ನೇಪಾಳ ಹಿಂದೂ ರಾಷ್ಟ್ರವಾಗಬೇಕು ಎಂದ ನೇಪಾಳ ಮುಸ್ಲೀಮರು
ನೇಪಾಳದಲ್ಲಿ ಇಸ್ಲಾಂ ಉಳಿಯ ಬೇಕು ಅಂದ್ರೆ ನೇಪಾಳ ಹಿಂದೂ ರಾಜ್ಯವಾಗಬೇಕು'' ಇಂಥ ಅಚ್ಚರಿಯ ಅಭಿಪ್ರಾಯ ಬಂದಿರುವುದು...
ಕಠ್ಮಂಡು: "ನೇಪಾಳದಲ್ಲಿ ಇಸ್ಲಾಂ ಉಳಿಯ ಬೇಕು ಅಂದ್ರೆ ನೇಪಾಳ ಹಿಂದೂ ರಾಜ್ಯವಾಗಬೇಕು'' ಇಂಥ ಅಚ್ಚರಿಯ ಅಭಿಪ್ರಾಯ ಬಂದಿರುವುದು ಮೂಲ ನೇಪಾಳಿಗಳಿಂದಲೋ ಹಿಂದೂಗಳಿಂದಲೋ ಅಲ್ಲ. ನೇಪಾಳದ ಮುಸಲ್ಮಾನರೇ ಹೇಳಿರುವ ಮಾತಿದು.
ನೇಪಾಳದಲ್ಲಿ ಹಿಂದೂರಾಜ್ಯ ಸ್ಥಾಪನೆಗಾಗಿ ಹೋರಾಟ ನಡೆಸುತ್ತಿರುವ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವ ರಾಪ್ಟಿ ಮುಸ್ಲಿಂ ಸಮಾಜದ ಅಧ್ಯಕ್ಷ ಅಮ್ಜದ್ ಅಲಿ ಈ ಮಾತುಗಳನ್ನಾಡಿದ್ದು, ``ಈ ಹೋರಾಟ ಇಸ್ಲಾಂ ರಕ್ಷಣೆಗಾಗಿ. ನಾನು ನನ್ನ ಧರ್ಮವನ್ನು ರಕ್ಷಿಸಿಕೊಳ್ಳುವ ಸಲುವಾಗಿ ನೇಪಾಳವನ್ನು ಹಿಂದೂ ರಾಜ್ಯವೆಂದು ಘೋಷಿಸಿ ಎಂದು ಒತ್ತಾಯಿಸುತ್ತಿದ್ದೇನೆ'' ಎಂದಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.