ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಪ್ರೇರಣೆ ನೀಡಿದ ಹಲವಾರು ಮಹನೀಯರು ಇರುತ್ತಾರೆ . ಹಾಗೆ ನನ್ನ ಜೀವನದಲ್ಲಿಯೂ ಸಹ ಪ್ರೇರಣೆ ನೀಡಿದ ಬಹಳಷ್ಟು ಮಹನೀಯರು ಇದ್ದಾರೆ , ನನ್ನ ಜೀವನದಲ್ಲಿ ಪ್ರೇರಣೆ ನೀಡಿದ ಮಹಿಳೆಯರ ಬಗ್ಗೆ ನನ್ನ ಜೀವನದ ಹಿಂದಿನ ಪುಟಗಳನ್ನು ತೆಗೆಯುತ್ತಾ ಹೊದಾಗ, ಬಹಳಷ್ಟುಮಹಿಳೆಯರು ನನ್ನ ಮನಸಿನಲ್ಲಿ ಕಂಡರು . ಜೀವನದಲ್ಲಿ ಪ್ರೇರಣೆ ನೀಡಿದ್ದು ಮೊದಲು ಕಣ್ಣು ಬಿಟ್ಟಾಗ ಕಂಡ ನನ್ನ ತಾಯಿಯೇ , ನನ್ನ ಸಲಹಿದ ಅಜ್ಜಿಯೇ, ನನ್ನ ಬಾಳಿನಲ್ಲಿ ಬಂಡ ನನ್ನ ಅಕ್ಕನೇ , ನನಗೆ ಅಕ್ಷರ ಕಲಿಸಿದಶಿಕ್ಷಕರೇ , ನಾನು ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ಶಾಲೆ /ಕಾಲೇಜುಗಳಲ್ಲಿ ಸಹಪಾಠಿಯಾಗಿದ್ದ ಹೆಣ್ಣು ಮಕ್ಕಳೇ, ಅಥವಾಬ್ಲಾಗ್ ಲೋಕ ಹೊಕ್ಕ ಮೇಲೆ ಸಿಕ್ಕ ಬಹಳಷ್ಟು ಸಹೋದರಿಯರೇ ಎಂಬ ಜಿಜ್ಞಾಸೆ ಶುರು ಆಯಿತು . ಹೌದು ನನ್ನ ಜೀವನದಲ್ಲಿಹಲವು ತಿರುವು ಕಾಣಲು ಪ್ರೇರಣೆ ನೀಡಿದ್ದು ಬಹಳಷ್ಟುಮಹಿಳೆಯರು . ಎಲ್ಲರನ್ನೂ ನೆನೆಯುತ್ತಾ ಕುಳಿತೆ . ಅಷ್ಟರಲ್ಲಿ ಮನದಲ್ಲಿ ಮೂಡಿದ್ದು ''ಗುರು ಬ್ರಹ್ಮ , ಗುರು ವಿಷ್ಣು , ಗುರುದೇವೋ ಮಹೇಶ್ವರ , ಗುರು ಸಾಕ್ಷಾತ್ ಪರಬ್ರಹ್ಮ , ತಸ್ಮೈ ಶ್ರೀ ಗುರುದೇವೋ ಮಹೇಶ್ವರ '' ಎಂಬ ಶ್ಲೋಕ , ಹಾಗಾಗಿ ನನ್ನ ಜೀವನದಲ್ಲಿ ಮರೆಯಲಾರದ ಒಬ್ಬ ಶಿಕ್ಷಕಿ ಕೆ. ಆರ್. ಪುಷ್ಪಾವತಿ ನಮ್ಮ ಗೌರವಾನ್ವಿತ ಕೆ. ಆರ್. ಪಿ . ಅವರ ಬಗ್ಗೆ ಬರೆಯಲು ಹೊರಟಿದ್ದೇನೆ .
ನನ್ನ ಹಳ್ಳಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿ ಮುಗಿಸಿದ , ನನ್ನನ್ನು ಐದನೇ ತರಗತಿಗೆ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆಗೆ ಸೇರಿಸಲು ನನ್ನ ಅಪ್ಪ ಮಳವಳ್ಳಿ ಪಟ್ಟಣಕ್ಕೆ ಕರೆದುಕೊಂಡು ಹೋದರು ,ಅಲ್ಲಿನ ದೊಡ್ಡ ಶಾಲೆಯ ದೃಶ್ಯ ನೋಡಿ ಹಳ್ಳಿ ಹುಡುಗನಾದ ನಾನು ಹೆದರಿಹೋಗಿದ್ದೆ ,ನೂರಾರು ಹುಡುಗರು, ಬಹಳಷ್ಟು ಶಿಕ್ಷಕರು, ಅಲ್ಲಿನ ಗಲಾಟೆ, ಮುಂತಾದವು ಸಣ್ಣ ಹಳ್ಳಿಯಲ್ಲಿ ಒಂದೇ ಕೊಠಡಿಯಲ್ಲಿ ಏಕ ಶಿಕ್ಷಕರ ಪಾಠ ಕೇಳಿ, ಕೆಲವೇ ಮಕ್ಕಳ ಜೊತೆ ಬೆಳೆದನನಗೆ ಭಯವಾಗಿತ್ತು. ಭಯ ಹಾಗು ಹೆದರಿಕೆಯಿಂದ ಮನಸು ಮುದುರಿ ಹೊಗಿತ್ತು.
ಅಪ್ಪನ ಜೊತೆ ಶಾಲೆಯಒಳಗೆ ನಡೆದ ನಾನು ನೇರವಾಗಿ ಅಂಜಿಕೆ ಇಂದಲೇ ಶಾಲೆಯಮುಖ್ಯೋಪಾಧ್ಯಾಯರ ಕೋಣೆಗೆ ಪ್ರವೇಶಿಸಿದೆ , ಅಲ್ಲಿಕುಳಿತ ಒಬ್ಬ ಮಹಿಳೆ ನನ್ನ ಅಪ್ಪನನ್ನು ಕುಳಿತುಕೊಳ್ಳಲುತಿಳಿಸಿ, ಅಪ್ಪನ ಪಕ್ಕ ನಿಂತಿದ್ದ ನನ್ನ ಕಡೆ ನಿಟ್ಟಿಸಿ ನೋಡಿದರು, ಮನದಲ್ಲಿ ಮತ್ತಷ್ಟು ಹೆದರಿಕೆಶುರು ಆಗಿತ್ತು, ಅಷ್ಟರಲ್ಲಿ "ಮಗು...... ಬಾರಪ್ಪಾ ಇಲ್ಲಿ ..... ಏನು ನಿನ್ನ ಹೆಸರು ? ಹೆದರ ಬೇಡಾ ಬಾ ನನ್ನ ಹತ್ತಿರ ಎನ್ನುತ್ತಾ ಕೈ ಹಿಡಿದು ಅವರ ಬಳಿ ಕರೆದುಕೊಂಡರು . ನನ್ನ ತಲೆ ನೇವರಿಸುತ್ತಾ ,"ಹೆದರ ಬೇಡಾ ಕಣೋ...... ನಾನಿದ್ದೇನೆ'' '' ಮಗು , ನಿನಗೆ ಏನಾದರೂ ನನ್ನ ಬಳಿ ಬಾ , '' ಎನ್ನುತ್ತಾ ಚೆನ್ನಾಗಿ ಓದಬೇಕು ಮಗು... ಎನ್ನುತ್ತಾ ಪ್ರವೇಶ ಪ್ರಕ್ರಿಯೆ ನಡೆಸಿದರು , ನನ್ನನ್ನು ನನ್ನ ತಂದೆ ತಾಯಿಯ ನಂತರ ವಾತ್ಸಲ್ಯದಿಂದ ಮಗು ಎಂದ ಮೊದಲ ಮಹಿಳೆ ನಮ್ಮ ಕೆ. ಆರ್. ಪಿ . ಮೇಡಂ.
ಆ ಮಾತುಗಳು ನನ್ನ ಮನಸಿನ ಭಯವನ್ನು ತೊಳೆದು ಹಾಕಿ ಇದು ನನ್ನ ಮನೆ ಇವರು ನನ್ನವರು ಎಂಬ ಭಾವನೆ ಮೂಡಿಸಿದವು ,ನಂತರ ಸಾಗಿತು ನನ್ನ ಪಟ್ಟಣದ ವಿಧ್ಯಾಭ್ಯಾಸದ ಯಾತ್ರೆ, ಅಚ್ಚರಿಎಂದರೆ ಆ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಅವರೇ ನನ್ನತರಗತಿಯ ಕ್ಲಾಸ್ ಟೀಚರ್ ಆಗಿ ಬಂದರು , ಮೊದಲ ದಿನವೇ ಮಕ್ಕಳನ್ನು ಒಬ್ಬೊಬ್ಬರಾಗಿ ಪರಿಚಯ ಮಾಡಿಕೊಳ್ಳುತ್ತಾ ,ಹಾಸ್ಯ ಚಟಾಕಿ ಹಾರಿಸಿ ಮಕ್ಕಳನ್ನು ನಗುಸುತ್ತಾ ಮಕ್ಕಳ ಮನಸಿಗೆ ಮತ್ತಷ್ಟು ಹತ್ತಿರವಾದರು. ನನ್ನ ಬಳಿ ಬಂದು ಮಗು ನಿನ್ನ ಹೆಸರು ಬಹಳ ಉದ್ದ ನನ್ನ ತಮ್ಮನಹೆಸರೂ ಸಹ ನಿನ್ನದೇ ನಾನು ಅವನನ್ನು ಸುಬ್ಬಣ್ಣ ಅನ್ನುತ್ತೇನೆ, ಆದರೆ ನಿನ್ನನ್ನು ಬಾಲೂ ಅನ್ನುತ್ತೇನೆ ಮಗು ಅಂದರು , ಬಹುಷಃ ಅಂದು ಅವರು ನನ್ನ ಉದ್ದದ ಹೆಸರನ್ನು ಕತ್ತರಿಸಿ ಪ್ರೀತಿಯಿಂದ ಇಟ್ಟ ಹೆಸರು ಬಾಲೂ ಇಂದಿಗೂ ಹಾಗೆ ಉಳಿದುಕೊಂಡಿದೆ ,
ನಮ್ಮ ಶಾಲೆಗೇ ಬರುತ್ತಿದ್ದ ಬಹಳಷ್ಟು ಮಕ್ಕಳು ಹಳ್ಳಿಗಳಿಂದ ಬರುತ್ತಿದ್ದರು, ಅದರಲ್ಲಿಕೆಲವರು ಉಪಾಧ್ಯಾಯರು ನೀಡಿದ ಹೋಂ ವರ್ಕ್ ಮಾಡಿಕೊಂಡುಬರುತ್ತಿರಲಿಲ್ಲ, ಕಾರಣ ಬಹಳಷ್ಟಿತ್ತು, ಶಾಲೆಯಿಂದಮನೆಗೆ ಹೋದ ಮಕ್ಕಳು ಮನೆಯಲ್ಲಿನ ವ್ಯವಸಾಯದ ಕೆಲಸ, ಮಾಡಬೇಕಿತ್ತು, ಹಾಗಾಗಿ ಆ ಮಕ್ಕಳ ಕೈಲಿ ಹೋಂ ವರ್ಕ್ ಮಾಡಲು ಆಗುತ್ತಿರಲಿಲ್ಲ, ಕೆಲವು ಉಪಾಧ್ಯಾಯರು, ಇಂತಹ ಮಕ್ಕಳಿಗೆ ಉಗ್ರ ಶಿಕ್ಷೆ ಕೊಡುತ್ತಿದ್ದರು, ಒಮ್ಮೆ ಹೋಂವರ್ಕ್ ಮಾಡಿಕೊಂಡು ಬಂದಿದ್ದ ನನ್ನನ್ನು ಹೋಂ ವರ್ಕ್ ಮಾಡದಿದ್ದ ಒಬ್ಬ ಹುಡುಗನ ಬೆನ್ನ ಮೇಲೆ ಕೂರಿಸಿದ್ದರು ಆ ಹುಡುಗ ಆ ತರಗತಿ ಅವಧಿ ಪೂರ್ಣವಾಗುವ ವರೆಗೆ ನನ್ನನ್ನು ಬೆನ್ನ ಮೇಲೆಕೂರಿಸಿಕೊಂಡು ಬಗ್ಗಿ ನಿಲ್ಲ ಬೇಕಿತ್ತು,
ಶಿಕ್ಷಕರ ಆಣತಿಯಂತೆ ನಾನೂ ಜಂಭದಿಂದ ಆ ಹುಡುಗನ ಬೆನ್ನ ಮೇಲೆ ಸವಾರಿ ಕುಳಿತೆ , ಇದನ್ನು ಅರಿತ ನಮ್ಮಕೆ. ಆರ್. ಪಿ. ಮೇಡಂ ನೇರವಾಗಿ ತರಗತಿಗೆ ಬಂದು ನನ್ನ ತರಗತಿಯಶಿಕ್ಷಕರನ್ನು ತಕ್ಷಣ ಅವರ ಕೋಣೆಗೆ ತೆರಳಲು ತಿಳಿಸಿ, ನಂತರ ನನ್ನ ಬಳಿ ಬಂದು ಕಿವಿ ಹಿಂಡುತ್ತಾ ''ಯಾಕೋ ಮುಂಡೇದೆ ಅವನ ಬೆನ್ನ ಮೇಲೆ ಕುಳಿತೆ '' ? ಅಂದ್ರೂ ಮೇಷ್ಟ್ರು ಹೇಳಿದ್ರೂಮೇಡಂ ಅದಕ್ಕೆ ಕುಳಿತೆ ಅಂದೇ, ನೋಡೋ ಒಂದು ಮನಸನ್ನು ನೋಯಿಸಿ ನೀವು ಜೀವನದಲ್ಲಿ ಏನೂ ಸಾಧಿಸಲು ಆಗೋದಿಲ್ಲಾ, ಮೊದಲುಹಿಂಸೆ ಬಿಡೀ , ಎನ್ನುತ್ತಾ , ನಾನು ಆ ಹುಡುಗನ ಮೇಲೆ ಸವಾರಿ ಮಾಡಿದರೆ ಆ ಹುಡುಗನ ಮನಸಿನಲ್ಲಿಆಗುವ ಪರಿಣಾಮದ ಬಗ್ಗೆ ತಿಳಿಸಿ ಹೇಳಿದರು, ಆ ಮಾತುಗಳು ಇಂದಿಗೂ ನನಗೆ ದಾರಿ ದೀಪವಾಗಿವೆ,
ಒಮ್ಮೆ ಶಾಲಾ ಪ್ರವಾಸ ತೆರಳಲು ಸಿದ್ದತೆ ನಡೆಸಲಾಯಿತು, ಸಾಮಾನ್ಯವಾಗಿ ಶಾಲೆ ಪ್ರವಾಸ ತೆರಳಲು ನಿರ್ಧಾರ ಮಾಡಲು ಮಕ್ಕಳನ್ನು ಕೇಳುವ ಸಾಧ್ಯತೆ ಇಲ್ಲವೆಇಲ್ಲಾ, ಆದರೆ ಇದಕ್ಕೆ ಅಪವಾದ ಎನ್ನುವಂತೆ ಪ್ರವಾಸಕ್ಕೆ ಮೊದಲು ಮಕ್ಕಳಿಗೆ ಆ ಪ್ರವಾಸದಿಂದಅನುಕೂಲ ಎಂಬ ಬಗ್ಗೆ ಆಲೋಚಿಸಿ ಮಕ್ಕಳಿಗೂ ಜವಾಬ್ಧಾರಿ ವಹಿಸಿ ಮಕ್ಕಳುಹಾಕು ಶಿಕ್ಷಕರ ಒಂದು ತಂದ ರಚಿಸಿ ಪ್ರವಾಸ ಏರ್ಪಡಿಸಿದ್ದು ಕೆ. ಆರ್. ಪಿ. ಮೇಡಂ ಹೆಗ್ಗಳಿಕೆ , ಪ್ರವಾಸ ಎಂದಿಗೂ ಮಕ್ಕಳಿಗೆ ಪ್ರಯಾಸ ಆಗಬಾರದು ಎಮ್ಬ ಮಾತನ್ನು ಹೇಳಿ ಅದರಂತೆಪ್ರವಾಸ ಆಯೋಜನೆ ಮಾಡಿಸಿದರು , ಆ ಪ್ರವಾಸದಲ್ಲಿ ಪ್ರತೀ ಊರಿನಲ್ಲೂ ಮಕ್ಕಳು ಏನು ನೋಡ ಬೇಕೆಂಬ ಬಗ್ಗೆ ಮಕ್ಕಳಿಗೆ ಒಂದು ವಾರ ಮುಂಚೆ ತಿಳಿಸಿ , ಆಊರುಗಳಿಗೆ ಸಂಬಂಧ ಪಟ್ಟ ಪುಸ್ತಕಗಳನ್ನು ಗ್ರಂಥಾಲಯಗಳಲ್ಲಿ ಓದಲು ತಿಳಿಸುತ್ತಿದ್ದರು,
ಆ ಬಗ್ಗೆ ಶಾಲೆಯಲ್ಲಿ ಮಕ್ಕಳುಹೇಳಬೇಕಿತ್ತು , ನಂತರ ಎಲ್ಲಾ ಮಕ್ಕಳ ವಿಚಾರಗಳನ್ನು ಒಳಗೊಂಡಂತೆ ನೋಡ ಬೇಕಾದ ಸ್ಥಳಗಳ ಮಾಹಿತಿ ತಯಾರು ಮಾಡುತ್ತಿದ್ದರು, ಆ ಊರಿಗೆ ತೆರಳಿದ ನಂತರ ಮೊದಲು ಆ ಊರಿನ ಸುತ್ತಾ ಮಕ್ಕಳು ಕಾಲ್ನಡಿಗೆಯಲ್ಲಿ ತೆರಳಬೇಕಿತ್ತು, ಆ ಸಮಯದಲ್ಲಿ ಆ ಊರಿನ ವಿಚಾರ ತಿಳಿಸುತ್ತಾನಮ್ಮೊಡನೆ ಉಳಿದ ಶಿಕ್ಷಕರು ಕೆ. ಆರ್. ಪಿ. ಮೇಡಂ ನೇತೃತ್ವದಲ್ಲಿ ಸಾಗುತ್ತಿದ್ದರು, ಜೊತೆಗೆ ಮಕ್ಕಳು ತಾವು ಜೋಡಿದ ಸ್ಥಳಗಳ ಬಗ್ಗೆ ತಮ್ಮ ಪ್ರವಾಸದ ಅನುಭವವನ್ನು ಬರೆದು ಶಾಲೆಗೇ ಸಲ್ಲಿಸಬೇಕಿತ್ತು, (ನನ್ನ ತಂದೆಯೂ ಸಹ ಹೀಗೆ ಮಾಡಿಸುತ್ತಿದ್ದರು , ಪ್ರತೀ ಪ್ರವಾಸದಿಂದಬಂಡ ನಂತರ ನನ್ನ ಅಪ್ಪನಿಗೆ ಅನುಭವವನ್ನು ಬರೆದುಕೊಡಬೇಕಾಗಿತ್ತು ) ಉತ್ತಮವಾಗಿ ಬರದ ವಿದ್ಯಾರ್ಥಿಯನ್ನು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತಿತ್ತು, ಈ ವಿಚಾರದಲ್ಲಿನ ಪ್ರೇರಣೆಇಂದಿಗೂ ಸಹ ನನಗೆ ಪ್ರವಾಸದ ಕಾರ್ಯಕ್ರಮ ಹಮ್ಮಿಕೊಳ್ಳಲು ದಾರಿ ದೀಪವಾಗಿದೆ, ಜೊತೆಗೆ ಪ್ರವಾಸದಲ್ಲಿ ಒಮ್ಮೆ ಸೋಮನಾಥಪುರದಲ್ಲಿನ ದೇಗುಲದಲ್ಲಿ ಹೊಯ್ಸಳ ಶಿಲ್ಪಕಲೆಗಳ ಬಗ್ಗೆ , ಹೊಯ್ಸಳ ಅರಸರ ಬಗ್ಗೆ, ದೇಗುಲ ನೋಡುವ ವಿಧಾನದ ಬಗ್ಗೆ ಮೊದಲು ತಿಳಿಸಿ ನಂತರ ಸುಮಾರು ಅರ್ಧ ದಿನಇದೇ ದೇಗುಲದ ಕಲೆಯ ವೈವಿಧ್ಯತೆಯನ್ನು ನಮಗೆ ಪರಿಚಯ ಮಾಡಿಕೊಟ್ಟರು , ಇದು ಸಹ ನನಗೆ ಇಂದಿಗೂ ಜೀವನದ ಬಹು ದೊಡ್ಡ ಪ್ರೇರಣೆ, ಇಂದಿಗೂ ನಾನು ಪ್ರವಾಸ ಹೊರಡುವ ಮೊದಲುಈ ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಪ್ರವಾಸಆಯೋಜನೆ ಮಾಡುತ್ತೇನೆ,
ಇದರಿಂದ ನನಗೆ ಬಹಳಷ್ಟು ಉತ್ತಮ ಹೊಗಳಿಕೆ ಸಿಕ್ಕಿದೆಕೂಡ , ಇವರ ಬಗ್ಗೆ ಒಂದು ಪುಸ್ತಕ ಬರೆಯುವಷ್ಟು ಅನುಭವ ನನ್ನ ಜೀವನದಲ್ಲಿನಡೆದಿದೆ, ಹಳ್ಳಿ ಮಕ್ಕಳಿಗೆಕಬ್ಬಿಣದ ಕಡಲೆ ಯಾಗಿದ್ದ ಇಂಗ್ಲಿಷ್ ಅನ್ನು ಸಿಹಿಯಾದ ಮಾತಿಂದ ಮಕ್ಕಳಿಗೆ ಕಲಿಸಿದ ಕೀರ್ತಿ ಇವರಿಗೆ ಸಲ್ಲಬೇಕು . ಇಂಗ್ಲೀಶ್ ಅಕ್ಷರಗಳನ್ನು ಆಟಾ ಆಡಿಸುತ್ತಾ ಐದನೆ ತರಗತಿಯ ಮಕ್ಕಳಿಗೆ ಕಲಿಸುತ್ತಿದ್ದರು , ನಂತರ ಇಂಗ್ಲೀಶ್ ವ್ಯಾಕರಣ, ಪದ ಬಳಕೆ, ಪದಗಳ ಅರ್ಥ ಮಕ್ಕಳಿಂದ ಬರೆಸಿ ಯಾವುದೇ ಪದ ಮರೆತು ಹೋಗದಂತೆ ಮಾಡುತ್ತಿದ್ದರು , ಜೊತೆಗೆ ಕನ್ನಡ ಬಳಕೆಯಲ್ಲಿ ಇವರನ್ನು ಮೀರಿಸುವವರುಇರಲಿಲ್ಲ, , ಮುಖ್ಯೋಪಾಧ್ಯಾಯರಾಗಿ ಶಾಲೆಯ ಆಡಳಿತ ನಡೆಸಿ, ಮಕ್ಕಳಿಗೆ ಪ್ರೀತಿಯ ಟೀಚರ್ ಆಗಿ , ನಮ್ಮೆಲ್ಲರ ಬದುಕಿಗೆ ಪ್ರೇರಣೆಯಾಗಿನಿಂತ ಇವರನ್ನು ಮರೆತರೆ ನನ್ನ ತಂದೆ ತಾಯಿಯನ್ನು ಮರೆತಂತೆ. ಪ್ರೇರಣೆ ನೀಡುವ ವ್ಯಕ್ತಿ ಇದ್ದರೆ ಇರಬೇಕು ನಮ್ಮ ಕೆ. ಆರ್ . ಪಿ. ಮೇಡಂ ತರಹ . ನನ್ನ ಜೀವನದ ಸ್ಪೂರ್ತಿ ಯಾದ ಇವರಿಗೆ ಪುಟ್ಟದಾದ ಗೌರವ ಪೂರ್ವಕ ಅಕ್ಷರ ಕಾಣಿಕೆಯನ್ನು ಸಮರ್ಪಿಸುತ್ತೇನೆ
ಪ್ರೀತಿಯಿಂದ ನಿಮ್ಮವ
೮೨೩/ಬಿ , ೧೩ ನೆಮುಖ್ಯರಸ್ತೆ , ೪ ನೆ ಹಂತ , ಟಿ .ಕೆ . ಬಡಾವಣೆ, ಮೈಸೂರು , ೫೭೦೦೦೯ .