ಸಾಂದರ್ಭಿಕ ಚಿತ್ರ 
ವಿದೇಶ

ಮಗಳಿಗೆ ಪಾರ್ಟಿ ಕೊಡಲು ದರೋಡೆ

ಭಿಕ್ಷೆ ಬೇಡಿ ಆದ್ರೂ ನಿನ್ನ ಚೆನ್ನಾಗ್ ನೋಡ್ಕೊಳ್ತಿ ಅಂತ ನಮ್ಮ ಸಿನಿಮಾಗಳಲ್ಲಿ ಲವ್ ಮಾಡೋ ಹುಡುಗ್ರು ಡೈಲಾಗ್ ಹೊಡೆಯೋದು...

ಫ್ಲೋರಿಡಾ: ಭಿಕ್ಷೆ ಬೇಡಿ ಆದ್ರೂ ನಿನ್ನ ಚೆನ್ನಾಗ್ ನೋಡ್ಕೊಳ್ತಿ  ಅಂತ ನಮ್ಮ ಸಿನಿಮಾಗಳಲ್ಲಿ ಲವ್ ಮಾಡೋ ಹುಡುಗ್ರು ಡೈಲಾಗ್ ಹೊಡೆಯೋದು ನೋಡಿದ್ದೇವೆ. ತಾವು ಪ್ರೀತಿಸೋ ವ್ಯಕ್ತೀನ ಚೆನ್ನಾಗಿ ನೋಡ್ಕೊಳೋಕೆ ಮನುಷ್ಯ ಏನು ಬೇಕಾದ್ರೂ ಮಾಡ್ತಾನೆ. ತಾಯಿ ಪ್ರೀತಿಯೂ ಈ ಥರದ್ದೇ. ಕೂಲಿನಾಲಿ ಮಾಡಿಯಾದ್ರೂ ತಾನು ಉಪವಾಸ ದರೂ ಮಕ್ಕಳನ್ನ ಚೆನ್ನಾಗಿ ನೋಡ್ಕೊಬೇಕು ಅನ್ನೋದು ಅಮ್ಮನ ಗುರಿ ಆಗಿರುತ್ತೆ. ಆದರೆ ಮಗಳಿಗೋಸ್ಕರ ಬ್ಯಾಂಕ್ ದರೋಡೆ ಮಾಡಿದ ಅಮ್ಮನ ಬಗ್ಗೆ ಕೇಳಿದ್ದೀರಾ?

ಇಲ್ಲಿದ್ದಾಳೆ! ಖುದ್ದು ಆಕೆಯೇ ಒಪ್ಪಿಕೊಂಡಿದ್ದಾಳೆ. ಕಳೆದ ಮೇ ತಿಂಗಳಲ್ಲಿ ಅನಾಮತ್ತು ಮೂರು ಬ್ಯಾಂಕ್‍ಗಳಲ್ಲಿ ತಾನು ಹಣದೋಚಿದ್ದಾಗಿ ಆಕೆ ಹೇಳಿಕೊಂಡಿದ್ದಾಳೆ. ಇದಕ್ಕೆ ಕಾರಣ ಅಗೈನ್ ಮಗಳ ಖುಷಿ. ತನ್ನ ಮಗಳ ಗ್ರಾಜ್ಯುಯೇಷನ್ ಪಾರ್ಟಿಗೋಸ್ಕರ ಈ ಕೆಲಸ ಮಾಡಿದ್ದಾಗಿ ಆಕೆ ಹೇಳಿದ್ದಾಳೆ. ಫ್ಲೋರಿಡಾದ ಸಿಂಡಿ ಸ್ಯಾಂಚೆಜ್(50) ಸಿಕ್ಕಿ ಬಿದ್ದು ಫೆಡರಲ್  ಕೋರ್ಟ್‍ನ ಮುಂದೆ ಹಾಜರಾದಾಗ ತನ್ನ ಅಪರಾಧದ ಬಗ್ಗೆ ಒಪ್ಪಿಕೊಂಡ ಈಕೆಗೆ 20 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ.

ಮೂರು ಬ್ಯಾಂಕ್‍ಗಳಲ್ಲಿ ಹಣ ದರೋಡೆ ಮಾಡೋಕೆ ಈಕೆ ತೆಗೆದುಕೊಂಡ ಸಮಯ ಕೇವಲ ಅರ್ಧಗಂಟೆ ಎಂಬುದು ಅಚ್ಚರಿಯ ವಿಷಯ. ಮೇ ತಿಂಗಳ ಒಂದು ದಿನ ಬಿಬಿ ಆ್ಯಂಡ್ ಟಿ ಬ್ಯಾಂಕ್, ವೆಲ್ಸ್ ಫರ್ಗೋ ಬ್ಯಾಂಕ್ ಮತ್ತು ಫ್ಲೋರಿಡಾ ಸೆಂಟ್ರಲ್ ಕ್ರೆಡಿಟ್ ಯೂನಿಯನ್ ಬ್ಯಾಂಕ್‍ನಿಂದ ಒಟ್ಟು ಸುಮಾರು 4 ಲಕ್ಷ ಕದ್ದಿದ್ದು, ಒಂದು ಪಿಜ್ಜಾ ಡೆಲಿವರಿ ಆಗುವುದಕ್ಕಿಂತ ಕಡಿಮೆ ಅವಧಿಯಲ್ಲಿ ತನ್ನ ಮಿಷನ್ ಪೂರೈಸಿದ್ದಾಳೆ ಎಂದು ಪೊಲೀಸರು  ಆಶ್ಚರ್ಯವ್ಯಕ್ತಪಡಿಸಿದ್ದಾರೆ.

ಆದರೆ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಪೊಲೀಸರು ಆಕೆಯನ್ನು ಹಿಡಿಯುವಲ್ಲಿ ಸಫಲರಾಗಿದ್ದು, ಅಲ್ಲಿನ ಪೊಲೀಸ್ ವ್ಯವಸ್ಥೆಯ ದಕ್ಷತೆಗೆ ಸಾಕ್ಷಿಯಾಗಿದೆ. ಮೂರನೇ ರಾಬರಿ ಮಾಡಿ ಆಕೆ ಮನೆ ತಲುಪುವಷ್ಟರಲ್ಲಿ ಪೊಲೀಸರು ಆಕೆಯ ಮನೆಯಲ್ಲಿ ಆಕೆಗಾಗಿ ಕಾಯುತ್ತಿದ್ದರಂತೆ! ಹದಿನೈದು ನಿಮಿಷಗಳಲ್ಲಿ ಮೂರೂ ಬ್ಯಾಂಕ್ ಗಳ ಮ್ಯಾನೇಜರ್‍ಗಳು ಪೊಲೀಸರಿಗೆ ಸ್ಪಷ್ಟ ಮಾಹಿತಿ ನೀಡಿದ್ದರಿಂದ ಇದು ಸಾಧ್ಯವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ