ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಇಸ್ಲಾಮಿಕ್ ಸ್ಟೇಟ್ ಉಗ್ರರ ನಿರ್ನಾಮಕ್ಕೆ ಜರ್ಮನಿಯ 1200 ಯೋಧರ ಪಡೆ

ಇಡೀ ಜಗತ್ತನ್ನೇ ತನ್ನ ಉಗ್ರತ್ವದಿಂದ ಬೆದರಿಸುತ್ತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯನ್ನು ಬುಡ ಸಮೇತ ಕಿತ್ತು ಹಾಕಲು ವಿಶ್ವ ಸಮುದಾಯ ಒಗ್ಗೂಡಿವೆ...

ಜರ್ಮನಿ ಯೋಧರು
Vishwanath S
Updated On : 4 Dec 2015, 8:55 am
ಬರ್ಲಿನ್: ಇಡೀ ಜಗತ್ತನ್ನೇ ತನ್ನ ಉಗ್ರತ್ವದಿಂದ ಬೆದರಿಸುತ್ತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯನ್ನು ಬುಡ ಸಮೇತ ಕಿತ್ತು ಹಾಕಲು ವಿಶ್ವ ಸಮುದಾಯ ಒಗ್ಗೂಡಿದ್ದು, ರಷ್ಯಾ, ಬ್ರಿಟನ್ ಬಳಿಕ ಇದೀಗ ಜರ್ಮನಿ ಕೂಡ ಇಸಿಸ್ ವಿರುದ್ಧ ತೊಡೆ ತಟ್ಟಿ ನಿಂತಿದೆ.
ಸಿರಿಯಾದಲ್ಲಿರುವ ಇಸಿಸ್ ಉಗ್ರರ ದಮನಕ್ಕಾಗಿ ಜರ್ಮನಿ 1200 ಯೋಧ ಬಲದ ಪಡೆಯನ್ನು ಸಿದ್ಧಗೊಳಿಸಿದೆ. ಐಸಿಸ್ ಉಗ್ರರ ದಮನ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಪ್ರಸ್ತಾವನೆಗೆ ಜರ್ಮನಿಯ ಸಂಸತ್ ಬುಂಡೆಸ್ಟಾಗ್ ಒಕ್ಕೂರಲ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಜರ್ಮನಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.
ಜರ್ಮನಿಯ 6 ಟಾರ್ನಾಡೋ ಜೆಟ್​ಗಳು ಮತ್ತು ಮರು ಇಂಧನ ಪೂರೈಕೆ ವಿಮಾನಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿವೆ.

Advertisement

Advertisement

ಇಸಿಸ್ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಜರ್ಮನಿಯ ಸಶಸ್ತ್ರ ದಳ ನೇರವಾಗಿ ಭಾಗವಹಿಸದೆ, ಸದ್ಯ ಕಾರ್ಯಾಚರಣನೆ ನಡೆಸುತ್ತಿರುವ ಬ್ರಿಟನ್, ಫ್ರಾನ್ಸ್, ಅಮೆರಿಕ ಮತ್ತು ರಷ್ಯಾದ ಪಡೆಗಳಿಗೆ ಸಹಕಾರಿಯಾಗಿ ಕಾರ್ಯನಿರ್ವಹಿಸಲಿರುವುದಾಗಿ ಜರ್ಮನಿ ಸರ್ಕಾರ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments