ರಾಖೀ ಪಾಟಿಲ್ -ಪ್ರವೀಣ ದಾನಗೌಡರ್ - 
ನನ್ನ ಸ್ಫೂರ್ತಿ

ಉತ್ಸಾಹದ ಚಿಲುಮೆ, ಪ್ರೇರಣೆ ರಾಖೀ ಪಾಟಿಲ್ ಮೇಡಂ

ಅಂದು ಕಾಲೇಜಿನಲ್ಲಿ ಒಂದು ನೋಟೀಸ್ ಬೋರ್ಡ್ ನೋಡಿದೆ ರಾಷ್ಟ್ರ ಮಟ್ಟದಲ್ಲಿ ಅಂತರ ಕಾಲೇಜು ವಿಜ್ಞಾನ ಚರ್ಚಾಕೂಟ...

ಅಂದು ಕಾಲೇಜಿನಲ್ಲಿ ಒಂದು ನೋಟೀಸ್ ಬೋರ್ಡ್ ನೋಡಿದೆ ರಾಷ್ಟ್ರ ಮಟ್ಟದಲ್ಲಿ ಅಂತರ ಕಾಲೇಜು ವಿಜ್ಞಾನ  ಚರ್ಚಾಕೂಟ ಸ್ಪರ್ಧೆಯನ್ನು ಬೆಳಗಾವಿಯಲ್ಲಿ ಆಯೋಜಿಸಲಾಗಿತ್ತು, ಆದರೆ ಆ ದಿನಾಂಕದಂದೇ 3ನೇ ಸೆಮ್ ಇಂಟರ್ನಲ್ ಪರೀಕ್ಷೆಗಳು ಇದ್ದವು – ಅಂತೂ  ಈ ಸ್ಪರ್ಧೆಗೆ ಭಾಗವಸಿಸಲು ಸಾಧ್ಯವಿಲ್ಲ ಅಂದು ಕೊಂಡಿದ್ದೆ, ಆದರು ಮನಸ್ಸು ತಡೆಯದೆ HOD ರಾಖೀ ಪಾಟಿಲ್ ಮೇಡಂ  ಹತ್ತಿರ ಒಪ್ಪಿಗೆ ಕೇಳಲು ಒಂದು ಲೆಟರ್ ಬರೆದುಕೊಂಡು ಹೋದ ನನಗೆ ಮೇಡಂ ಮತ್ತು ಅವರ  ಜೊತೆಗೆ ಇದ್ದ ಗಿರಿಜಾವಾಣಿ ಮೇಡಂ ಇಬ್ಬರು ಸೇರಿ ಸಖತ್ ಹಾಗಿ ಬೈದರು. ನಾನು ಪೆಚ್ಚು ಮೊರೆ ಹಾಕಿ ಕೊಂಡು ನಿಂತದ್ದು ನೋಡಿ HOD ಮೇಡಂಗೆ ಏನ್ ಅನಿಸಿತೋ ಏನೋ ಗೊತ್ತಿಲ್ಲ, “ಪೆರ್ಮಿಶನ್ ಕೊಡ್ತೀವಿ ಮತ್ತು ನಿನಗಾಗಿ ಸ್ಪೆಷಲ್  ಆಗಿ  ಮತ್ತೊಂದಿನ ಇಂಟರ್ನಲ್  ಎಕ್ಸಾಮ್ ಇಡ್ತೀವಿ ಆದ್ರೆ ನಿನಗೆ ಗೆಲ್ಲಕಾಗುತ್ತಾ ಅಂತಾ ಕೇಳಿದ್ರು  ?”  ಅಕಸ್ಮಾತ್ ನಾನು ಗೆದ್ದೆಗೆಲ್ತೀನಿ ಅಂದ್ರೆ ಇವನದು ಬರೀ  ಓವರ್ ಕಾನ್ಫಿಡೆನ್ಸ್ ಅಂತ ಹೇಳ್ತಾರೆ ಅಂತ ಯೋಚಿಸಿ ಪ್ರಯತ್ನ ಪಡ್ತೀನಿ ಅಂದೆ.  ಅವಾಗ ಮೇಡಂ ಇಲ್ಲ ನೀನು ಗೆದ್ದೇ ಗೆಲ್ತೀಯಾ ಹೋಗು  ಅಂತ ಹೇಳಿ , ಪೇಪರ್ ಗೆ ಸೈನ್ ಮಾಡಿ ಕೊಟ್ರು.  ಏನ್ ವಿಚಿತ್ರನೋ ಗೊತ್ತಿಲ್ಲ ಅಂಥ ದೊಡ್ಡ ಕಾಂಪಿಟಿಷನ್ ನಲ್ಲಿ  ನಾನೇ  ಫಸ್ಟ್ ಬಂದು ಬಿಟ್ಟೆ, ಹೀಗೆ ಇದು ಒಂದಲ್ಲ! ಇದಾದ ಮೇಲೂ  ನಮ್ಮ ಮೇಡಂ ನಾನು ಕೇಳ್ತಿದ್ದ  ಯಾವ ಪೆರ್ಮಿಶನ್ ಗು ಇಲ್ಲಾ ಅಂತಿರಲಿಲ್ಲ . ಹೀಗಾಗಿ ಕಾಲೇಜು ದಿನಗಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕೃತಿ ಚಟುವಟಿಗಳಲ್ಲಿ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಯಿತು ಮತ್ತು ತುಂಬಾ ಸಲ ನನಗೆ ಗೆಲ್ಲಲು ಮೇಡಂ ಸ್ಫೂರ್ತಿ ನೀಡುತ್ತಿದ್ದರು.
ಒಮ್ಮೆ 4ನೇ ಸೆಮ್ ಎಕ್ಷಮ್ನಲ್ಲಿ ಫೇಲ್  ಆದ ಕಾರಣ ತುಂಬಾ ಖಿನ್ನನಾಗಿದ್ದೆ . ಆ ವಿಷಯವನ್ನು ರಾಖೀ ಪಾಟೀಲ್ ಮೇಡಂ ತಗೋತಿದ್ರು.  ನಾನು ಫೇಲ್  ಆಗಿದ್ದು ಅವರಿಗೂ ಆಶ್ಚ ರ್ಯವಾಗಿತ್ತು. ಸರಿ, ಮರು ಮೌಲ್ಯಮಾಪನಕ್ಕೆ ಹಾಕಿ, ಆನ್ಸರ್ ಪೇಪರ್ ಜೆರಾಕ್ಸ್ ಕಾಪಿ ತರಿಸು ಅಂದ್ರು . ಆವಾಗ  ಗೊತ್ತಾಗಿತ್ತು –ಪ್ರಶ್ನೆ ಸಂಖ್ಯೆ PART-B ನಲ್ಲಿ ಐದರಿಂದ ಪ್ರಾರಂಭವಾಗುತಿದ್ದವು ಆದರೆ 5A&B ಗೆ 1A&B, 6A&Bಗೆ 2A&B, 7A&B ಗೆ 3A&B ಎಂದು ತಪ್ಪಾಗಿ ಹಾಕಿದ್ದೆ. ಆದ್ದರಿಂದ ಎಲ್ಲದಕ್ಕೂ ಝೀರೋ ಮಾರ್ಕ್ಸ್  ಕೊಟ್ಟು ಫೈಲ್ ಮಾಡಿದ್ರು.  ಮತ್ತೆ ಚಾಲೆಂಜಿಂಗ್ ರೀವ್ಯಾಲ್ಯೂವೆಶನ್ ಅದು ಇದು ಅಂತ ದುಡ್ಡು ಹಾಳು ಮಾಡಬೇಡ ಕ್ವೆಶ್ಚನ್ ನಂಬರ್ ತಪ್ಪು ಅಂದಮೇಲೆ ಮಾರ್ಕ್ಸ್ ಸಿಗಲ್ಲ, ಅಷ್ಟುಕ್ಕೂ ನೀನ್ ಫೇಲ್ ಆಗಿಲ್ಲ ಅಂತ ತಿಳ್ಕೋ  ಅಂದ್ರು. ಅವರೇ ನನ್ನ ಜೆರಾಕ್ಸ್ ಪೇಪರ್ ನ ವ್ಯಾಲ್ಯೂವೇಟ್ ಮಾಡಿ ನನ್ನ  ಪ್ರಕಾರ 65  ಮಾರ್ಕ್ಸ್ ಬರಬೇಕಿತ್ತು, ಮುಂದೆ ಯಾವುದೋ ಇದಕ್ಕಿಂತ ದೊಡ್ಡ ಎಕ್ಸಾಮ್ ನಲ್ಲಿ ಮಾಡ್ತಿದ್ದೆ ಏನೋ,  ಆ ತಪ್ಪು ಇವಾಗಲೇ ಆಗಿ ಪಾಠ ಕಲಿಸಿದೆ ಅಂತ ತಿಳ್ಕೋ.  ಇನ್ನಮೇಲೆ ಯಾವತ್ತು ಯಾವ ಎಕ್ಸಾಮ್ ನಲ್ಲಿ ರೂಲ್ ನಂಬರ್ , ಕ್ವೆಶ್ಚನ್ ನಂಬರ್ ಹಾಕೋವಾಗ ತಪ್ಪು ಮಾಡಬಾರದು ಅಂದ್ರು, ಅವರ ಮಾತಿನಿಂದ ಡಿಪ್ರೆಶನ್ ನಲ್ಲಿ ಇದ್ದ ನನಗೆ ಚೈತನ್ಯ ತುಂಬಿತ್ತು. ನೆಕ್ಸ್ಟ್ ಸೆಮ್ ನಲ್ಲಿ ಈ ಸಬ್ಜೆಕ್ಟ್ ಗೆ ಚೆನ್ನಾಗಿ ಮಾರ್ಕ್ಸು ಬಂತು.
ಹೀಗೆ ಸೋಲಿನಲ್ಲೂ ಗೆಲಿವಿನಲ್ಲೂ  ಮೇಡಂ ನಮ್ಮ ಜೊತೆಗೆ ಇರ್ತಿದ್ರು, ಇನ್ನು ಡಿಪಾರ್ಟ್ಮೆಂಟ್ ನಲ್ಲಿ ತಾವು HOD ಅನ್ನೋ ಗರ್ವ ವಾಗಲಿ ವಿದ್ಯಾರ್ಥಿಗಳ ಮೇಲೆ ದರ್ಪ ತೋರಿದ್ದಾಗಲಿ ಎಂದು ಮಾಡದಂತ “Down  to Earth” ಪಾಲಿಸಿ ನಮ್ಮ ಮೇಡಂದು. ಅವರಲ್ಲಿದ್ದಂತ ತಾಳ್ಮೆ – ಕ್ಷಮಾಗುಣ,  ಯಾರೇನೆ ತಪ್ಪು ಮಾಡಿದರು ಆ ತಪ್ಪಿನ ಅರಿವು ಮೂಡಿಸಿ ಇನ್ನೊಮ್ಮೆ ಆ ತಪ್ಪು ನಡೆಯದಂತೆ ಮನವರಿಕೆ ಮಾಡ್ತಿದ್ರು, ಅವರ ಮೆಚ್ಚಿನ ನಾಣ್ನುಡಿ “Honesty is the best policy”- ನಿಜಕ್ಕೂ ಅದನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿರುವವರು, ಯಾವುದೇ ವಿದ್ಯಾರ್ಥಿಗೂ ಬೇಧ ಭಾವವಿಲ್ಲದೆ ಅನ್ಯ ಕಾರಣಗಳಿಗೆ ಇಂಟರ್ನಲ್ ಹಾಗೂ ಪ್ರಾಜೆಕ್ಟ್ ಅಂಕಗಳನ್ನು ಕತ್ತಿರಿಸದೆ ಲೋಪದೋಷವಿಲ್ಲದೆ ಅಂಕ ನೀಡುತ್ತಿದ್ದರು, ಕ್ಯಾಂಪಸ್ ಇಂಟರ್ವ್ಯೂಗಳು ಇದ್ದಾಗು ಸಹ “ಅವಕಾಶಗಳು ಎರಡನೇ ಸಲ ಬಾಗಿಲು ತಟ್ಟುವುದಿಲ್ಲ” ಎಂದು ಹೇಳುವ ಮೂಲಕ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಆಯ್ಕೆಯಾಗಲು ಪ್ರೇರಣೆ ನೀಡಿದ್ದರು. ಹೀಗೆ ನಮ್ಮ ಮೇಡಂ ನಮಗೆ ಯಾವಾಗಲು ಗ್ರೇಟ್ ಮತ್ತು ಇನ್ಸಪಿರೆಶನ್.

-ಪ್ರವೀಣ ದಾನಗೌಡರ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

ಚಿಕ್ಕಬಳ್ಳಾಪುರ: ಗಂಗಮ್ಮ ದೇವಿ ವಿಗ್ರಹದ ಮೇಲೆ ಕಾಲಿಟ್ಟು ಮಹಿಳೆಯರ ಸ್ನಾನ, Video ವೈರಲ್!

Konaseema ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ; ಮಾಲೀಕ ಸೇರಿ ಕನಿಷ್ಠ 7 ಸಾವು, ಹಲವರಿಗೆ ಗಂಭೀರ ಗಾಯ

ಮೊದಲು 60 ಕೋಟಿ ಠೇವಣಿಯಿಡಿ: ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿದೇಶ ಪ್ರವಾಸಕ್ಕೆ ಬಾಂಬೆ ಹೈಕೋರ್ಟ್ ನಿರ್ಬಂಧ!

ಪಾಕಿಸ್ತಾನದಲ್ಲಿ ರಕ್ತದೋಕುಳಿ: ಎನ್‌ಕೌಂಟರ್‌ ವೇಳೆ Pakistan ಲೆಫ್ಟಿನೆಂಟ್ ಕರ್ನಲ್, ಮೇಜರ್ ಸೇರಿದಂತೆ 11 ಪಾಕ್ ಸೈನಿಕರ ಹತ್ಯೆ

SCROLL FOR NEXT