ವಾಶಿಂಗ್ಟನ್: ಅಮೆರಿಕಾದ ದಕ್ಷಿಣ ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್ಡಿನೋ ನಗರದಲ್ಲಿ, ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಬಂದೂಕುಧಾರಿಗಳು ಬುಧವಾರ ಬೆಳಗ್ಗೆ ಸಾಮಾಜಿಕ ಕಾರ್ಯಗಳ ಕೇಂದ್ರದ ಮೇಲೆ ದಾಳಿ ಮಾಡಿದ್ದರಿಂದ ೧೪ ಜನ ಮೃತಪಟ್ಟಿದ್ದಾರೆ. ನಂತರ ಪೊಲೀಸರು ಇಬ್ಬರು ಶಂಕಿತ ಬಂಧೂಕುಧಾರಿಗಳನ್ನು ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ.
ಈ ಶೂಟೌಟ್ ನಡೆಸಿದ ನಂತರ ದಾಳಿಕೋರರು ಕಪ್ಪು ಎಸ್ ಯು ವಿ ಯಲ್ಲಿ ತಪ್ಪಿಸಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕೇಂದ್ರದಲ್ಲಿ ಸಂಶಯಾಸ್ಪದ ವಸ್ತುಗಳು ಇರುವ ಸನ್ನಿವೇಶ ಒದಗಿ ಬಂದಿದ್ದು ಬಾಂಬ್ ನಿಷ್ಕ್ರಿಯದಳ ಶೋಧನೆ ನಡೆಸುತ್ತಿದೆ ಎಂದು ಸ್ಯಾನ್ ಬರ್ನಾರ್ಡಿನೋ ಪೊಲೀಸ್ ನಿರ್ದೇಶಕ ಜ್ಯಾರ್ರಡ್ ಬರ್ಗುನ್ ತಿಳಿಸಿದ್ದಾರೆ.
ಸ್ಯಾನ್ ಬರ್ನಾರ್ಡಿನೋ ಕೇಂದ್ರದಲ್ಲಿ ಕ್ರಿಸ್ಮಸ್ ಔತಣಕೂಟ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ಹೆಚ್ಚಿನ ವಿವರಗಳು ತಿಳಿದುಬರಬೇಕಿದೆ.