ಸಿಯೋಲ್: ಪುರುಷರಿಗಿಂತ ಮಹಿಳೆಯರಲ್ಲೇ ಹೆಚ್ಚು ಸ್ಮಾರ್ಟ್ ಫೋನ್ ಬಳಕೆ ಜಾಸ್ತಿಯಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ದಿನದಲ್ಲಿ 4 ಗಂಟೆಗೂ ಹೆಚ್ಚಿನ ಕಾಲ ಮಹಿಳೆಯರು ಸ್ಮಾರ್ಟ್ ಫೋನ್ ಗೆ ದಾಸರಾಗಿರುತ್ತಾರೆ ಎಂದು ದಕ್ಷಿಣ ಕೊರಿಯಾದಲ್ಲಿ ನಡೆಸಿದ ಅಧ್ಯಯನದಿಂದ ಮಾಹಿತಿ ಬಹಿರಂಗವಾಗಿದೆ.
ಸುಮಾರು ಶೇ.52 ರಷ್ಟು ಮಂದಿ ಮೇಲೆ ನಡೆಸಿದ ಸಂಶೋಧನೆಯಲ್ಲಿ ಮಹಿಳೆಯರು ದಿನವೊಂದರಲ್ಲಿ 4 ಗಂಟೆ ಅಥವಾ ಅದಕ್ಕೂ ಹೆಚ್ಚಿನ ಸಮಯ ಸ್ಮಾರ್ಟ್ ಫೋನ್ ನಲ್ಲೇ ಕಳೆಯುತ್ತಾರೆ ಎಂದು ಹೇಳಿದೆ.
22.9 ರಷ್ಟು ಮಹಿಳೆಯರು ದಿನದಲ್ಲಿ ಸುಮಾರು ಆರು ಗಂಟೆಗಳ ಕಾಲ ಸ್ಮಾರ್ಟ್ ಫೋನ್ ಜೊತೆ ಹಾಗೂ ಶೇ.10.8 ರಷ್ಟು ಪುರುಷರು ಸ್ಮಾರ್ಟ್ ಫೋನ್ ಗಳ ಜೊತೆ ಹೆಚ್ಚು ಕಾಲ ಕಳೆಯುತ್ತಾರೆ ಎಂದು ಹೇಳಲಾಗಿದೆ.
ಮಹಿಳೆಯರು ಕರೆ ಮಾಡುವುದಕ್ಕಿಂತ ಹೆಚ್ಚಾಗಿ, ಫೇಸ್ ಬುಕ್, ಇನ್ಸ್ಟಾಗ್ರಾಮ್ ಬಳಕೆಗೆ ಸ್ಮಾರ್ಟ್ ಫೋನ್ ಬಳಸುತ್ತಾರೆ. ಕೇವಲ ಬ್ರೇಕ್ ಗಳಲ್ಲಿ ಮಾತ್ರ ಪುರುಷರು ಸ್ಮಾರ್ಟ್ ಫೋನ್ ಬಳಸಿದರೇ, ಮಹಿಳೆಯ ಬೇರೊಬ್ಬರೊಂದಿಗೆ ಮಾತನಾಡುತ್ತಿರುವಾಗಲೂ ಬಳಕೆ ಮಾಡುತ್ತಾರೆ ಎಂದು ತಿಳಿಸಿದೆ.
ಸ್ಮಾರ್ಟ್ ಫೋನ್ ಬಳಕೆ ಮಾಡದಿದ್ದರೇ ಮಹಿಳೆಯರಿಗೆ ಅಭದ್ರತೆಯ ಭಯ ಕಾಡುತ್ತದೆ. ಆದರೆ ಹೆಚ್ಚಾಗಿ ಸ್ಮಾರ್ಟ್ ಫೋನ್ ಬಳಸುವುದರಿಂದ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುತ್ತದೆ ಎಂದು ಅಧ್ಯಯನ ತಿಳಿಸಿದೆ.