ಮಹಿಳೆ-ಮನೆ-ಬದುಕು

ಸೈಟ್ ಖರೀದಿಸುವಾಗ ಶಾರ್ಟ್ ಸೈಟ್ ಆಗಬೇಡಿ

ನಿವೇಶನ ಖರೀದಿ ಎಲ್ಲರಿಗೂ ಇಷ್ಟವೇ..

ನಿವೇಶನ ಖರೀದಿ ಎಲ್ಲರಿಗೂ ಇಷ್ಟವೇ. ಆದರೆ, ಖರೀದಿ ಮಾಡುವಾಗ ಎಚ್ಚರ ತಪ್ಪಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ಅದು ಎಂತಹ ನಂಬಿಗಸ್ಥ ವ್ಯಕ್ತಿ ಅಥವಾ ಕಂಪನಿಯೇ ಆಗಿರಲಿ. ಅವರಿಂದ ಖರೀದಿ ಮಾಡುವ ಮುನ್ನ ಸೂಕ್ತ ಎಚ್ಚರಿಕೆ ವಹಿಸುವುದು ಸೂಕ್ತ. ಹಾಗಾದರೆ ನಿವೇಶನ ಖರೀದಿ ಮಾಡುವ ಮುನ್ನ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು? ನೀವೇನು ಮಾಡಬೇಕು ಎಂಬಂತಹ ಮಾಹಿತಿಗಳನ್ನು ಇಲ್ಲಿ ನಿಮಗಾಗಿ ನೀಡಲಾಗಿದೆ.

ಖರೀದಿಗೂ ಮುನ್ನ

·    ಅಕ್ಕ ಪಕ್ಕದಲ್ಲಿ ನಿಮಗೆ ಆಪ್ತರೆನಿಸುವವರು ಇದ್ದಾರೆಯೇ ತಿಳಿಯಬೇಕು.
·    ಅಲ್ಲಿನ ವಾತಾವರಣ ಹೇಗಿದೆ ತಿಳಿಯಬೇಕು. (ಉದಾ: ಅಡುಗೆ ಪರಿಮಳ (ಸಸ್ಯಾಹಾರ), ಗದ್ದಲ, ಅತಿಯಾದ ಕಾರ್ಯಕ್ರಮ ಆಗುವ ಹಾಲ್ ಇತ್ಯಾದಿ).
·    ನೀರಿನ, ತ್ಯಾಜ್ಯ ವಸ್ತುಗಳಿಗೆ ಚರಂಡಿ ವ್ಯವಸ್ಥೆ
·    ಆ ಜಾಗದಲ್ಲಿ ಕುಡಿಯಲು ಶುದ್ಧ ನೀರು ಹಾಗೂ ಇತರೆ ಬಳಕೆಗೆ ಬೇಕಾದ ನೀರಿನ ಸೌಲಭ್ಯ.
·    ವಿದ್ಯುತ್ ವ್ಯವಸ್ಥೆ.
·    ಮೊದಲು  ಆ ಜಾಗದಲ್ಲಿ ಏನಿತ್ತು ತಿಳಿದುಕೊಳ್ಳಿ. ಉದಾ; ಕೃಷಿ, ಕಟ್ಟಡ ಇದ್ದಿರಬಹುದು. ದೇಣಿಗೆ ನೀಡಿದ್ದಿರಬಹುದು. ಅದನ್ನು ಸರಿಯಾಗಿ ತಿಳಿದಿರಬೇಕು.
·    ಆ ಜಾಗದಲ್ಲಿ ಇದ್ದ ಜನರೊಂದಿಗೆ ಇತರರ ಸಂಬಂಧ.
·    (ಮುಂದೆ ನಮಗೆ ತೊಂದರೆ ಕೊಡಬಾರದು ಅಲ್ಲವೇ)
·    ಹೇಗಿದೆ ತಿಳಿದುಕೊಳ್ಳಿ.
·    ಮಕ್ಕಳಿಗೆ ಆಟವಾಡಲು ಜಾಗ ಇದೆಯೇ?
·    ನಮ್ಮ ಇಷ್ಟವಾದ ಕೆಲಸವನ್ನು ಆ ಜಾಗದಲ್ಲಿ ಮಾಡಲು ಸಾಧ್ಯವಿದೆಯೇ ತಿಳಿಯಿರಿ.

ವ್ಯಾವಹಾರಿಕವಾಗಿ ತಿಳಿದುಕೊಳ್ಳಿ
·    ವಾಹನ ನಿಲುಗಡೆಗೆ ಜಾಗ.
·    ಸಮಾರಂಭ ಮಾಡುವಾಗ ಜಾಗ ಸಾಕಾಗಬಹುದೆ?
·    ಕಚೇರಿಗೆ ಎಷ್ಟು ದೂರ ಇದೆ?
·    ನಮ್ಮ ಜಾಗದಿಂದ ಇತರೆ ಕಡೆಗೆ ಹೋಗಲು ವಾಹನ ಸೌಲಭ್ಯ ಸುಲಭವಾಗಿ ದೊರಕುವುದೇ?
·    ನಮ್ಮ ಸ್ವಂತ ವಾಹನವಾದರೆ ಇಂಧನಕ್ಕೆ ನಮ್ಮ ಕೆಲಸಕಾರ್ಯಗಳಿಗೆ ಹೋಗಲು ಅಲ್ಲಿಂದ ಎಷ್ಟು ಖರ್ಚಾಗಬಹುದು?
·    ನಮಗೆ ಅಗತ್ಯದ ಸಾಮಾನುಗಳು ಬೇಕಾದಲ್ಲಿ (ದಿನಸಿ) ಕೂಡಲೇ ಸಿಗಬಹುದೇ?
·    ಆರೋಗ್ಯ ಸಂಬಂಧವಾಗಿ ತುರ್ತು ಚಿಕಿತ್ಸೆ ಆಲೋಚಿಸಿ. ಕಡಿಮೆ ಸಮಯದಲ್ಲಿ ದೊರೆಯಬಹುದೇ?
·    ಎಲ್ಲ ದಾಖಲೆಗಳು ಸರಿಯಾಗಿದೆಯೇ?
·    ಹಳೆಯ ಜನರಿಂದ ದಾಖಲಲೆಗಳು ಮುಕ್ತವಾಗಿದೆಯೇ? ಅಥವಾ ಈ ಜಾಗದಲ್ಲಿ ಇನ್ನಾರಿಗಾದರೂ ಹಣ ಪಾವತಿಸಲು ಬಾಕಿ ಉಳಿದಿದೆಯೇ ತಿಳಿಯಿರಿ.
·    ಎಷ್ಟು ಮಹಡಿಯ ಕಟ್ಟಡ (ಪಟ್ಟಣಗಳಲ್ಲಿ) ಕಟ್ಟಲು ಅವಕಾಶ ಇದೆ ಎಂಬ ದಾಖಲೆಯನ್ನು ನೆನಪಿನಲ್ಲಿ ಪರಿಶೀಲಿಸಿ.

ಇನ್ನಿತರೆ ಸಂಗತಿಗಳು

·    ಇತರೆ ಜಾಗಗಳಿಂದ ಕಡಿಮೆ ಹಣದಲ್ಲಿ ಸರಿಯಾದ ದಾಖಲೆಯೊಂದಿಗೆ ಈ ಜಾಗ ಸಿಗುತ್ತದೆಯೇ ಪರಿಶೀಲಿಸಿ.
·    ಮುಂದೆ ಈ ಜಾಗದಲ್ಲಿ ಏನಾದರೂ ಕೆಲಸ, ಕಟ್ಟಡ ನಡೆಯುವ ಜಾಗವಾಗಿದ್ದು ನಾವು ಅದನ್ನು ಬಿಟ್ಟು ಹೋಗಬೇಕಾದ ಪರಿಸ್ಥಿತಿ ಬರಬಹುದೇ? ರೋಡ್ನಿಂದ ಎಷ್ಟು ದೂರದಲ್ಲಿ ನಾವು ಖರೀದಿಸುವ ಸ್ಥಳ ಇದೆ ಎಂದು ತಿಳಿಯಿರಿ.
·    ಮುಂದೆ ನಾವು ಈ ಜಾಗವನ್ನು ವಿಕ್ರಯಿಸುವಾಗ ಈ ಗ ನೀಡಿದ ಹಣಕ್ಕಿಂತ ಹೆಚ್ಚಿನ ಮೊತ್ತ ದೊರಕುವಂತಿದೆಯೇ ಆಲೋಚಿಸಿ.
·    ಕಡಿಮೆ ಹಣದಲ್ಲಿ 20 ಸೆಂಟ್ ಬೇಡಾವಾಗಿದ್ದಲ್ಲಿ ವಿಕ್ರಯಿಸುವಂತಿದೆಯೇ? ಅಂದರೆ ಉಳಿದ 10 ಸೆಂಟ್ಗೆ ದಾರಿ, ಕಟ್ಟಡ ಕಟ್ಟುವಂತಹ ಜಾಗವೇ ಎಂದು ಪರಿಶೀಲಿಸಿ.
·    ದಾಖಲೆ ಇರುವ ಜಾಗದೊಂದಿಗೆ ದಾಖಲೆಯಿಲ್ಲದ ಜಾಗವಿರಬಹುದು. ಅದನ್ನು ಗಮನಿಸಿ.

ಕಾನೂನು ಬದ್ಧವಾಗಿರಲಿ

·    ಜಾಗದ ಸಂಪೂರ್ಣ ಹಕ್ಕು ವಿಕ್ರಯ ಮಾಡುವವರಲ್ಲಿ ಇದೆಯೇ?
·    ಜಾಗ ಅಥವಾ ಸೊತ್ತು ವಿಕ್ರಯ ಮಾಡುವವರ ಸ್ವಾಧೀನದಲ್ಲೇ ಇದೆಯೇ?
·    ಆ ಜಾಗಕ್ಕೆ ಸಂಬಂಧಪಟ್ಟಂತೆ ಮೈನರ್ ಹಕ್ಕಿರುವಂತಹ ಮಕ್ಕಳು ಇದ್ದಾರೆಯೇ ತಿಳಿಯಿರಿ.
·    ಜಾಗಕ್ಕೆ ಸಂಬಂಧಪಟ್ಟು ಸಾಲ ಇದೆಯೋ ಅಂದರೆ ಜಾಗವನ್ನು ಅಡವಿಟ್ಟು ಸಾಲ ಪಡೆದಿದ್ದಾರೆಯೇ ತಿಳಿಯಿರಿ.
- ಕೃಷ್ಣವೇಣಿ ಪ್ರಸಾದ್ ಮುರಳಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT