ಸಾಂದರ್ಭಿಕ ಚಿತ್ರ 
ಮಹಿಳಾ ಸಹಾಯವಾಣಿ

ಉದ್ಯೋಗಸ್ಥ ಮಹಿಳೆಯರ ರಕ್ಷಣೆಗೆ ದೂರು ಸಮಿತಿ ರಚನೆ

ಸುರಕ್ಷಿತ ಕೆಲಸದ ಪರಿಸರ ಪ್ರತಿಯೊಬ್ಬ ಉದ್ಯೋಗಸ್ಥ ಮಹಿಳೆಯ ಹಕ್ಕು. ಆದರೆ, ಅಂತಹ ಪರಿಸ್ಥಿತಿ ಸದ್ಯಕ್ಕೆ ದೂರವಾಗಿದೆ ಎಂದರೆ ತಪ್ಪಾಗಲಾರದು...

ಸುರಕ್ಷಿತ ಕೆಲಸದ ಪರಿಸರ ಪ್ರತಿಯೊಬ್ಬ ಉದ್ಯೋಗಸ್ಥ ಮಹಿಳೆಯ ಹಕ್ಕು. ಆದರೆ, ಅಂತಹ ಪರಿಸ್ಥಿತಿ ಸದ್ಯಕ್ಕೆ ದೂರವಾಗಿದೆ ಎಂದರೆ ತಪ್ಪಾಗಲಾರದು. ಕೆಲಸ ಮಾಡುತ್ತಿರುವ ಮಹಿಳೆಗೆ ಮಾನಸಿಕವಾಗಿ, ದೈಹಿಕವಾಗಿ ನೋವು ನೀಡುವುದಲ್ಲದೇ, ಆಕೆಯನ್ನು ಬ್ಲಾಕ್ ಮೇಲ್ ಮಾಡುವಂತಹ ಪ್ರಕರಣಗಳು ಹೆಚ್ಚಾಗಿವೆ.

ಇಂತಹ ಹಿಂಸೆಯಿಂದ ಮಹಿಳೆಯರನ್ನು ರಕ್ಷಿಸುವಲ್ಲಿ ಸಂಸ್ಥೆ ಪಾತ್ರವಹಿಸಬೇಕು. ಮಹಿಳೆಗೆ ಸುರಕ್ಷಿತ ಪರಿಸರ ನಿರ್ಮಾಣದ ಜವಾಬ್ದಾರಿ ಉದ್ಯೋಗದಾತರದ್ದು ಹಾಗೂ ಸಂಸ್ಥೆಗಳ ಮಾಲೀಕರದ್ದಾಗಿರುತ್ತದೆ. ಉದ್ಯೋಗಸ್ಥ ಮಹಿಳೆಯರ ರಕ್ಷಣೆಗಾಗಿ ಸುಪ್ರೀಂ ಕೋರ್ಟ್ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದ್ದು, ಇದನ್ನು ಎಲ್ಲ ಸರ್ಕಾರಿ, ಖಾಸಗಿ ಹಾಗೂ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಅನುಸರಿಸಬೇಕು.

ಮಹಿಳೆಯರ ರಕ್ಷಣೆಗೆ ದೂರು ಸಮಿತಿ ರಚನೆ: ಸುಪ್ರೀಂ ಕೋರ್ಟ್ ಆದೇಶ

  • ಪ್ರತಿಯೊಂದು ಸರ್ಕಾರಿ ಅಥವಾ ಖಾಸಗಿ ಕಚೇರಿಯಲ್ಲಿಯೂ ದೂರು ಸಮಿತಿಯ ರಚನೆ ಕಡ್ಡಾಯ
  • ಇದಕ್ಕೆ ಮಹಿಳೆಯೇ ಅಧ್ಯಕ್ಷಳಾಗಿರಬೇಕು
  • ಅರ್ಧದಷ್ಟು ಸದಸ್ಯರು ಮಹಿಳೆಯರಾಗಿರಬೇಕು
  • ಈ ವಿಷಯದ ಬಗ್ಗೆ ಅರಿವಿರುವ ಸರ್ಕಾರೇತರ ಸಂಘ ಅಥವಾ ಸಂಸ್ಥೆಯ ಒಬ್ಬ ಸದಸ್ಯರು ಇರಬೇಕು
  • ಲೈಂಗಿಕ ಕಿರುಕುಳಕ್ಕೆ ಒಳಗಾದಲ್ಲಿ ಕೂಡಲೇ ದೂರು ಸಮಿತಿಗೆ ದೂರು ನೀಡಿ

ವಿಚಾರಣೆಯ ರೀತಿ

  • ವಿಚಾರಣೆ ಅನೌಪಚಾರಿಕವಾಗಿರಬೇಕು
  • ದೂರು ನೀಡಿದವರನ್ನು ಗೌರವದಿಂದ ನಡೆಸಿಕೊಳ್ಳಬೇಕು
  • ಕಿರುಕುಳದ ಬಗ್ಗೆ ಪ್ರತ್ಯಕ್ಷ ಸಾಕ್ಷಿಯನ್ನೊದಗಿಸುವಂತೆ ಒತ್ತಾಯಿಸಬಾರದು ಏಕೆಂದರೆ ಇಂಥ ಘಟನೆಗಳೆಲ್ಲ ನಡೆಯುವುದು ಯಾರು ಇಲ್ಲದಾಗಲೇ
  • ದೂರು ನೀಡಿದವರಿಗೆ ಮಾತನಾಡಲು ಮೊದಲು ಅವಕಾಶ ಕೊಡಬೇಕು
  • ಇಲ್ಲಿ ಅವರ ಆರೋಪವನ್ನು ಸಂದೇಹಕ್ಕೆ ಆಸ್ಪದವಿಲ್ಲದಂತೆ ರುಜುವಾತು ಪಡಿಸುವ ಅಗತ್ಯವಿಲ್ಲ
  • ವಿಚಾರಣೆಗೆ ಮುಂಚೆಯೇ ಕಿರುಕುಳ ನೀಡಿದವನನ್ನು ಅಥವಾ ತನ್ನನ್ನು ವರ್ಗಾಯಿಸುವಂತೆ ಕೇಳುವ ಹಕ್ಕು ದೂರು ನೀಡಿದ ಮಹಿಳೆಗಿದೆ.


ಸಮಿತಿಯ ಜವಾಬ್ದಾರಿ

  • ಸಮಿತಿ ಸ್ವೀಕರಿಸಿದ ದೂರುಗಳ ಸಂಬಂಧದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಪ್ರತಿ ವರ್ಷ ಸರ್ಕಾರಕ್ಕೆ ವರದಿ ಸಲ್ಲಿಸಬೇಕು
  • ದೂರು ಸಮತಿ ನಡೆಸಿದ ವಿಚಾರಣೆ ಅಂತಿಮ. ದೂರು ಸಮಿತಿಯ ವರದಿಯ ಆಧಾರದ ಮೇಲೆ ಶಿಸ್ತು ಪ್ರಾಧಿಕಾರ ನಿಯಮಗಳನುಸಾರ ಕ್ರಮ ಕೈಗೊಳ್ಳುತ್ತದೆ.
  • ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳವನ್ನು ನಿಷೇಧಿಸಲಾಗಿದೆ ಎಂಬ ಬಗ್ಗೆ ಸಂಸ್ಥೆ ಸುತ್ತೋಲೆ ಪ್ರಕಟಿಸಬೇಕು.
  • ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ನಿಯಮಗಳಲ್ಲಿ ಲೈಂಗಿಕ ಕಿರುಕುಳವನ್ನು ನಿಷೇಧಿಸುವ ಮತ್ತು ಅಂಥ ಅಪರಾಧಕ್ಕೆ ಸೂಕ್ತ ದಂಡ ವಿಧಿಸುವ ನಿಯಮಗಳನ್ನು ಸೇರಿಸಬೇಕು.
  • ಲೈಂಗಿಕ ಕಿರುಕುಳದ ಬಗ್ಗೆ ವಿಚಾರಣೆ ನಡೆಸುವಾಗ ದೂರು ನೀಡಿದವರಿಗೆ ಹಾಗೂ ಸಾಕ್ಷಿಗಳಿಗೆ ತೊಂದರೆ ಕೊಡದಂತೆ ಹಾಗೂ ತಾರತಮ್ಯವಾಗದಂತೆ ನೋಡಿಕೊಳ್ಳಬೇಕು.
  • ಸಂಸ್ಥೆಯ ಉದ್ಯೋಗಿಗಳಲ್ಲದ ಹೊರಗಿನ ವ್ಯಕ್ತಿಗಳಿಂದಾಗುವ ಲೈಂಗಿಕ ಕಿರುಕುಳದಿಂದಲೂ ಮಹಿಳಾ ಉದ್ಯೋಗಿಗಳಿಗೆ ರಕ್ಷಣೆ ಕೊಡಬೇಕು
  • ಉದ್ಯೋಗಿಯ ವರ್ತನೆ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವನೆಸಿದರೆ ಅಂಥ ವ್ಯಕ್ತಿಯ ವಿರುದ್ಧ ಸಂಸ್ಥೆಯ ಮಾಲೀಕ ಕೂಡಲೇ ಪೊಲೀಸರಿಗೆ ದೂರು ನೀಡಬೇಕು
  • ಲೈಂಗಿಕ ಕಿರುಕುಳದ ಪ್ರಕರಣಗಳಲ್ಲಿ ದೂರು ಸಮಿತಿಯೇ ವಿಚಾರಣಾ ಪ್ರಾಧಿಕಾರ


(ಮಹಿಳಾ ಆಯೋಗದಿಂದ ಪಡೆದ ಮಾಹಿತಿ)

-ಮೈನಾಶ್ರೀ.ಸಿ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel