ಕೋಳಿ 
ವಿದೇಶ

ಕೋಳಿ ಹುಟ್ಟಿದ್ದು ಚೀನಾದಲ್ಲಿ!

ಕೋಳಿ ಮೊದಲಾ ಮೊಟ್ಟೆ ಮೊದಲಾ ಎಂಬ ಚರ್ಚೆಗೆ ಉತ್ತರ ಸಿಗದೆಯೇ ಆ ಪ್ರಶ್ನೆಯನ್ನೇ ಬಿಟ್ಟು ಬಿಡಲಾಗಿದೆ. ಆದರೆ ಕೋಳಿ ಮೊದಲು ಹುಟ್ಟಿದ್ದು ಎಲ್ಲಿ ಎಂಬ...

ಬೀಜಿಂಗ್: ಕೋಳಿ ಮೊದಲಾ ಮೊಟ್ಟೆ ಮೊದಲಾ ಎಂಬ ಚರ್ಚೆಗೆ ಉತ್ತರ ಸಿಗದೆಯೇ ಆ ಪ್ರಶ್ನೆಯನ್ನೇ ಬಿಟ್ಟು ಬಿಡಲಾಗಿದೆ. ಆದರೆ ಕೋಳಿ ಮೊದಲು ಹುಟ್ಟಿದ್ದು ಎಲ್ಲಿ ಎಂಬ ಚರ್ಚೆಗೆ
ಉತ್ತರ ನೀಡಲು ಸಂಶೋಧನಾ ವರದಿಯೊಂದು ಸಿದ್ಧವಾಗಿದೆ. ಆದರೆ ಆ ಕೋಳಿಯ ಮೊಟ್ಟೆ ಎಲ್ಲಿಯದು? ಅದು ಹೇಗೆ ಬಂತು ಎಂಬೆಲ್ಲ ಅಡ್ಡಪ್ರಶ್ನೆಗಳನ್ನು ಮಾತ್ರ ಕೇಳುವಂತಿಲ್ಲ. ಸರೀನಾ?
ಜೀವಶಾಸ್ತ್ರ ಜ್ಞರು ಈ ಬಗ್ಗೆ ಗಂಭೀರ ಅಧ್ಯಯನ ನಡೆಸಿದ್ದು, ಸಾಕು ಕೋಳಿಗಳು ಮೊಟ್ಟ ಮೊದಲು ಕಂಡುಬಂದದ್ದು ಚೀನಾದಲ್ಲಿ ಎಂದು ತಮ್ಮದೇ ಕೆಲವು ಪುರಾವೆಗಳ ಮೂಲಕ ಸಾಬೀತು-ಪಡಿಸಲು ಹೊರಟಿದ್ದಾರೆ. ಉತ್ತರ ಚೀನಾದಲ್ಲಿ 10 ಸಾವಿರ ವರ್ಷದಷ್ಟು ಹಳೆಯ ಅವಶೇಷ ಸಿಕ್ಕಿರುವುದು ವಾದಕ್ಕೆ ಇಂಬು ನೀಡಿದೆ. ತಾವು ಈವರೆಗೆ ಪರಿಶೀಲಿಸಿರುವ ಎಲ್ಲ ಪುರಾತನ ಕೋಳಿಗಳ ಡಿಎನ್‍ಎಗಿಂತ ಉತ್ತರ ಚೀನಾದಲ್ಲಿ ಸಿಕ್ಕಿರುವ ಕೋಳಿಮರಿಯ ಅವಶೇಷದ ಡಿಎನ್‍ಎ ತುಂಬ ಹಳೆಯದು ಎಂದು ಅಧ್ಯಯನದಿಂದ ತೀರ್ಮಾನಿಸಲಾಗಿದೆ.
ದಕ್ಷಿಣ, ಆಗ್ನೇಯ ಏಷ್ಯಾದಲ್ಲೂ ಕೋಳಿ ಗಳ ಪಳೆಯುಳಿಕೆಗಳು ಸಿಕ್ಕಿದ್ದರೂ ಅವುಗಳಡಿಎನ್‍ಎ ಉತ್ತರ ಚೀನಾದ ಡಿಎನ್ಎಗಳಷ್ಟು ಹಳತಲ್ಲ ಎಂದು ವಿಜ್ಞಾನಿಗಳು ವಾದಿಸುತ್ತಾರೆ.
ನ್ಯಾಷನಲ್ ಅಕಾಡೆಮಿ ಆಫ್  ಸೈನ್ಸಸ್ ಪ್ರಕಟಿಸಿರುವ ಈ ವರದಿ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಸಂಪೂರ್ಣವಾಗಿ ಅಲ್ಲಗಳೆಯಲು ಯಾರಿಂದಲೂ ಸಾಧ್ಯವಾಗಿಲ್ಲ. 10 ಸಾವಿರ ವರ್ಷ ಹಳೆಯ  ಡಿಎನ್ ಎ ವರದಿ ಆಧರಿಸಿ ನಿರ್ಧರಿಸುವುದು ಅಸಾಧ್ಯ.. ಅಂದಿನ ಹವಾಮಾನ, ಪ್ರಾಕೃತಿಕಪರಿಸ್ಥಿತಿ, ಪ್ರಾಣಿ-ಪಕ್ಷಿ ಮನುಷ್ಯರೆಲ್ಲರ ಆಹಾರ ಪದ್ಧತಿಗಳು ಪೂರ್ತಿ ವಿಭಿನ್ನವಾಗಿದ್ದವು ಎಂದು ಕೆಲವರು ವಾದ ಮಂಡಿಸಿದ್ದಾರೆ. ಒಟ್ಟಾರೆ ಈ ವರದಿ ಮಾನ್ಯತೆ ಪಡೆದಲ್ಲಿ ಚೀನಾ ಮಾಡೆಲ್ ಕೋಳಿಗೆ ಚಿನ್ನದ ಬೆಲೆ ಬಂದರೂ ಅಚ್ಚರಿ ಪಡಬೇಕಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

9/11 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!