ತೆರಿಗೆ ವಿನಾಯಿತಿಗಾಗಿ ಫೇಸ್ಬುಕ್ ಷೇರು ದಾನ ಮಾಡಿಲ್ಲ: ಜುಕರ್ಬರ್ಗ್
ಲಿಮಿಟೆಡ್ ಲೆಬಿಲಿಟಿ ಕಂಪನಿ(ಎಲ್ಎಲ್ಸಿ) ದತ್ತಿ ಸಂಸ್ಥೆಗೆ ಷೇರುಗಳನ್ನು ದಾನ ಮಾಡಿರುವ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ತೆರಿಗೆ ವಿನಾಯಿತಿ..
ಸಾನ್ ಫ್ರಾನ್ಸಿಸ್ಕೊ: ಲಿಮಿಟೆಡ್ ಲೆಬಿಲಿಟಿ ಕಂಪನಿ(ಎಲ್ಎಲ್ಸಿ) ದತ್ತಿ ಸಂಸ್ಥೆಗೆ ಷೇರುಗಳನ್ನು ದಾನ ಮಾಡಿರುವ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ತೆರಿಗೆ ವಿನಾಯಿತಿ ಪಡೆಯಲು ಮುಂದಾಗಿಲ್ಲ ಎಂದು ಹೇಳಿದ್ದಾರೆ.
ಫೇಸ್ಬುಕ್ನ ಶೇ. 99ರಷ್ಟು ಷೇರುಗಳನ್ನು ದತ್ತಿ ಸಂಸ್ಥೆಗೆ ದಾನ ಮಾಡುವ ಮೂಲಕ ತೆರಿಗೆ ವಿನಾಯಿತಿ ಪಡೆಯಲು ಮುಂದಾಗಿದ್ದಾರೆ ಎಂಬ ಆರೋಪವನ್ನು ಜುಕರ್ಬರ್ಗ್ ಅಲ್ಲಗಳೆದಿದ್ದು, ದತ್ತಿ ಸಂಸ್ಥೆ ಸ್ಥಾಪಿಸುವ ಮೂಲಕ ನಾನು ಮತ್ತು ಪತ್ನಿ ಯಾವುದೇ ತೆರಿಗೆ ವಿನಾಯಿತಿ ಪಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜುಕರ್ಬರ್ಗ್ ದಂಪತಿ ಪುತ್ರಿ ಮೆಕ್ಸಿಮಾ ಚಾನ್ ಜುಕರ್ಬರ್ಗ್ ಹೆಸರಿನಲ್ಲಿ ಮಂಗಳವಾರ ದತ್ತಿ ಸಂಸ್ಥೆ ಸ್ಥಾಪಿಸಿದ್ದ ಅದಕ್ಕಾಗಿ ಸುಮಾರು 3 ಲಕ್ಷ ಕೋಟಿ ರು.(ಫೇಸ್ಬುಕ್ನ ಶೇ. 99ರಷ್ಟು ಷೇರುಗಳನ್ನು) ದಾನ ಮಾಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.