ಗ್ಯಾಂಗ್ ರೇಪ್ ಆರೋಪ; ದಕ್ಷಿಣ ಆಫ್ರಿಕಾದಲ್ಲಿ ಮಂಡೇಲ ಮೊಮ್ಮೊಗನ ಬಂಧನ
ನೆಲ್ಸನ್ ಮಂಡೇಲ ಅವರ ಮೊಮ್ಮಗ ಎಂದು ಗುರುತಿಸಲಾಗಿರುವ ಪುರುಷನೊಬ್ಬನನ್ನು ೧೫ ವರ್ಷದ ಬಾಲಕಿಯನ್ನು ರೇಪ್ ಮಾಡಿದ ಆರೋಪದ ಮೇಲೆ
ಜೋಹಾನೆಸ್ ಬರ್ಗ್: ನೆಲ್ಸನ್ ಮಂಡೇಲ ಅವರ ಮೊಮ್ಮಗ ಎಂದು ಗುರುತಿಸಲಾಗಿರುವ ಪುರುಷನೊಬ್ಬನನ್ನು ೧೫ ವರ್ಷದ ಬಾಲಕಿಯನ್ನು ರೇಪ್ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ದಕ್ಷಿಣ ಆಫ್ರಿಕಾ ಪೊಲೀಸರು ಇಂದು ತಿಳಿಸಿದ್ದಾರೆ.
ಮೊಬುಸೋ ಮಂಡೇಲ(೨೪) ಈಗ ಪೊಲೀಸರ ಬಂಧನದಲ್ಲಿದ್ದು ಶುಕ್ರವಾರ ಜಾಮೀನು ವಿಚಾರಣೆಗಾಗಿ ಜೋಹಾನೆಸ್ ಬರ್ಗ್ ಮೆಜೆಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರಾಗಲಿದ್ದಾರೆ ಎಂದು ಪೊಲೀಸ್ ವಕ್ತಾರ ತಿಳಿಸಿದ್ದಾರೆ,
ಜೋಹಾನೆಸ್ ಬರ್ಗ್ ನ ಹೊರವಲಯದ ಗ್ರೀನ್ ಸೈಡ್ ನ ಹೋಟೆಲ್ ಒಂದರಲ್ಲಿ ಆಗಸ್ಟ್ ೭ ರಂದು ಈ ರೇಪ್ ನಡೆದಿದೆ ಎಂದು ಆರೋಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಘಟನೆ ಒಂದು ವಾರದ ನಂತರ ವರದಿಯಾಗಿದ್ದು ಮಂಡೇಲ ಅವರನ್ನು ಶನಿವಾರ ಬಂಧಿಸಲಾಗಿದೆ.
ಮುತ್ಸದ್ಧಿ ನೆಲ್ಸನ್ ಮಂಡೇಲ ಅವರ ೧೭ ಮೊಮ್ಮಕ್ಕಳಲ್ಲಿ ಮುಬುಸೋ ಮಂಡೇಲಾ ಕೂಡ ಒಬ್ಬರು. ಮಂಡೇಲ ತಮ್ಮ ೬೫ನೆಯ ವಯಸ್ಸಿನಲ್ಲಿ ೨೦೧೩ ರಲ್ಲಿ ನಿಧನರಾದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.