ನನಗೆ ಜೀವ ನೀಡಿ ನನ್ನ ಜೀವನವನ್ನು ತುಂಬಾ ಹೃದಯಂಗಮವಾಗಿ ರೂಪಿಸಿದ ಮಹಿಳೆ. ನನ್ನ ಪ್ರೀತಿಯ ಅಮ್ಮ. ಜನನೀ ಜನ್ಮ ಭೂಮಿಶ್ಚ ಸ್ವರ್ಗದಪಿ ಗರಿಯಸೀ ಎಂಬ ಮಾತಿನಂತೆ
ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತ ಮಿಗಿಲು. ಅಮ್ಮ ಎನ್ನುವ ಎರಡು ಅಕ್ಷರದಲ್ಲಿ ಅಡಿಗಿದೆ ನಿಡವಾದ ನಿರ್ಮಲ, ಪರಿಶುದ್ಧ ಪ್ರೇಮದ ಪೂರ್ಣ ವ್ಯಕ್ತಿತ್ವ. ನಾನು ಎಂಬ ಈ ಚೈತನ್ಯವನ್ನು ತನ್ನ ಗರ್ಭದಲ್ಲಿ 9 ತಿಂಗಳು ಪ್ರೀತಿಯಿಂದ ಪೋಷಿಸಿ, ತನ್ನ ಸಕಲ ಶಕ್ತಿಯನ್ನು ಧಾರೆ ಎರೆದು, ಕಷ್ಟ ನೋವುಗಳನ್ನು ಪೂರ್ಣ ಪ್ರಮಾಣದಲ್ಲಿ ಆನಂದದಿಂದ ಸ್ವೀಕರಿಸಿ ನನಗೆ ಸುಂದರ ರೂಪ ನೀಡಿ ಈ ವಸುಂಧರೆಗೆ ಅವತರಣ ಮಾಡಿಸಿ ನನ್ನನ್ನು ಕಷ್ಟ ಪಟ್ಟು ಅತ್ಯಂತ ಪ್ರೀತಿಯಿಂದ ಸಾಕಿ ಸಲಹಿ, ಪರಿಪೂರ್ಣ ವ್ಯಕ್ತಿತ್ವ ನೀಡಿದ ನನ್ನ ಪ್ರೀತಿಯ ಅಮ್ಮನಿಗೆ ನಾನು ಚಿರ ಋಣಿ. ಏನೇ ನೋವಾದರೂ ಹೃದಯ ಕೂಗುವುದು ಅಮ್ಮ ಎಂದು. ಈ ವಿಶ್ವದಲ್ಲಿ ಸಕಲ ಜೀವಿಗಳಿಗೂ ಪ್ರೀತಿಯ ದೇವತೆಯಾಗಿರುವ ದೇವರ ಕೊಡುಗೆ ಅಮ್ಮ. ಅಮ್ಮನ ಪವಿತ್ರ ಪ್ರೀತಿಯ ಬಗ್ಗೆ ಹೇಳಲು ಪದಪುಂಜ ಸಾಲದು. ನನ್ನ ಆತ್ಮ ಶಕ್ತಿಯ ಆರಾಧ್ಯ ದೇವತಾ ಸ್ವರೂಪಿಯಾದ ನನ್ನ ಅಮ್ಮನಿಗೆ , ಪ್ರಪಂಚದ ಎಲ್ಲಾ ಅಮ್ಮಂದಿರಿಗೆ ನನ್ನ ಹೃತ್ಪೂರ್ವಕ ನಮನಗಳು.
ತಾಯಿ ನಿನ್ನ ಮಡಿಲಲಿ
ಕಣ್ಣ ತೆರೆದ ಕ್ಷಣದಲಿ...
ಸೂತ್ರವೊಂದು ಬೆಸೆಯಿತೆಮ್ಮ
ಸಂಬಂಧದದ ನೆವದಲಿ...
ಮಾತೃ ದೇವೋ ಭವ
ಗುರುದತ್ತ ಕೆ.ಜಿ ಶಿವಮೊಗ್ಗ
ಅಮೆರಿಕ