ಲಾಸ್ ಏಂಜಲೀಸ್: ಅಮೆರಿಕ ಅಧ್ಯಕ್ಷ ಒಬಾಮ ಅವರು ನೇಮಕ ಮಾಡಿರುವ 11 ಮಂದಿ ಪೂರ್ಣ- ಕಾಲಿಕ ನ್ಯಾಯಾಧೀಶರ ಪೈಕಿ ಭಾರತೀಯ ಅಮೆರಿಕನ್ ಫೆಡರಲ್ ಜಡ್ಜ್ ವಿನ್ಸ್ ಛಾಬ್ರಿಯಾ (46) ಕೂಡ ಒಬ್ಬರು.
ಕ್ಯಾಲಿಫೋರ್ನಿಯಾ ಫೆಡ ರಲ್ ಕೋರ್ಟ್‍ನ ನ್ಯಾಯಾಧೀಶರ ಸ್ಥಾನಕ್ಕೆ 11 ಮಂದಿಗೆ ಬಡ್ತಿ ನೀಡಿ ಒಬಾಮ ಆದೇಶ ಹೊರಡಿಸಿದ್ದಾರೆ. ಮೊದಲ ಬಾರಿಗೆ ಏಷ್ಯಾ ಅಮೆರಿಕನ್ ಪ್ರಜೆಗಳಿಗೂ ನ್ಯಾಯಾಧೀಶರಾಗುವ ಅವಕಾಶ ಕಲ್ಪಿಸಲಾಗಿದೆ.
ಅಂಥವರಲ್ಲಿ ಸ್ಯಾನ್ ಜೋಸ್‍ನ ಲೂಸಿ ಕೋಹ್, ಲ್ಯಾಟಿನಾದ ವೊನೆ ಗೊನ್ಸಾಲೇಸ್ ರೋಗರ್ಸ್, ಭಾರತೀಯ ಅಮೆರಿಕನ್ ವಿನ್ಸ್ ಛಾಬ್ರಿಯಾ ಕೂಡ ಸೇರಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಹುಟ್ಟಿದ ಛಾಬ್ರಿಯಾ ಅವರ ತಂದೆ, ಮುಂಬೈ ನಿಂದ ಅಲ್ಲಿಗೆ ವಲಸೆ ಹೋಗಿದ್ದರು.