ವಯಸ್ಸು 35. ಅಲ್ಲಲ್ಲಿ ಬಿಳಿ ಕೂದಲು ಕಾಣಿಸಿಕೊಂಡಿದೆ. ಮುಖದಲ್ಲಿ ಸುಕ್ಕು ಮೆಲ್ಲನೆ ಇಣುಕುತ್ತಿದೆ. ಕನ್ನಡಿಯ ಮುಂದೆ ನಿಂತು ನನಗೆ ವಯಸ್ಸಾಯಿತು ಎಂದು ನಿಟ್ಟುಸಿರು ಬಿಡುವಾಗ, ಮತ್ತಷ್ಟು ಯಂಗ್ ಕಾಣಿಸುವುದು ಹೇಗೆ? ಎಂಬ ಪ್ರಶ್ನೆಯೂ ಎದ್ದೇಳುತ್ತದೆ. ಸಾಮಾನ್ಯವಾಗಿ ಗಂಡಸರಿಗಿಂತ ಹೆಂಗಸರಿಗೆ ಬೇಗನೆ ವಯಸ್ಸಾದಂತೆ ಕಾಣುತ್ತದೆ. ಮನೆಯ ಜವಾಬ್ದಾರಿ ಹಾಗೂ ಕಚೇರಿ ಕೆಲಸಗಳ ಒತ್ತಡವೂ ಇದಕ್ಕೆ ಕಾರಣ. ಹೀಗಿರುವಾಗಲೇ ಕೇವಲ ಏಳು ದಿನಗಳಲ್ಲಿ ಮುಖದ ಸುಕ್ಕುಗಳು ಇಲ್ಲದಂತೆ ಮಾಡಿ ಎನ್ನುವ ಜಾಹೀರಾತು ಪದೇ ಪದೇ ಗಮನ ಸೆಳೆಯುತ್ತದೆ. ಆ ಕ್ರೀಮ್ ಬಳಸಲೋ, ಈ ಕ್ರೀಮ್ ಬಳಸಲೋ ಎಂಬ ದ್ವಂದ್ವ. ಕ್ರೀಮ್ ಬಳಸಿ ಅಡ್ಡಪರಿಣಾಮಗೊಳಗಾದವರ ಮುಖಗಳು ಕಣ್ಣಿಗೆ ಬರುತ್ತವೆ. ಏನೂ ಬೇಡ ಎಂದು ಸುಮ್ಮನಿರಲು ಮನಸ್ಸು ಒಲ್ಲದು. ಹಾಗಾದರೆ ಏನು ಮಾಡಬೇಕು? ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಜಸ್ಟ್ ನಿಮ್ಮ ಉಡುಗೆ ತೊಡುಗೆಗಳ ಸ್ಟೈಲ್ ಬದಲಾಯಿಸಿಕೊಳ್ಳಿ!
ಯೆಸ್ ...ನಿಮ್ಮ ಡ್ರೆಸ್ಸಿಂಗ್ ಸ್ಟೈಲ್ ನಿಂದ ಇನ್ನಷ್ಟು ಯಂಗ್ ಆಗಿ ಕಾಣಿಸಿಕೊಳ್ಳಬಹುದು.
ಡ್ರೆಸ್‌ನಿಂದ ಹೊಸ ಲುಕ್
ಯಾರಾದ್ರೂ ಆಂಟಿ ಎಂದು ಕರೆದರೆ ಕೋಪ ಬರುತ್ತೆ. ಸಾರಿ ಉಟ್ಟುಕೊಂಡು ಬಂದರೆ ಆಂಟಿ, ಜೀನ್ಸ್ ಟಾಪ್ ಹಾಕಿಕೊಂಡರೆ 25ರ ಹರೆಯದ ಹುಡುಗಿ! ಹರೆಯವನ್ನು ಮರೆಮಾಚಲು ಮಾಡರ್ನ್ ಡ್ರೆಸ್‌ಗಳನ್ನು ಧರಿಸಬೇಕೆಂಬ ರೂಲ್ಸ್ ಏನೂ ಇಲ್ಲ. ಹಾಗಾದರೆ ಯಾವ ರೀತಿಯ ಡ್ರೆಸ್ ಧರಿಸಬೇಕು? ಇಲ್ಲಿದೆ ಟಿಪ್ಸ್...
- ಲೆಗಿನ್ಸ್ ತುಂಬಾ ಆರಾಮದಾಯಕ ಎಂದೆನಿಸಿದರೂ ದೇಹಕ್ಕೆ ಅಂಟಿಕೊಂಡಿರುವ ಕಾರಣ ಕಾಲಿನ ಶೇಪ್, ತೊಡೆ ಎಲ್ಲವೂ ಎದ್ದು ಕಾಣುತ್ತೆ. ದಪ್ಪ ಇರುವವರ ಲೆಗಿನ್ಸ್ ಧರಿಸದೆ ಇರುವುದು ಒಳ್ಳೆಯದು. ಇದರ ಬದಲು ನಾರ್ಮಲ್ ಕಟಿಂಗ್ ಜೀನ್ಸ್ ಧರಿಸಿ, ಇಲ್ಲವೇ ರೆಡಿಮೇಡ್ ಚೂಡಿ ಬಾಟಂ ಧರಿಸಿ
- ಜೀನ್ಸ್ ಜತೆಗೆ ಕುರ್ತಾ ಧರಿಸಿ ಬೋರ್ ಆಗಿದ್ದರೆ, ಶರ್ಟ್ ತರ ಇರುವ ಟಾಪ್‌ಗಳನ್ನು ಧರಿಸಬಹುದು. ಸಾಧಾರಣ ಶರ್ಟ್‌ಗಳಿಗಿಂತ ಸ್ವಲ್ಪ ಉದ್ದವಿರುವ ರೋಲ್ ಅಪ್ ಸ್ಲೀವ್‌ಗಳಿರುವ ಶರ್ಟ್ ಮಾಡೆಲ್ ಟಾಪ್ ಗಳು ಉತ್ತಮ. ಸಿಂಪಲ್ ಕಲರ್ ಟಾಪ್ ಧರಿಸುವುದಾದರೆ ಚಿಕ್ಕ ಪ್ರಿಂಟ್ ಗಳಿರುವ ಶಿಫೋನ್ ಅಥವಾ ಜಾರ್ಜೆಟ್ ಸ್ಟೈಲ್ ಹೊಸ ಲುಕ್ ನೀಡುತ್ತದೆ.
- ಜಿಮ್‌ಗೆ ಹೋಗಿ ನಿಮ್ಮ ದೇಹ ಫಿಟ್ ಆಗಿದ್ದರೆ ಭುಜಗಳು ಸುಂದರವಾಗಿರುತ್ತವೆ. ಹೀಗಿರುವಾಗ ಶಾರ್ಟ್ ಸ್ಲೀವ್ ಇರುವ ಡ್ರೆಸ್ ಧರಿಸಬಹುದು. ದೇಹ ಒಳ್ಳೆಯ ಶೇಪ್ ಇದ್ದರೆ ಮಾತ್ರ ಟೀಶರ್ಟ್ ಧರಿಸಿ
ಸಾರಿಯಲ್ಲೇ ಚೆಂದ ಕಾಣ್ತೀರಿ...
- ನೀಲಿ ಜತೆ ಹಸಿರು ಬಣ್ಣ ಚೆನ್ನಾಗಿ ಒಪ್ಪುತ್ತೆ ಎಂದು ಇಂಥಾ ಬಣ್ಣದ ಸಾರಿಗಳನ್ನು ಉಡುವುದು ಬೇಡ.
- ಡೊಡ್ಡ ಬಾರ್ಡರ್‌ಗಳಿರುವ ಸಾರಿಗಳಿಂದ ದೂರವಿರಿ.
- ಕಲರ್‌ಫುಲ್ ಮೆಟೀರಿಯಲ್ ಆಗಿದ್ದರೆ ನೀಟ್ ಆ್ಯಂಡ್ ಕ್ಲೀನ್ ಬಾರ್ಡರ್‌ಗಳಿರಲಿ. ದಪ್ಪ ಬಾರ್ಡರ್‌ಗಳು ಲೈಟ್ ಕಲರ್ ಮೆಟೀರಿಯಲ್‌ಗಳಿಗೆ ಮಾತ್ರ ಒಪ್ಪುತ್ತೆ
- ತೆಳ್ಳಗಿನ ತೋಳು, ದೇಹದ ಉಬ್ಬುತಗ್ಗುಗಳು ಚೆನ್ನಾಗಿದ್ದರೆ ಪ್ರಿಂಟ್ ಸ್ಲೀವ್ ಬ್ಲೌಸ್ ಧರಿಸಬಹುದು. ದೊಡ್ಡ ಡಿಸೈನ್‌ಗಳಿರುವ ಬ್ಲೌಸ್ ಕೂಡಾ ಒಪ್ಪುತ್ತೆ.
- ದಪ್ಪ ತೋಳುಗಳಿರುವವರು ಸಾರಿ ಜತೆ ಪ್ರಿಂಟೆಡ್ ಬ್ಲೌಸ್‌ಗಳು ಅಥವಾ ಎಂಬ್ರಾಯಿಡರಿ ಇರುವ ದಪ್ಪ ಬಟ್ಟೆಯ ಬ್ಲೌಸ್ ಗಳು ಹೊಂದಲ್ಲ. ಇದರ ಬದಲು ಗಾಢ ಬಣ್ಣಗಳಿರುವ ತೆಳು ಬ್ಲೌಸ್ ಧರಿಸಿ.
- ದಪ್ಪ ಇರುವವರು ಆರ್‌ಗನ್ಜಾ ಸಾರಿ ಉಡುವುದು ಬೇಡ. . ಸಿಂಗಲ್ ಲೇಯರ್ ಸಾರಿ ಉಡುವುದಾದರೆ ಪ್ರಿನ್ಸ್ ಕಟ್ ಬ್ಲೌಸ್ ಧರಿಸಿ
ಯೇ ಅಂದರ್ ಕೀ ಬಾತ್ ಹೈ
- ದೇಹದ ಬದಲಾವಣೆಗಳನ್ನನುಸರಿಸಿ ಬ್ರಾ ಕಪ್ ಗಳನ್ನು ಆರಿಸಿ. ತುಂಬಾ ಬಿಗಿಯಾಗಿರುವ ಅಥವಾ ತುಂಬಾ ಸಡಿಲವಾಗಿರುವ ಬ್ರಾಗಳನ್ನು ಧರಿಸುವುದರಿಂದ ದೇಹ ಸೌಂದರ್ಯವನ್ನು ಆಕರ್ಷಕವಾಗಿರುವಂತೆ ಕಾಣಲ್ಲ.
- ಡ್ರೆಸ್‌ಗೆ ಹೊಂದುವಂತೆ ಬ್ರಾ ಧರಿಸಿ.
ಆತ್ಮವಿಶ್ವಾಸವಿರಲಿ...
- ಯಾವುದೇ ಡ್ರೆಸ್ ತೊಟ್ಟರೂ ನಡೆಯುವಾಗ ಕೂರುವಾಗ ಗಮನವಿರಲಿ. ನಾನು ಸುಂದರಿಯಾಗಿದ್ದೇನೆ ಎಂಬ ಆತ್ಮವಿಶ್ವಾಸ ನಿಮ್ಮ ನಡೆ ನುಡಿಯಲ್ಲಿರಲಿ.
- ಯಾರಾದರೂ ಹೌ ಓಲ್ಡ್ ಆರ್ ಯು ಎಂದು ಕೇಳಿದರೆ ವಯಸ್ಸು...ಕೇವಲ ಸಂಖ್ಯೆ ಮಾತ್ರ ಎಂದು ಹೇಳಿಬಿಡಿ.
-ಅಂಜಲಿ