ಅಶ್ಲೀಲ ವಿಡಿಯೋಗಳ ವಿರುದ್ಧ ಚೀನಾ ಸಮರ
ಅಶ್ಲೀಲ ವೀಡಿಯೋಗಳ ವಿರುದ್ಧ ಚೀನಾ ಸರ್ಕಾರ ಸಮರ ಸಾರಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹವ್ಯಾಸಿ ಸೆಕ್ಸ್ ವೀಡಿಯೋಗಳನ್ನು ತೆಗೆದುಹಾಕಲು...
ಬೀಜಿಂಗ್: ಅಶ್ಲೀಲ ವೀಡಿಯೋಗಳ ವಿರುದ್ಧ ಚೀನಾ ಸರ್ಕಾರ ಸಮರ ಸಾರಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹವ್ಯಾಸಿ ಸೆಕ್ಸ್ ವೀಡಿಯೋಗಳನ್ನು ತೆಗೆದುಹಾಕಲು ಸರ್ಕಾರ ನಿರ್ಧರಿಸಿದೆ. ಸ್ಮಾರ್ಟ್ ಫೋನ್ಗಳ ಈ ಕಾಲದಲ್ಲಿ ಸೆಕ್ಸ್ ವೀಡಿಯೋಗಳನ್ನು ಸಿದ್ಧಪಡಿಸಿ ಆನ್ಲೈನ್ಗೆ ಅಪ್ಲೋಡ್ ಮಾಡುವುದು ಸುಲಭವಾಗಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಅಂಥ ವೀಡಿಯೋಗಳು ವೆಬ್ ಸೈಟ್ಗೆ ಅಪ್ಲೋಡ್ ಆಗುವುದನ್ನು ತಡೆಯುವ ಅಗತ್ಯವಿದೆ ಎಂದು ಅಲ್ಲಿನ ಸರ್ಕಾರ ಅಭಿಪ್ರಾಯಪಟ್ಟಿದೆ. ಬಟ್ಟೆ ಅಂಗಡಿಯೊಂದರ ಟ್ರಯಲ್ ರೂಮ್ ನಲ್ಲಿ ತೆಗೆದಿದ್ದ ಸೆಕ್ಸ್ ವೀಡಿಯೊವೊಂದು ಚೀನಾದಲ್ಲಿ ಇತ್ತೀಚೆಗೆ ಸಾಕಷ್ಟು ಚರ್ಚೆಹುಟ್ಟುಹಾಕಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.