ಉಗ್ಗಿ 
ವಿದೇಶ

ದಿ ಆರ್ಟಿಸ್ಟ್ ನ ಶ್ವಾನ ತಾರೆ ಉಗ್ಗಿ ಇನ್ನಿಲ್ಲ

`ದಿ ಆರ್ಟಿಸ್ಟ್'ನ ಉಗ್ಗಿ ಇನ್ನಿಲ್ಲ! ತನ್ನ ಮನೋಜ್ಞ ಅಭಿನಯದಿಂದ ಜನಮೆಚ್ಚು ಗೆಗೆ ಪಾತ್ರವಾಗಿದ್ದ, ಪ್ರಶಸ್ತಿಗಾಗಿ ಹಾಲಿವುಡ್ ನಟರಿಗೇ...

ವಾಷಿಂಗ್ಟನ್: `ದಿ ಆರ್ಟಿಸ್ಟ್'ನ ಉಗ್ಗಿ ಇನ್ನಿಲ್ಲ! ತನ್ನ ಮನೋಜ್ಞ ಅಭಿನಯದಿಂದ ಜನಮೆಚ್ಚು ಗೆಗೆ ಪಾತ್ರವಾಗಿದ್ದ, ಪ್ರಶಸ್ತಿಗಾಗಿ ಹಾಲಿವುಡ್ ನಟರಿಗೇ ಪೈಪೋನೀಡಿದ್ದ ಶ್ವಾನ `ಉಗ್ಗಿ' ಲಾಸ್ ಏಂಜಲೀಸ್‍ನಲ್ಲಿ ಸಾವನ್ನಪ್ಪಿದೆ. ಈ ಶ್ವಾನಕ್ಕೆ 13 ವರ್ಷ ವಯಸ್ಸಾಗಿತ್ತು. ಉಗ್ಗಿ ಸಾವಿನ ವಿಷಯವನ್ನು ಫೇಸ್‍ಬುಕ್ ಮೂಲಕ ದೃಢಪಡಿಸಿರುವ ಅದರ ಮಾಲೀಕ ಒಮರ್ ವೋನ್ ಮುಲ್ಲರ್, ``ನಮ್ಮೆಲ್ಲರ ಒಲವಿನ `ಹುಡುಗ' (ಶ್ವಾನ) ಇನ್ನಿಲ್ಲ ಎಂದು ಹೇಳಲು ವಿಷಾದಿಸುತ್ತೇನೆ. ಉಗ್ಗಿಯ ಜನನೇಂದ್ರಿಯದ ಗ್ರಂಥಿಯಲ್ಲಿ ಕ್ಯಾನ್ಸರ್ ಗಡ್ಡೆ ಬೆಳೆದಿತ್ತು. ಇದರಿಂದ ಬಳಲಿ ಉಗ್ಗಿ ಸಾವನ್ನಿಪ್ಪಿದ್ದಾನೆ. ಈಗ ಆತ ನೋವೇ ಇಲ್ಲದ ಲೋಕಕ್ಕೆ ಪಯಣ ಆರಂಭಿಸಿದ್ದಾನೆ'' ಎಂದಿದ್ದಾರೆ. ಉಗ್ಗಿ ಮೃತಪಟ್ಟ ವಿಚಾರ ಬಹಿರಂಗವಾಗುತ್ತಿದ್ದಂತೆ, ವಿಶ್ವಾದ್ಯಂತ ಸಾವಿರಾರು ಮಂದಿ ಟ್ವಿಟರ್ ಮೂಲಕ ಉಗ್ಗಿಯ ಸಾವಿಗೆ
ಶೋಕ ವ್ಯಕ್ತಪಡಿಸಿದ್ದಾರೆ.

ನಟನೆಯಲ್ಲಿ ಎತ್ತಿದ ಕೈ: ಉಗ್ಗಿ ತನ್ನ ನಟನಾ ಸಾಮರ್ಥ್ಯದ ಮೂಲಕವೇ ಜನಮನ ಗೆದ್ದಿತ್ತು. ಈ ಶ್ವಾನ ನಟಿಸಿದ `ದಿ ಆರ್ಟಿಸ್ಟ್' ಚಲನಚಿತ್ರವು 2012ರಲ್ಲಿ ಅತ್ಯುತ್ತಮ ಚಿತ್ರ ಸೇರಿದಂತೆ ಐದು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. 2011ರ ಕ್ಯಾನೆ ಚಲನಚಿತ್ರೋತ್ಸವದಲ್ಲಿ `ದಿ ಪಾಮ್  ಡಾಗ್' ಪ್ರಶಸ್ತಿಯು ಉಗ್ಗಿಯ ಮಡಿಲು ಸೇರಿತ್ತು. ರೆಡ್ ಕಾರ್ಪೆಟ್‍ನಲ್ಲೂ ನಡೆದು ಈ ಶ್ವಾನ ಎಲ್ಲರ ಗಮನ
ಸೆಳೆದಿತ್ತು. 2012ರಲ್ಲಿ ಉಗ್ಗಿಯ ನಿವೃತ್ತಿ ಕಾರ್ಯಕ್ರಮದ ವೇಳೆ ಗ್ರೌಮೋನ್ಸ್ ಚೈನೀಸ್ ಥಿಯೇಟರ್‍ನ ಹೊರಗೆ ಸಿಮೆಂಟ್ ಮೇಲೆ ಪಾದವನ್ನಿಟ್ಟ ಮೊದಲ ಶ್ವಾನ ಎಂಬ ಹೆಗ್ಗಳಿಕೆಗೂ
ಅದು ಪಾತ್ರವಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಉಗ್ಗಿಯ ಮಾಲೀಕ ಮುಲ್ಲರ್, ``ಉಗ್ಗಿಯನ್ನು ನೋಡಿದ ಎಲ್ಲರೂ ನಾನೊಬ್ಬ ಅತ್ಯುತ್ತಮ ತರಬೇತುದಾರ ಎಂದು ಭಾವಿಸುತ್ತಾರೆ. ಆದರೆ, ನಾನು ಹಾಗೆ
ಭಾವಿಸಲ್ಲ. ನನ್ನ ಪ್ರಕಾರ, ಉಗ್ಗಿ ಅತ್ಯುತ್ತಮ ಶ್ವಾನ'' ಎಂದಿದ್ದರು. 2012ರಲ್ಲಿ ಸಿನಿಮಾ ಕ್ಷೇತ್ರಕ್ಕೆ ಗುಡ್‍ಬೈ ಹೇಳಿದ ಬಳಿಕವೂ ಉಗ್ಗಿ, ಟಿವಿ ಪರದೆಯಲ್ಲಿ ಕಾಣಿಸುತ್ತಿತ್ತು. 2013ರ ಟಿವಿ ಮೂವಿ ಹಾಲಿಡೇ ರೋಡ್ ಟ್ರಿಪ್ನಲ್ಲಿ ಉಗ್ಗಿಯು ಸ್ಕೂಟ್ಸ್ ಎಂಬ ಹೆಸರಿನ ನಾಯಿಯ ಪಾತ್ರ ಮಾಡಿತ್ತು. ಅಷ್ಟೇ ಅಲ್ಲ, ಉಗ್ಗಿ `ಮೈ ಸ್ಟೋರಿ' ಎಂಬ ಜೀವನಚರಿತ್ರೆಯನ್ನೂ ಹೊಂದಿದ್ದು, 2012ರಲ್ಲಿ ಇದು ಬಿಡುಗಡೆ ಮಾಗಿದೆ.



ಪ್ರಮುಖ ಚಿತ್ರಗಳು
ವಾಟರ್ ಫಾರ್ ಎಲಿಫೆಂಟ್ಸ್, ದಿ ಕ್ಯಾಂಪೈನ್, ದಿ ಆರ್ಟಿಸ್ಟ್, ಹಾಲಿಡೇ ರೋಡ್ ಟ್ರಿಪ್, ದಿ ಡಾಗ್ ಇತ್ಯಾದಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!