ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಅಮೆರಿಕ ಇಸಿಸ್ ಗಿಂತಲೂ ಕ್ರೂರಿ: ಫ್ರೋಪೆಸರ್ ದೀಪಾ ಕುಮಾರ್

ವಿದ್ವಂಸಕ ಕೃತ್ಯಗಳ ಮೂಲಕ ದೇಶದಲ್ಲಿ ಅತಿ ಕ್ರೂರಿ ಉಗ್ರ ಸಂಘಟನೆ ಎನಿಸಿಕೊಂಡಿರುವ ಇಸ್ಲಾಮಿಕ್ ಸ್ಟೇಟ್ ಗಿಂತ ಇರಾಕ್‌, ಅಫ್ಘಾನಿಸ್ತಾನ...

ದೀಪಾ ಕುಮಾರ್
Vishwanath S
Updated On : 2 Aug 2015, 12:37 pm

ವಾಷಿಂಗ್ಟನ್‌: ವಿದ್ವಂಸಕ ಕೃತ್ಯಗಳ ಮೂಲಕ ದೇಶದಲ್ಲಿ ಅತಿ ಕ್ರೂರಿ ಉಗ್ರ ಸಂಘಟನೆ ಎನಿಸಿಕೊಂಡಿರುವ ಇಸ್ಲಾಮಿಕ್ ಸ್ಟೇಟ್ ಗಿಂತ ಇರಾಕ್‌, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಜನರನ್ನು ಕೊಂದಿರುವ ಅಮೆರಿಕ ಅತೀ ಕ್ರೂರಿ ಎಂದು ಭಾರತೀಯ ಮೂಲದ ಅಮೆರಿಕದ ಫ್ರೊಫೆಸರ್‌ ದೀಪಾ ಕುಮಾರ್‌ ಹೇಳಿಕೆ ಇದೀಗ ವಿವಾದಕ್ಕೆ ನಾಂದಿ ಹಾಡಿದೆ.

ಇಸ್ಲಾಮಿಕ್ ಸ್ಟೇಟ್ ಅತಿ ಕ್ರೂರ. ಆದರೆ ಇರಾಕ್‌, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿ 13 ಲಕ್ಷ ಮಂದಿಯನ್ನು ಸಾಯಿಸಿರುವ ಅಮೆರಿಕ ಅದಕ್ಕಿಂತಲೂ ಕ್ರೂರಿ, ಎಂದು ರುಟ್ಗರ್ಸ್‌ ವಿಶ್ವವಿದ್ಯಾಲಯದ ಮಾಧ್ಯಮ ವಿಭಾಗದ ಪ್ರೊಫೆಸರ್‌ ದೀಪಾ ಕುಮಾರ್‌ ಮಾರ್ಚ್‌ 26ರಂದು ಟ್ವೀಟ್‌ ಮಾಡಿದ್ದರು ಇದು ಮಾಧ್ಯಮ ಹಾಗೂ ಶೈಕ್ಷಣಿಕ ವಲಯದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದ್ದಾರೆ.

ಪೋಸ್ಟ್‌ ಆದ ಕೆಲವು ದಿನಗಳ ನಂತರ ಗಮನ ಸೆಳೆದಿರುವ ಅವರ ಟ್ವೀಟ್‌ ಬಗ್ಗೆ ಹಲವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅಮೆರಿಕದ ಬಗ್ಗೆ ಕೆಟ್ಟ ಭಾವನೆ ಇದ್ದರೆ, ಅಮೆರಿಕದಿಂದ ಹೊರ ಹೋಗುವಂತೆ ಹಲವರು ಸೂಚಿಸಿದ್ದಾರೆ. ಇನ್ನು ಕೆಲವರು ಅದನ್ನು ತಮಾಷೆ ಎಂದು ನಿರ್ಲಕ್ಷಿಸಿದ್ದಾರೆ. ಇನ್ನು ಕೆಲ ಸಹೋದ್ಯೋಗಿಗಳು ಅವರ ಅಭಿಪ್ರಾಯಕ್ಕೆ ಸಹಮತಿ ಸೂಚಿಸಿ, ಅವರನ್ನು ಸಮರ್ಥಿಸಿಕೊಂಡಿದ್ದಾರೆ.

ದೀಪಾ ಅವರ ಈ ಟ್ವೀಟ್‌ ಬಗ್ಗೆ ಫಾಕ್ಸ್‌ ನ್ಯೂಸ್‌ ಶುಕ್ರವಾರ ವರದಿ ಪ್ರಸಾರ ಮಾಡಿದ ನಂತರ ವಿಷಯ ವಿವಾದದ ಸ್ವರೂಪ ಪಡೆದಿದ್ದು, ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments