ರಿಯಾದ್: ಮೆಕ್ಕಾಗೆ ತೆರಳುವ ಹಜ್ಜ್ ಯಾತ್ರಿಕರು, ವಯಾಗ್ರಾ, ಲೈಂಗಿಕ ಕ್ರೀಮ್, ತೈಲ ಹಾಗೂ ಅಶ್ಲೀಲ ವಸ್ತುಗಳನ್ನು ಕೊಂಡೊಯ್ಯಬಾರದು ಸೌದಿ ಅರೇಬಿಯಾ ಸರ್ಕಾರ ಆದೇಶ ಹೊರಡಿಸಿದೆ.
ಹಜ್ ಕಮಿಟಿಯ ಸಲಹೆ ಪ್ರಕಾರ, ಯಾವುದೇ ರೂಪದಲ್ಲಿ ಮಾದಕದ್ರವ್ಯಗಳನ್ನು ಕೊಂಡೊಯ್ಯುವ ಯಾತ್ರಾರ್ಥಿಗಳಿಗೆ ಪ್ರವೇಶ ನಿರಾಕರಿಸಲಾಗುವುದು ಎಂದು ತಿಳಿದುಬಂದಿದೆ. ಇಷ್ಟೇ ಅಲ್ಲದೇ ರಾಜಕೀಯಕ್ಕೆ ಸಂಬಂಧಿಸಿದ ಸಾಹಿತ್ಯ, ಛಾಯಾಚಿತ್ರಗಳನ್ನು ಕೊಂಡೊಯ್ಯುವುದಕ್ಕೂ ನಿಷೇಧ ವಿಧಿಸಿದೆ. ಆದೇಶವನ್ನು ಮೀರಿ ಇವೆಲ್ಲವನ್ನೂ ಕೊಂಡೊಯ್ದಿದ್ದೇ ಆದಲ್ಲಿ, ಯಾತ್ರಾರ್ಥಿಗಳಿಗೆ ಪ್ರವೇಶ ನಿರಾಕರಿಸುವುದಷ್ಟೇ ಅಲ್ಲದೇ, ಕಾನೂನು ಕ್ರಮ ಜರಿಗಿಸುವ ಎಚ್ಚರಿಕೆಯನ್ನೂ ವಿಧಿಸಲಾಗಿದೆ.
ಮಿತಿಯ ಈ ನಿರ್ಧಾರಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ.16ರಿಂದ ಯಾತ್ರೆ ಆರಂಭವಾಗಿದ್ದು, ಯಾತ್ರಿಗಳು ಧಮರ್ವಾಯು ಲಸಿಕೆ ಹಾಕಿಸಿಕೊಳ್ಳಬೇಕು ಹಾಗೂ ಇತರೆ ಔಷಧಿಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಬೇಕು ಎಂದು ಸೂಚಿಸಲಾಗಿದೆ.