲಿಲ್ಲ, ಅಷ್ಟರ ಮಟ್ಟಿಗೆ ನಮಗೆ ನಿರಾಶಾದಾಯಕ ಅನುಭವ ಎನ್ನಬಹುದು ಎನ್ನುತ್ತಾರೆ ಸ್ಕ್ವಾಡ್ರನ್ ಲೀಡರ್ ಡಿಕೆ ಪಟ್ನಾಯಕ್.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos